ಅಸ್ಟ್ರಾಜೆನೆಕಾದ ಕ್ಯಾನ್ಸರ್ ವಿರೋಧಿ​ ಮಾತ್ರೆ ಓಲಪಾರಿಬ್​ ಹಿಂಪಡೆಯಲು ಡಿಸಿಜಿಐ ಆದೇಶ

ಅಸ್ಟ್ರಾಜೆನೆಕಾದ ಕ್ಯಾನ್ಸರ್​ ವಿರೋಧಿ ಮಾತ್ರ ಓಲಪಾರಿಬ್​ನ್ನು ಹಿಂಪಡೆಯುವಂತೆ ಡಿಸಿಜಿಐ ಸೂಚನೆ ನೀಡಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಕೀಮೋಥೆರಪಿ ಮಾಡಿಸಿಕೊಳ್ಳುವ ರೋಗಿಗಳು, ಹಾಗೂ ಅಂಡಾಶಯ ಹಾಗೂ ಸ್ತನ ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆಯ ನಂತರ ಈ ಮಾತ್ರೆಗಳನ್ನು ನೀಡಲಾಗುತ್ತಿತ್ತು.

ಅಸ್ಟ್ರಾಜೆನೆಕಾದ ಕ್ಯಾನ್ಸರ್ ವಿರೋಧಿ​ ಮಾತ್ರೆ ಓಲಪಾರಿಬ್​ ಹಿಂಪಡೆಯಲು ಡಿಸಿಜಿಐ ಆದೇಶ
ಮಾತ್ರೆಗಳು
Follow us
ನಯನಾ ರಾಜೀವ್
|

Updated on: May 23, 2024 | 10:54 AM

ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರ(DCGI)ವು ಕ್ಯಾನ್ಸರ್​ ಚಿಕಿತ್ಸೆಯಲ್ಲಿ ಬಳಸುವ ಅಸ್ಟ್ರಾಜೆನೆಕಾ(Astrazeneca)ದ ಓಲಪಾರಿಬ್ ಮಾತ್ರೆಗಳನ್ನು ಹಿಂಪಡೆಯಲು ಸೂಚನೆ ನೀಡಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಕೀಮೋಥೆರಪಿ ಮಾಡಿಸಿಕೊಳ್ಳುವ ರೋಗಿಗಳು, ಹಾಗೂ ಅಂಡಾಶಯ ಹಾಗೂ ಸ್ತನ ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆಯ ನಂತರ ಈ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಓಲಪಾರಿಬ್​ ಮಾತ್ರೆಗಳನ್ನು ಹಿಂಪಡೆಯುವಂತೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಿದೆ.

ಸಾಮಾನ್ಯವಾಗಿ ಓಲಪಾರಿಬ್ ಕ್ಯಾನ್ಸರ್ ವಿರೋಧಿ ಔಷಧವಾಗಿದ್ದು ಇದು ಕ್ಯಾನ್ಸರ್​ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದು ಅಂಡಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ಗೆ ಚಿಕಿತ್ಸೆ ನೀಡುತ್ತದೆ. ಈ ಔಷಧಿಯು ಮಾತ್ರೆ ರೂಪದಲ್ಲಿ ಬರುತ್ತದೆ.

ಪ್ರತಿಕೂಲ ಪರಿಣಾಮಗಳ ಸಂಭಾವ್ಯತೆಯ ಕಾರಣದಿಂದಾಗಿ gBRCA  ರೂಪಾಂತರಗಳು ಮತ್ತು ಅಂಡಾಶಯದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಔಷಧವನ್ನು ಮಾರಾಟ ಮಾಡುವುದನ್ನು ನಿಲ್ಲಿಸಲು ತಯಾರಕರನ್ನು ಕೇಳಿದ್ದಾರೆ.

ಇತರ ಅನುಮೋದಿತ ಸೂಚನೆಗಳಿಗಾಗಿ ಔಷಧವನ್ನು ಮಾರಾಟ ಮಾಡುವುದನ್ನು ಮುಂದುವರಿಸಬಹುದು ಎಂದು ಉನ್ನತ ಔಷಧ ನಿಯಂತ್ರಕರು ಹೇಳಿದ್ದಾರೆ. ಡಿಸಿಜಿಐ ಮೇ 16 ರಂದು ನಿಯಂತ್ರಕರಿಗೆ ಪತ್ರ ಕಳುಹಿಸಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆ ಪಡೆದಿರುವ GBRCA ಮ್ಯುಟೇಶನ್ ಮತ್ತು ಅಂಡಾಶಯದ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ 100 mg ಮತ್ತು 150 mg ಓಲಪಾರಿಬ್ ಮಾತ್ರೆಗಳನ್ನು ಈ ಹಿಂದೆ ನಿಡಲಾಗುತ್ತಿತ್ತು ಅದನ್ನು ಹಿಂದೆಗೆದುಕೊಳ್ಳುವಂತೆ ಸೂಚನೆಗಳನ್ನು ಹಿಂತೆಗೆದುಕೊಳ್ಳಲು ಕಂಪನಿ AstraZeneca Pharma India Limitedಗೆ ಅರ್ಜಿಯನ್ನು ಕಳುಹಿಸಿದೆ.

ಮತ್ತಷ್ಟು ಓದಿ: ಅಡ್ಡಪರಿಣಾಮ ಆರೋಪ: ಕೋವಿಶೀಲ್ಡ್​ ಲಸಿಕೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾದ ಅಸ್ಟ್ರಾಜೆನೆಕಾ

ಇದೇ ಮಾರ್ಚ್​19 ಮತ್ತು 20 ರಂದು ಸಿಡಿಸಿಎಸ್‌ಒದಲ್ಲಿ ನಡೆದ ಸಭೆಯಲ್ಲಿ ಎಸ್‌ಇಸಿ (ಆಂಕೊಲಾಜಿ) ತಜ್ಞರೊಂದಿಗೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಸ್ಟ್ರಾಜೆನೆಕಾ 2018 ರಲ್ಲಿ ಓಲಪಾರಿಬ್​ ಅನುಮೋದನೆಯನ್ನು ಪಡೆದುಕೊಂಡಿತ್ತು, ಮಹಿಳೆಯ ಅಂಡಾಶಯ ಅಥವಾ ಫಾಲೋಪಿಯನ್ ಟ್ಯೂಬ್‌ಗಳಲ್ಲಿ ಅಸಹಜ ಕೋಶಗಳು ಬೆಳೆಯಲು ಪ್ರಾರಂಭಿಸಿದಾಗ ಮತ್ತು ನಿಯಂತ್ರಣಕ್ಕೆ ಹೋದಾಗ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಸಂಭವಿಸುತ್ತದೆ. ಅಂಡಾಶಯಗಳು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯ ಭಾಗವಾಗಿದೆ.

ಸ್ತನ ಕೋಶಗಳು ರೂಪಾಂತರಗೊಂಡಾಗ ಮತ್ತು ಕ್ಯಾನ್ಸರ್ ಕೋಶಗಳಾಗಿ ಮಾರ್ಪಟ್ಟಾಗ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ, ಅದು ಗಡ್ಡೆಗಳನ್ನು ಉಂಟು ಮಾಡುತ್ತದೆ. ಇತ್ತೀಚೆಗಷ್ಟೇ ಅಸ್ಟ್ರಾಜೆನೆಕಾದ ಕೊರೊನಾ ಔಷಧಿ ಕೋವಿಶೀಲ್ಡ್​ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ