ಸ್ವಾತಿ ಮಲಿವಾಲ್ ಪ್ರಕರಣ: ಇಂದು ಕೇಜ್ರಿವಾಲ್​ ಪೋಷಕರ ಹೇಳಿಕೆ ಪಡೆಯುವುದಿಲ್ಲ ಎಂದ ಪೊಲೀಸರು

ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತನಿಖೆಯ ಬಿಸಿ ಇದೀಗ ಕೇಜ್ರಿವಾಲ್ ಕುಟುಂಬಕ್ಕೆ ತಲುಪಿದೆ. ಈ ವಿಚಾರದಲ್ಲಿ ದೆಹಲಿ ಪೊಲೀಸರು ಅರವಿಂದ್ ಕೇಜ್ರಿವಾಲ್ ಅವರ ಪೋಷಕರನ್ನು ಇಂದು ವಿಚಾರಣೆ ನಡೆಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿದೆ. ಆದರೆ ಇಂದು ಪೊಲೀಸರು ಕೇಜ್ರಿವಾಲ್ ಪೋಷಕರನ್ನು ವಿಚಾರಣೆ ನಡೆಸುವುದಿಲ್ಲ ಎಂಬ ಮಾಹಿತಿ ಇದೀಗ ಸಿಕ್ಕಿದೆ.

ಸ್ವಾತಿ ಮಲಿವಾಲ್ ಪ್ರಕರಣ: ಇಂದು ಕೇಜ್ರಿವಾಲ್​ ಪೋಷಕರ ಹೇಳಿಕೆ ಪಡೆಯುವುದಿಲ್ಲ ಎಂದ ಪೊಲೀಸರು
ಅರವಿಂದ್ ಕೇಜ್ರಿವಾಲ್
Follow us
ನಯನಾ ರಾಜೀವ್
|

Updated on:May 23, 2024 | 12:38 PM

ಅರವಿಂದ್ ಕೇಜ್ರಿವಾಲ್(Arvind Kejriwal) ಅವರ ನಿವಾಸದಲ್ಲಿ ಅವರ ಆಪ್ತ ಕಾರ್ಯದರ್ಶಿ ವಿಭವ್​ ಕುಮಾರ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್​ ಮೇಲೆ ನಡೆಸಿದ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಪೋಷಕರ ಹೇಳಿಕೆ ಪಡೆಯಲು ದೆಹಲಿ ಪೊಲೀಸರು ಮುಂದಾಗಿದ್ದು ಆದರೆ ಇಂದು ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಸ್ವಾತಿ ಮಲಿವಾಲ್​ಗೆ ಕಪಾಳ ಮೋಕ್ಷ ಮಾಡಿ, ಹೊಟ್ಟೆಗೆ ಒದ್ದಿದ್ದರು ಎಂದು ಚಾರ್ಜ್​ಶೀಟ್​ನಲ್ಲಿ ಬರೆಯಲಾಗಿದೆ. ಆದರೆ ಇಂದು ಪೊಲೀಸರು ಅರವಿಂದ್ ಕೇಜ್ರಿವಾಲ್ ಅವರ ಪೋಷಕರ ಹೇಳಿಕೆ ಪಡೆಯಲು ಬರುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಸಂಸದೆ ಸ್ವಾತಿ ಮಲಿವಾಲ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಕೇಜ್ರಿವಾಲ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಶಿಸುವುದಾಗಿ ತಿಳಿಸಿದ್ದರು.

ಸಚಿವೆ ಅತಿಶಿ ಮಾತನಾಡಿ, ಅರವಿಂದ್ ಕೇಜ್ರಿವಾಲ್ ಅವರ ವೃದ್ಧರು ಮತ್ತು ಅಸ್ವಸ್ಥ ಪೋಷಕರನ್ನು ದೆಹಲಿ ಪೊಲೀಸರು ವಿಚಾರಣೆಗೆ ಕರೆಯುತ್ತಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ತಾಯಿಗೆ 76 ವರ್ಷ. ಅವರ (ಅರವಿಂದ್ ಕೇಜ್ರಿವಾಲ್) ಬಂಧನಕ್ಕೆ ಕೆಲವು ದಿನಗಳ ಮೊದಲು ಅವರು ಆಸ್ಪತ್ರೆಯಲ್ಲಿ ದೀರ್ಘಕಾಲ ಇದ್ದರು, ಅವರ ತಂದೆಗೆ 85 ವರ್ಷ.

ಮತ್ತಷ್ಟು ಓದಿ: Swati Maliwal case: ಸ್ವಾತಿ ಮಲಿವಾಲ್ ಪ್ರಕರಣ ಬಗ್ಗೆ ಮೌನ ಮುರಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಇಂದು ಅರವಿಂದ್ ಕೇಜ್ರಿವಾಲ್ ಮತ್ತು ಅವರ ವೃದ್ಧರು ಮತ್ತು ಅಸ್ವಸ್ಥ ಪೋಷಕರಿಗೆ ಕಿರುಕುಳ ನೀಡುತ್ತಿರುವ ರೀತಿಯಲ್ಲಿ ದೆಹಲಿಯ ಜನರು ಖಂಡಿತವಾಗಿಯೂ ತಮ್ಮ ಮತಗಳಿಂದ ಪ್ರತಿಕ್ರಿಯಿಸುತ್ತಾರೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದಿದ್ದಾರೆ.

ಎಕ್ಸ್​ನಲ್ಲಿ ಟ್ವೀಟ್​ ಮಾಡಿರುವ ಕೇಜ್ರಿವಾಲ್​, ನಾನು ನನ್ನ ಪೋಷಕರು ಮತ್ತು ಹೆಂಡತಿಯೊಂದಿಗೆ ಪೊಲೀಸರಿಗಾಗಿ ಕಾಯುತ್ತಿದ್ದೇನೆ. ನಿನ್ನೆ ಪೊಲೀಸರು ಕರೆ ಮಾಡಿ ನನ್ನ ಪೋಷಕರ ವಿಚಾರಣೆಗೆ ಸಮಯ ಕೇಳಿದ್ದರು. ಆದರೆ ಅವರು ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ ಎಂದು ಬರೆದಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:38 pm, Thu, 23 May 24