ನಿನ್ನೆಯವರೆಗೂ ಸಂಸತ್​​ ಕಲಾಪಕ್ಕೆ ಹಾಜರಾಗಿದ್ದ ಸಂಸದ ಡ್ಯಾನಿಶ್ ಅಲಿಗೆ ಕೊವಿಡ್​ 19; ಇನ್ನೂ ಹಲವು ಸಂಸದರಿಗೆ ಆತಂಕ

| Updated By: Lakshmi Hegde

Updated on: Dec 21, 2021 | 4:34 PM

ನವೆಂಬರ್ 29ರಿಂದ ಚಳಿಗಾಲದ ಅಧಿವೇಶನ ಶುರುವಾಗಿದೆ.  ಇಷ್ಟುದಿನಗಳಲ್ಲಿ ಸಂಸತ್ತಿನಲ್ಲಿ ಯಾರಿಗೂ ಕೊವಿಡ್​ 19 ತಗುಲಿದ ವರದಿಯಾಗಿರಲಿಲ್ಲ. ಇದು ಚಳಿಗಾಲದ ಅಧಿವೇಶನದ ಕೊನೇ ವಾರವಾಗಿದ್ದು, ಡಿಸೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದೆ.

ನಿನ್ನೆಯವರೆಗೂ ಸಂಸತ್​​ ಕಲಾಪಕ್ಕೆ ಹಾಜರಾಗಿದ್ದ ಸಂಸದ ಡ್ಯಾನಿಶ್ ಅಲಿಗೆ ಕೊವಿಡ್​ 19; ಇನ್ನೂ ಹಲವು ಸಂಸದರಿಗೆ ಆತಂಕ
ಡ್ಯಾನಿಶ್ ಅಲಿ
Follow us on

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೀಗ ಕೊರೊನಾ ವೈರಸ್ ಆತಂಕ ಎದುರಾಗಿದೆ. ಸೋಮವಾರದವರೆಗೂ ಕಲಾಪದಲ್ಲಿ ಪಾಲ್ಗೊಂಡಿದ್ದ ಬಹುಜನ ಸಮಾಜವಾದಿ ಪಾರ್ಟಿ ಸಂಸದ ಕನ್ವರ್ ಡ್ಯಾನಿಶ್​ ಅಲಿಯವರಿಗೆ ಕೊವಿಡ್​ 19 ಸೋಂಕು ತಗುಲಿದೆ. ಇವರಿಗೆ ಎರಡೂ ಡೋಸ್​ ಕೊರೊನಾ ಲಸಿಕೆ ಆಗಿದ್ದರೂ ಸೋಂಕು ತಗುಲಿದ್ದು, ಟ್ವೀಟ್ ಮೂಲಕ ತಿಳಿಸಿದ್ದಾರೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲ ಕೊವಿಡ್ 19 ತಪಾಸಣೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. 

ಸದ್ಯ ನನಗೆ ಯಾವುದೇ ಗಂಭೀರ ಲಕ್ಷಣಗಳು ಇಲ್ಲ, ಬೇಗನೇ ಗುಣಮುಖನಾಗುತ್ತೇನೆ ಎಂದು ಹೇಳಿರುವ ಡ್ಯಾನಿಶ್​ ಅಲಿ, ನಾನು ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿದ್ದೆ. ಹೀಗಿದ್ದಾಗ್ಯೂ ಕೂಡ ಕೊವಿಡ್ 19ಗೆ ಒಳಗಾಗಿದ್ದೇನೆ. ಸೋಮವಾರವೂ ಕೂಡ ನಾನು ಕಲಾಪದಲ್ಲಿ ಪಾಲ್ಗೊಂಡಿದ್ದೆ. ಹೀಗಾಗಿ ನನ್ನ ಸಂಪರ್ಕಕ್ಕೆ ಬಂದವರೆಲ್ಲ ಕೂಡಲೇ ಐಸೋಲೇಟ್ ಆಗಿ. ತಪಾಸಣೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.

ನವೆಂಬರ್ 29ರಿಂದ ಚಳಿಗಾಲದ ಅಧಿವೇಶನ ಶುರುವಾಗಿದೆ.  ಇಷ್ಟುದಿನಗಳಲ್ಲಿ ಸಂಸತ್ತಿನಲ್ಲಿ ಯಾರಿಗೂ ಕೊವಿಡ್​ 19 ತಗುಲಿದ ವರದಿಯಾಗಿರಲಿಲ್ಲ. ಇದು ಚಳಿಗಾಲದ ಅಧಿವೇಶನದ ಕೊನೇ ವಾರವಾಗಿದ್ದು, ಡಿಸೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದೆ. ಇದೀಗ ಡ್ಯಾನಿಶ್​ ಅಲಿಗೆ ಕೊವಿಡ್​ 19 ದೃಢಪಟ್ಟಿದ್ದು, ಇನ್ನೂ ಹಲವರು ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ.  ಕೊವಿಡ್ 19 ನೊಂದಿಗೆ ಒಮಿಕ್ರಾನ್ ಕೂಡ ಒಂದೇ ಸಮ ಏರಿಕೆಯಾಗುತ್ತಿದೆ. ಈಗಾಗಲೇ ದೇಶದಲ್ಲಿ 200 ಮಂದಿಯಲ್ಲಿ ಒಮಿಕ್ರಾನ್​ ದೃಢಪಟ್ಟಿದೆ. ಅದರಲ್ಲಿ 77 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: ಶಾದಿ ಡಾಟ್​ ಕಾಮ್​ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ ವಂಚಿಸಿದ ಪತಿ: ಪೊಲೀಸ್​ ಆಯುಕ್ತರಿಗೆ ದೂರು ನೀಡಿದ ಮಹಿಳೆ

Published On - 4:33 pm, Tue, 21 December 21