ಶಾದಿ ಡಾಟ್​ ಕಾಮ್​ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ ವಂಚಿಸಿದ ಪತಿ: ಪೊಲೀಸ್​ ಆಯುಕ್ತರಿಗೆ ದೂರು ನೀಡಿದ ಮಹಿಳೆ

ಶಾದಿ ಡಾಟ್​ ಕಾಮ್​ನಲ್ಲಿ ಪರಿಚಯವಾಗಿ ನಂಬಿಸಿ ಮದುವೆಯಾಗಿ ಪತ್ನಿಯಿಂದಲೇ ಹಣ ದೋಚಿ ವಂಚನೆ ನಡೆಸಿದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಮಹಿಳೆ ಬೆಂಗಳೂರು ನಗರ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ.

ಶಾದಿ ಡಾಟ್​ ಕಾಮ್​ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ ವಂಚಿಸಿದ ಪತಿ: ಪೊಲೀಸ್​ ಆಯುಕ್ತರಿಗೆ ದೂರು ನೀಡಿದ ಮಹಿಳೆ
ರಿಹಾನಾ ಬೇಗಂ ಮತ್ತು ತಹ್ಸೀನ್ ಅಹ್ಮದ್
Follow us
TV9 Web
| Updated By: Pavitra Bhat Jigalemane

Updated on: Dec 21, 2021 | 4:21 PM

ಆನ್ಲೈನ್​ ಪರಿಚಯ, ಪ್ರೀತಿ, ಮದುವೆ ಅನಾಹುತಕ್ಕೆ ಕಾರಣ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕಾಣಬಹದು. ಆದರೂ ವಂಚನೆಹೋಗುವವರು ಇರುವವರೆಗೂ ವಂಚನೆ ಆಡುವವರು ಇರುತ್ತಾರೆ ಎನ್ನುವಂತೆ ವ್ಯಕ್ತಿಯೊಬ್ಬ ಮದುವೆಯಾದ ಪತ್ನಿಗೇ ವಂಚಿಸಿದ ಘಟನೆ ನಡೆದಿದೆ.ಶಾದಿ ಡಾಟ್​ ಕಾಮ್​ನಲ್ಲಿ ಪರಿಚಯವಾಗಿ ನಂಬಿಸಿ ಮದುವೆಯಾಗಿ ಪತ್ನಿಯಿಂದಲೇ ಹಣ ದೋಚಿ ವಂಚನೆ ನಡೆಸಿದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಮಹಿಳೆ ಬೆಂಗಳೂರು ನಗರ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ. ರಿಹಾನಾ ಬೇಗಂ ಮೋಸ ಹೋದ ಮಹಿಳೆ.

ಶಾದಿ ಡಾಟ್​ ಕಾಮ್​ನಲ್ಲಿ ತಹ್ಸೀನ್ ಅಹ್ಮದ್ ಎನ್ನುವಾತನ ಪರಿಚಯವಾಗಿ ರಿಹಾನಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಮದುವೆಯ ಬಳಿಕ ತನ್ನ ಮನೆ ಕನ್ಸ್ಟ್ರಕ್ಷನ್ ನಡೆಯುತ್ತಿದೆ ಎಂದು ತಹ್ಸೀನ್ ಅಹ್ಮದ್ ಪತ್ನಿ ರಿಹಾನಾ ಮನೆಯಲ್ಲಿಯೇ ವಾಸವಾಗಿದ್ದ. ಆದರೆ ಮದುವೆಯಾಗಿ ಒಂದೇ ತಿಂಗಳಿನಲ್ಲಿ ಬ್ಯಸಿನೆಸ್​ ಆರಂಭಿಸಬೇಕು ಎಂದು ಪತ್ನಿ ರಿಹಾನಾ ಬಳಿ ಹಣಕ್ಕಾಗಿ ಪೀಡಿಸಲು ಆರಂಭಿಸಿದ್ದ. ಪತಿಯ ಕಾಟ ತಾಳಲಾರದೆ ರಿಹಾನಾ 2 ಲಕ್ಷ ಹಣ 6 ಲಕ್ಷ ಮೌಲ್ಯದ ಚಿನ್ನಾಭರಣ ನೀಡಿದ್ದಳು. ಅದನ್ನು ತೆಗೆದುಕೊಂಡು ಮನೆಯಿಂದ ಪತಿ ನಾಪತ್ತೆಯಾಗಿದ್ದ. ಮೂರು ತಿಂಗಳಾದರೂ ಪತಿಯ ಬಗ್ಗೆ ಯಾವ ಸುಳಿವೂ ಸಿಗದ ಕಾರಣ ರಾಮಮೂರ್ತಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಬಳಿಕ ಇದೇ ರೀತಿ ತಹ್ಸೀನ್ ಅಹ್ಮದ್ ಐದಾರು ಮದುವೆಯಾಗಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ದೂರು ನೀಡಿ 2 ವರ್ಷವಾದರೂ ವಂಚಿಸಿ ನಾಪತ್ತೆಯಾದ ಪತಿಯ ಬಗ್ಗೆ ಸುಳಿವು ದೊರಕದ ಕಾರಣ ರಿಹಾನಾ ಬೇಗಂ ಇದೀಗ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:

ಬೆಂಗಳೂರು: ದಿನಬಳಕೆ ವಸ್ತುಗಳ ಜತೆಗೆ ಡ್ರಗ್ಸ್ ಪೂರೈಸುತ್ತಿದ್ದ ಇಬ್ಬರ ಬಂಧನ; ಗೋಧಿ ಹಿಟ್ಟಿನ ಬಾಕ್ಸ್, ಕುಕ್ಕರ್ ಒಳಗೆ ಹೆರಾಯಿನ್ ಪತ್ತೆ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ