ಪುದುಚೇರಿ: ಸಚಿವ ಸಂಪುಟ ವಿಸ್ತರಿಸಿದ ರಂಗಸ್ವಾಮಿ; ಐವರು ಸಚಿವರಿಂದ ಪ್ರಮಾಣ ವಚನ ಸ್ವೀಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Jun 27, 2021 | 4:15 PM

Puducherry: ಮಂತ್ರಿಮಂಡಲಕ್ಕೆ ಸೇರ್ಪಡೆಗೊಳ್ಳುವ ಇಬ್ಬರು ಬಿಜೆಪಿ ನಾಯಕರಲ್ಲಿ ಒಬ್ಬರು ನಮಶಿವಾಯ ಆಗಿದ್ದು ಅವರು ಚುನಾವಣೆಗೆ ಸ್ವಲ್ಪ ಮೊದಲು ಕಾಂಗ್ರೆಸ್ ತೊರೆದಿದ್ದರು. ಇನ್ನೊಬ್ಬರು ಸಾಯಿ ಜೆ ಸರವಣನ್ ಕುಮಾರ್ ಆಗಿದ್ದಾರೆ.

ಪುದುಚೇರಿ: ಸಚಿವ ಸಂಪುಟ ವಿಸ್ತರಿಸಿದ ರಂಗಸ್ವಾಮಿ; ಐವರು ಸಚಿವರಿಂದ ಪ್ರಮಾಣ ವಚನ ಸ್ವೀಕಾರ
ಪುದುಚೇರಿ ಸಚಿವರ ಪ್ರಮಾಣ ವಚನ
Follow us on

ಪುದುಚೇರಿ: ಪುದುಚೇರಿಯ ಮುಖ್ಯಮಂತ್ರಿಯಾಗಿ ಎನ್. ರಂಗಸ್ವಾಮಿ ಅಧಿಕಾರ ವಹಿಸಿಕೊಂಡ ಐವತ್ತು ದಿನಗಳ ನಂತರ ಬಿಜೆಪಿಯ ಇಬ್ಬರು ಸೇರಿದಂತೆ ಐವರು ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಎನ್ಆರ್ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸುದೀರ್ಘ ಅಧಿಕಾರ ಹಂಚಿಕೆ ಮಾತುಕತೆಗಳು ಶುಕ್ರವಾರ ಮುಕ್ತಾಯಗೊಂಡಿದ್ದು ಸರ್ಕಾರ ರಚನೆಯ ಮೇಲಿನ ಕುತೂಹಲ ಕೊನೆಗೊಂಡಿದೆ.

ಹಿಂದಿನ ಫ್ರೆಂಚ್ ವಸಾಹತು ಪ್ರದೇಶದಲ್ಲಿ ಹೆಚ್ಚು ಉಪಸ್ಥಿತಿಯನ್ನು ಹೊಂದಿರದ ಬಿಜೆಪಿ ಇದೇ ಮೊದಲ ಬಾರಿಗೆ ಸರ್ಕಾರದ ಭಾಗವಾಗುತ್ತಿದೆ.

ಮಂತ್ರಿಮಂಡಲಕ್ಕೆ ಸೇರ್ಪಡೆಗೊಳ್ಳುವ ಇಬ್ಬರು ಬಿಜೆಪಿ ನಾಯಕರಲ್ಲಿ ಒಬ್ಬರು ನಮಶಿವಾಯ ಆಗಿದ್ದು ಅವರು ಚುನಾವಣೆಗೆ ಸ್ವಲ್ಪ ಮೊದಲು ಕಾಂಗ್ರೆಸ್ ತೊರೆದಿದ್ದರು. ಇನ್ನೊಬ್ಬರು ಸಾಯಿ ಜೆ ಸರವಣನ್ ಕುಮಾರ್ ಆಗಿದ್ದಾರೆ.

ಎನ್ಆರ್ ಕಾಂಗ್ರೆಸ್​​ನಿಂದ ಕೆ. ಲಕ್ಷ್ಮೀನಾರಾಯಣನ್, ಸಿ ಡಿಜೀಕೌಮರ್ ಮತ್ತು ಚಂದಿರಾ ಪ್ರಿಯಂಗಾ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಚಂದಿರಾ ಪ್ರಿಯಂಗಾ ನಾಲ್ಕು ದಶಕಗಳಿಗಳ ನಂತರ ಅಧಿಕಾರ ಸ್ವೀಕರಿಸಿದ ಪುದುಚೇರಿಯ ಮೊದಲ ಮಹಿಳಾ ಸಚಿವೆ ಆಗಲಿದ್ದಾರೆ.

ಮುಖ್ಯಮಂತ್ರಿಯಿಂದ ಬುಧವಾರ ಪಟ್ಟಿಯನ್ನು ಸ್ವೀಕರಿಸಿದ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಹೊಸ ಸಚಿವರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಸಚಿವಾಲಯದಲ್ಲಿ ಆರು ಸಚಿವರಿರುತ್ತಾರೆ.
ಶಾಸಕರ ಗುಂಪು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ನಂತರ ವಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾದಾಗಬಿಜೆಪಿ ಎನ್ಆರ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ.


ಚುನಾವಣೆ ಗೆಲವು ನಂತರ ಮುಖ್ಯಮಂತ್ರಿ ರಂಗಸ್ವಾಮಿ ಮೇ 7 ರಂದು ಪ್ರಮಾಣವಚನ ಸ್ವೀಕರಿಸಿದರು. ಆದರೆ ಉಭಯ ಪಕ್ಷಗಳು ಸಚಿವ ಸ್ಥಾನಗಳ ಬಗ್ಗೆ ಗಲಾಟೆ ಮಾಡುತ್ತಿದ್ದರಿಂದ ಕ್ಯಾಬಿನೆಟ್ ರಚನೆಗೆ ಅಡ್ಡಿಯಾಗಿತ್ತು.
ಆರಂಭದಲ್ಲಿ ರಂಗಸ್ವಾಮಿ ಅವರ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಒತ್ತಾಯಿಸಿದ ಬಿಜೆಪಿ ಅಂತಿಮವಾಗಿ ಸ್ಪೀಕರ್ ಹುದ್ದೆಗೆ ಇತ್ಯರ್ಥವಾಯಿತು. ಜೂನ್ 16 ರಂದು ” ಎಂಬಾಲಂ ” ಆರ್ ಸೆಲ್ವಂ ಅವರು ಅವಿರೋಧವಾಗಿ ಆಯ್ಕೆಯಾದರು.

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನಸಭಾ ಸ್ಥಾನಗಳಲ್ಲಿ 10 ಸ್ಥಾನಗಳನ್ನು ಎಐಎನ್‌ಆರ್‌ಸಿ ಗೆದ್ದಿತ್ತು. ಬಿಜೆಪಿ ಆರು ಸ್ಥಾನಗಳನ್ನು ಗೆದ್ದುಕೊಂಡಿತು. ರಾಜ್ಯವನ್ನು ಆಳಿದ ಕಾಂಗ್ರೆಸ್ ತನ್ನ ಸ್ಥಾನಗಳ ಸಂಖ್ಯೆ 15 ರಿಂದ ಎರಡಕ್ಕೆ ಇಳಿದಿದೆ. ಅದರ ಮಿತ್ರ ಪಕ್ಷ ಡಿಎಂಕೆ ಆರು ಸ್ಥಾನಗಳನ್ನು ಗೆದ್ದಿತ್ತು.

ಇದನ್ನೂ ಓದಿ:  Puducherry elections results 2021: ಪುದುಚೇರಿಯಲ್ಲಿ ಎನ್​ಡಿಎ ಒಕ್ಕೂಟಕ್ಕೆ ಮುನ್ನಡೆ; ಒಂದು ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್​

(Cabinet expansion takes place in the Union Territory of Puducherry Fifty days after N Rangasamy took over as the CM)