ಕೇಂದ್ರ ಸಚಿವ ಕಿರಣ್ ರಿಜಿಜು ಅವರ ನಿವಾಸದ ಕಾಂಪೌಂಡ್​ಗೆ ಕ್ಯಾಬ್ ಡಿಕ್ಕಿ

ಕಾರೊಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರ ನಿವಾಸದ ಕಾಂಪೌಂಡ್​ಗೆ ಡಿಕ್ಕಿ ಹೊಡೆದಿದೆ. ಕಾಂಪೌಂಡ್​ ಗೋಡೆಯು ನುಜ್ಜುಗುಜ್ಜಾಗಿದೆ, ಪೊಲೀಸರು ಕ್ಯಾಬ್ ಚಾಲಕನನ್ನು ಹಿಡಿದು, ನಂತರ ಗುಪ್ತಚರ ಸಂಸ್ಥೆಗಳು ಸುದೀರ್ಘ ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿದರು.  ಕಿರಣ್ ರಿಜಿಜು 9, ಕೃಷ್ಣ ಮೆನನ್ ಮಾರ್ಗದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಅವರ ನಿವಾಸದ ಕಾಂಪೌಂಡ್​ಗೆ ಕ್ಯಾಬ್ ಡಿಕ್ಕಿ
ಕ್ಯಾಬ್
Follow us
ನಯನಾ ರಾಜೀವ್
|

Updated on: Aug 24, 2023 | 2:42 PM

ಕಾರೊಂದು ಕೇಂದ್ರ ಸಚಿವ ಕಿರಣ್ ರಿಜಿಜು(Kiren Rijiju) ಅವರ ನಿವಾಸದ ಕಾಂಪೌಂಡ್​ಗೆ ಡಿಕ್ಕಿ ಹೊಡೆದಿದೆ. ಕಾಂಪೌಂಡ್​ ಗೋಡೆಯು ನುಜ್ಜುಗುಜ್ಜಾಗಿದೆ, ಪೊಲೀಸರು ಕ್ಯಾಬ್ ಚಾಲಕನನ್ನು ಹಿಡಿದು, ನಂತರ ಗುಪ್ತಚರ ಸಂಸ್ಥೆಗಳು ಸುದೀರ್ಘ ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿದರು.  ಕಿರಣ್ ರಿಜಿಜು 9, ಕೃಷ್ಣ ಮೆನನ್ ಮಾರ್ಗದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.

ಬುಧವಾರ, ಆಗಸ್ಟ್ 23 ರಂದು, ವೇಗವಾಗಿ ಬಂದ ಕ್ಯಾಬ್ ಅವರ ಬಂಗಲೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಅದರಲ್ಲಿ ಗೋಡೆಯ ಒಂದು ಭಾಗ ಮುರಿದಿದೆ, ನಂತರ ಪೊಲೀಸರು ಕ್ಯಾಬ್ ಚಾಲಕನನ್ನು ಹಿಡಿದು ವಿಚಾರಣೆ ನಡೆಸಿದರು.

ಮತ್ತಷ್ಟು ಓದಿ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್​ಗಳಿಗೆ ಕಾರು ಡಿಕ್ಕಿ; ಪವಾಡ ಸದೃಶ ರೀತಿಯಲ್ಲಿ ಪಾರಾದ ಯುವಕರು

ಮಾಹಿತಿ ಪ್ರಕಾರ, ರಹೀಮ್ ಖಾನ್ ಎಂಬ ಕ್ಯಾಬ್ ಚಾಲಕ ಹರಿಯಾಣದ ನುಹ್ ನಿವಾಸಿ. ತನ್ನ ಕುಟುಂಬದೊಂದಿಗೆ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ನುಹ್‌ಗೆ ಹೋಗುತ್ತಿದ್ದೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಇದೇ ವೇಳೆ ಅವರ ಕಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರು  ಮನೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಮಾಜಿ ಕಾನೂನು ಸಚಿವ ಕಿರಣ್ ರಿಜಿಜು ಅವರು ಈಗ ನರೇಂದ್ರ ಮೋದಿ ಸರ್ಕಾರದಲ್ಲಿ ಭೂ ವಿಜ್ಞಾನದ ಕ್ಯಾಬಿನೆಟ್ ಸಚಿವರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ