ನವದೆಹಲಿ: ಗುಜರಾತ್‌ನ ಭುಜ್‌ನ ಹರಾಮಿ ನಲ್ಲಾದ ಕ್ರೀಕ್ ಪ್ರದೇಶದಲ್ಲಿ 11 ಪಾಕಿಸ್ತಾನಿ ಮೀನುಗಾರಿಕಾ ಬೋಟ್ (Fishing Boat)ಗಳನ್ನು ವಶಪಡಿಸಿಕೊಂಡಿರುವುದಾಗಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ತಿಳಿಸಿದೆ. BSF ನೀಡಿದ ಮಾಹಿತಿಯ ಪ್ರಕಾರ, ಫೆಬ್ರವರಿ 9ರಂದು ಹರಾಮಿ ನಲ್ಲಾದ ಪ್ರದೇಶದಲ್ಲಿ ಪಾಕಿಸ್ತಾನಿ ಮೀನುಗಾರಿಕಾ ಬೋಟ್ಗಳು ಪತ್ತೆಯಾಗಿದ್ದು, ಪಾಕಿಸ್ತಾನಿ ಮೀನುಗಾರರು ಒಳಗೆ ನುಗ್ಗಿರುವ ಮಾಹಿತಿ ಲಭ್ಯವಾಗಿದೆ. “ರಾತ್ರಿಯ ಶೋಧ ಕಾರ್ಯಾಚರಣೆಯಲ್ಲಿ 11 ಪಾಕಿಸ್ತಾನಿ ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಬಿಎಸ್ಎಫ್ ತಿಳಿಸಿದೆ. ಬಿಎಸ್ಎಫ್ ಪ್ರದೇಶದ ಡ್ರೋನ್ ಕಣ್ಗಾವಲು ಸಂದರ್ಭದಲ್ಲಿ ಪಾಕಿಸ್ತಾನದ ಬೋಟ್ಗಳು ಪತ್ತೆಯಾಗಿವೆ.
ಭಾರತೀಯ ಗಡಿ ಭದ್ರತಾ ಪಡೆ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಹರಾಮಿ ನಲ್ಲಾ ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಮೊದಲು 8 ಪಾಕಿಸ್ತಾನಿ ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಗುಜರಾತ್‌ನ ಭುಜ್‌ನ ಹರಾಮಿ ನಲ್ಲಾ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಪ್ರಾರಂಭವಾದ ಶೋಧ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಗುರುವಾರ ಮತ್ತೆ 3 ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಾಕಿಸ್ತಾನದವರು ಅಡಗಿರುವ ಸ್ಥಳವನ್ನು ಕಮಾಂಡೋಗಳು ಹುಡುಕುತ್ತಿದ್ದಾರೆ. ತೀವ್ರವಾದ ಜವುಗು ಪ್ರದೇಶ, ಮ್ಯಾಂಗ್ರೋವ್‌ಗಳು ಮತ್ತು ಉಬ್ಬರವಿಳಿತದ ನೀರು ಸೈನಿಕರ ಕಾರ್ಯವನ್ನು ಸವಾಲಾಗಿಸಿದೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ.
Intrusion of Pakistani fishing boats & fishermen was detected on Feb 9 in the general area of Harami Nalla, Gujarat. During overnight search operations, 11 Pakistani fishing boats were seized. Operation is still in progress: BSF
— ANI (@ANI) February 10, 2022
ಸದ್ಯಕ್ಕೆ ಪಾಕಿಸ್ತಾನಿ ಒಳನುಸುಳುಕೋರರಿಗಾಗಿ ಭಾರೀ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 30 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದ್ದು, ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೇ, ಪಾಕಿಸ್ತಾನದ ಮೀನುಗಾರರು ಈ ಪ್ರದೇಶದಿಂದ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಗುಜರಾತ್ ಕರಾವಳಿಯಲ್ಲಿ ಪಾಕಿಸ್ತಾನದ ಯಾಸೀನ್ ಬೋಟ್ ವಶ; ಅದರಲ್ಲಿದ್ದುದು 10 ಜನರು, 2 ಟನ್ ಮೀನು