ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಮಮತಾ ಬ್ಯಾನರ್ಜಿ ಒಬ್ಬಂಟಿಯಾಗುತ್ತಾರೆ..: ಗೃಹ ಸಚಿವ ಅಮಿತ್ ಶಾ
ಟಿಎಂಸಿ ಮಾ, ಮಾಟಿ, ಮನುಷ್ಯ್ ( ತಾಯಿ, ಭೂಮಿ..ಮನುಷ್ಯತ್ವ) ಎಂಬ ಘೋಷಣೆಗಳೊಂದಿಗೆ ಬಾಯಲ್ಲಿ ಬಡಾಯಿ ಕೊಚ್ಚುವ ಟಿಎಂಸಿ ವಾಸ್ತವವಾಗಿ ಸುಲಿಗೆ, ಭ್ರಷ್ಟಾಚಾರ, ಅಶಾಂತಿ ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಅಮಿತ್ ಶಾ ಟೀಕಿಸಿದರು.
ದೆಹಲಿ: ಟಿಎಂಸಿ ಮುಖಂಡರು ಒಬ್ಬೊಬ್ಬರಾಗಿ ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಹೀಗೆ ಮುಂದುವರಿದರೆ ಮುಂದಿನ ವಿಧಾನ ಸಭೆ ಚುನಾವಣೆಯನ್ನು ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಇಂದು ಹೌರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವರ್ಚ್ಯುವಲ್ ಆಗಿ ಭಾಷಣ ಮಾಡಿದ ಅವರು, ದೀದಿ ವಿರುದ್ಧ ಹರಿಹಾಯ್ದರು. ಹಾಗೇ ಇಂದು ಬಿಜೆಪಿಗೆ ಸೇರ್ಪಡೆಯಾದ ಐವರು ಮಾಜಿ ಟಿಎಂಸಿ ಮುಖಂಡರಿಗೆ ಸ್ವಾಗತ ಕೋರಿದರು.
ಟಿಎಂಸಿ ನಾಯಕರು ಒಬ್ಬರ ಬೆನ್ನಿಗೆ ಮತ್ತೊಬ್ಬರಂತೆ ಬಿಜೆಪಿಗೆ ಯಾಕೆ ಸೇರುತ್ತಿದ್ದಾರೆ ಎಂಬ ಬಗ್ಗೆ ಮಮತಾ ಬ್ಯಾನರ್ಜಿ ಚಿಂತನೆ ಮಾಡಬೇಕು.. ಅವರೆಲ್ಲ ಪಕ್ಷ ಬಿಡುತ್ತಿದ್ದಾರೆ ಎಂದರೆ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ವಿಫಲರಾಗಿದ್ದಾರೆ. ಈ ರಾಜ್ಯದ ಜನರಿಗೆ ಬೇಕಾಗಿದ್ದನ್ನು ಕೊಟ್ಟಿಲ್ಲ ಎಂದೇ ಅರ್ಥ. ಹೀಗೆ ಆದರೆ ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಅವರು ಏಕಾಂಗಿಯಾಗುತ್ತಾರೆ ಎಂದು ಹೇಳಿದರು.
ಸಂಬಂಧಿಗಳ ಸೇವೆಯಲ್ಲಿ ತೊಡಗಿದ್ದಾರೆ ! ಮಮತಾ ಬ್ಯಾನರ್ಜಿ ರಾಜ್ಯದ ಜನರ ಸೇವೆ ಮಾಡುತ್ತಿಲ್ಲ.. ಬದಲಾಗಿ ಇಲ್ಲಿರುವ ತನ್ನ ಸೋದರಳಿಯನ ಸೇವೆ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅಮಿತ್ ಶಾ, ಟಿಎಂಸಿ ಮಾ, ಮಾಟಿ, ಮನುಷ್ಯ್ ( ತಾಯಿ, ಭೂಮಿ..ಮನುಷ್ಯತ್ವ) ಎಂಬ ಘೋಷಣೆಗಳೊಂದಿಗೆ ಬಾಯಲ್ಲಿ ಬಡಾಯಿ ಕೊಚ್ಚುವ ಟಿಎಂಸಿ ವಾಸ್ತವವಾಗಿ ಸುಲಿಗೆ, ಭ್ರಷ್ಟಾಚಾರ, ಅಶಾಂತಿ ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದೆ ಎಂದರು. ಹಾಗೇ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅದನ್ನೆಲ್ಲ ನಿರ್ಮೂಲನ ಮಾಡಿ, ಅಭಿವೃದ್ಧಿಯೆಡೆಗೆ ಗಮನ ಕೊಡಲಾಗುವುದು ಎಂದು ಭರವಸೆ ನೀಡಿದರು.
ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಬದಲು ಸ್ಮೃತಿ ಇರಾನಿ ಭೇಟಿ; ಹೌರಹ್ನಲ್ಲಿ ಪ್ರಚಾರ ಸಭೆ
Published On - 5:01 pm, Sun, 31 January 21