ಭಾರತ ಕೇವಲ ರಾಜಕೀಯ ಅಥವಾ ಪ್ರಾದೇಶಿಕ ಅಸ್ತಿತ್ವವಲ್ಲ, ಅದಕ್ಕಿಂತಲೂ ಹೆಚ್ಚು: ಪ್ರಧಾನಿ ನರೇಂದ್ರ ಮೋದಿ
ಸ್ವಾಮಿ ವಿವೇಕಾನಂದ ಭಾರತವನ್ನು, ಶತಮಾನಗಳಿಂದ ಬದುಕುತ್ತಿರುವ ಸಾಂಸ್ಕೃತಿಕ ಪ್ರಜ್ಞೆಯಾಗಿ ಕಂಡರು ಎಂದು ‘ಪ್ರಬುದ್ಧ ಭಾರತ’ ನಿಯತಕಾಲಿಕೆಯ 125ನೇ ವಾರ್ಷಿಕೋತ್ಸವವನ್ನು ಉದ್ದೆಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ದೆಹಲಿ: ಭಾರತ ಎಂದರೆ ಕೇವಲ ರಾಜಕೀಯ ಅಥವಾ ಪ್ರಾದೇಶಿಕ ಅಸ್ತಿತ್ವವಲ್ಲ. ಅದಕ್ಕಿಂತಲೂ ಹೆಚ್ಚು ಎಂದು ಪ್ರಧಾನಿ ನರೇಂದ್ರ ಮೋದಿ ಭಾರತದ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಭಾರತವನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಈ ಬಗ್ಗೆ ತಿಳಿದಿರುತ್ತಾರೆ ಎಂದು ಮೋದಿ, ‘ಪ್ರಬುದ್ಧ ಭಾರತ’ ನಿಯತಕಾಲಿಕೆಯ 125ನೇ ವಾರ್ಷಿಕೋತ್ಸವವನ್ನು ಉದ್ದೆಶಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದ ಭಾರತವನ್ನು, ಶತಮಾನಗಳಿಂದ ಬದುಕುತ್ತಿರುವ ಸಾಂಸ್ಕೃತಿಕ ಪ್ರಜ್ಞೆಯಾಗಿ ಕಂಡರು. ಸವಾಲುಗಳನ್ನು ಎದುರಿಸುತ್ತಾ ಶಕ್ತಿಯುತ ದೇಶವಾಗಿ ಹೊರಹೊಮ್ಮುತ್ತಿರುವ ಭಾರತನ್ನು ವಿವೇಕಾನಂದರು ಕಂಡರು. ನಿಯತಕಾಲಿಕೆಗೆ ‘ಪ್ರಬುದ್ಧ ಭಾರತ’ ಎಂದು ಸ್ವಾಮಿ ವಿವೇಕಾನಂದರು ಹೆಸರಿಟ್ಟರು. ಅವರಿಗೆ ಜಾಗೃತ ರಾಷ್ಟ್ರವನ್ನು ನಿರ್ಮಿಸುವ ಆಶಯವಿತ್ತು ಎಂದು ಮೋದಿ ತಿಳಿಸಿದರು.
‘ಪ್ರಬುದ್ಧ ಭಾರತ’ ವಿವೇಕಾನಂದರು ನಿಕಟ ಸಂಪರ್ಕ ಹೊಂದಿದ್ದ, ಸ್ವತಃ ಅವರೇ ಆರಂಭಿಸಿದ್ದ ವಿಶೇಷ ಮಾಸಿಕ ನಿಯತಕಾಲಿಕೆ. 1896ರಿಂದ ಪ್ರಬುದ್ಧ ಭಾರತ ಪ್ರಕಟವಾಗುತ್ತಿದೆ. ಸಮಾಜ ವಿಜ್ಞಾನ, ಮಾನವೀಯತೆ ನೆಲೆಗಟ್ಟಿನ ವಿಚಾರಗಳು, ಇತಿಹಾಸ, ಮನಃಶಾಸ್ತ್ರ , ಸಂಸ್ಕೃತಿ ಮೊದಲಾದ ವಿಷಯಗಳನ್ನು ಈ ಮಾಸಿಕ ಒಳಗೊಂಡಿದೆ. ಸ್ವಾಮಿ ವೀರೇಶಾನಂದ ಕಳೆದ ಆಗಸ್ಟ್ ತಿಂಗಳಿನಿಂದ ಈ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ.. ‘ವಿವೇಕಾನಂದರು ತೋರಿದ ದಾರಿಯಲ್ಲಿ ನಾವೆಲ್ಲಾ ನಡೆಯುವಂತಾಗಲಿ’
ಸ್ವಾಮಿ ಹರ್ಷಾನಂದರ ಸ್ಮರಣೆ | ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಎಂಬಂತಿದ್ದರು ಗುರುಗಳು
Published On - 6:17 pm, Sun, 31 January 21