Mann Ki Baat ನರೇಂದ್ರ ಮೋದಿ ‘ಮನದ ಮಾತು’ ಕೇಳಿ ಕೊವಿಡ್ ಲಸಿಕೆ ಪಡೆದ ವ್ಯಕ್ತಿ

Covid-19 Vaccine: ದೇಶದಲ್ಲಿ ಲಸಿಕೆಗಳನ್ನು ನೀಡುತ್ತಿರುವ ಬಗ್ಗೆ ಅಪಾಯಕಾರಿ ಮಾಹಿತಿ ಹರಡುತ್ತಿದೆ ಎಂದು ನಲವತ್ತಮೂರು ವರ್ಷದ ಹಿರಾವೆ ಮೋದಿಯವರಲ್ಲಿ ಹೇಳಿದರು. ಲಸಿಕೆ ಹಾಕಿದ ನಂತರ ಜನರು ಸಾಯುತ್ತಿದ್ದಾರೆ ಎಂದು ವಾಟ್ಸಾಪ್‌ನಲ್ಲಿ ಸಂದೇಶಗಳು ಬಂದಿವೆ ಎಂದಿದ್ದಾರೆ ಹಿರಾವೆ

Mann Ki Baat ನರೇಂದ್ರ ಮೋದಿ ‘ಮನದ ಮಾತು' ಕೇಳಿ ಕೊವಿಡ್ ಲಸಿಕೆ ಪಡೆದ ವ್ಯಕ್ತಿ
ಲಸಿಕೆ (ಪ್ರಾತಿನಿಧಿಕ ಚಿತ್ರ)
Follow us
| Updated By: ರಶ್ಮಿ ಕಲ್ಲಕಟ್ಟ

Updated on: Jun 27, 2021 | 5:09 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿಯರ ಮಾತಿನಿಂದ ಪ್ರೇರಿತಗೊಂಡು ಮಧ್ಯಪ್ರದೇಶದ ಬೆತುಲ್‌ನ ವ್ಯಕ್ತಿಯೊಬ್ಬರು ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದಲ್ಲದೆ ಇಡೀ ಕುಟುಂಬಕ್ಕೆ ಲಸಿಕೆ ಹಾಕಿಸಿದ್ದಾರೆ. ಬೆತುಲ್ ಜಿಲ್ಲೆಯ ದುಲಾರಿಯಾ ಗ್ರಾಮದ ರಾಜೇಶ್ ಹಿರಾವೆ ಎಂಬ ವ್ಯಕ್ತಿ ಪ್ರಧಾನಮಂತ್ರಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಜತೆ ಮಾತನಾಡಿದ್ದು, ತಾವು ಲಸಿಕೆ ಪಡೆಯಲು ಹಿಂಜರಿದ ಮತ್ತು ಆಮೇಲೆ ಲಸಿಕೆ ಪಡೆದಿರುವ ಬಗ್ಗೆ ಹೇಳಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದ ಅಂಗವಾಗಿ ಪಿಎಂ ಮೋದಿ ಮತ್ತು ಹಿರಾವೆ ನಡುವಿನ ಸಂಭಾಷಣೆಯನ್ನು ಮೊದಲೇ ರೆಕಾರ್ಡ್ ಮಾಡಿ ಭಾನುವಾರ ಪ್ರಸಾರ ಮಾಡಲಾಯಿತು.

ದೇಶದಲ್ಲಿ ಲಸಿಕೆಗಳನ್ನು ನೀಡುತ್ತಿರುವ ಬಗ್ಗೆ ಅಪಾಯಕಾರಿ ಮಾಹಿತಿ ಹರಡುತ್ತಿದೆ ಎಂದು ನಲವತ್ತಮೂರು ವರ್ಷದ ಹಿರಾವೆ ಮೋದಿಯವರಲ್ಲಿ ಹೇಳಿದರು. ಲಸಿಕೆ ಹಾಕಿದ ನಂತರ ಜನರು ಸಾಯುತ್ತಿದ್ದಾರೆ ಎಂದು ವಾಟ್ಸಾಪ್‌ನಲ್ಲಿ ಸಂದೇಶಗಳು ಬಂದಿವೆ ಎಂದಿದ್ದಾರೆ ಹಿರಾವೆ. ಆದರೆ ಈ ಮಾಹಿತಿ ಸುಳ್ಳು ಎಂದು ಹೇಳಿದ ಮೋದಿ  ಕೊರೊನಾವೈರಸ್ ಹರಡುವುದನ್ನು ತಡೆಯುವ ಏಕೈಕ ಮಾರ್ಗ ಲಸಿಕೆ ಎಂದು ಹೇಳಿದ್ದಾರೆ.

ಶುಕ್ರವಾರ ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದ ನಂತರ, ನಾನು ಮತ್ತು ನನ್ನ ಕುಟುಂಬ ಸದಸ್ಯರೊಂದಿಗೆ ಶನಿವಾರ ಕೊರೊನಾವೈರಸ್ ಸೋಂಕು ತಡೆಗಟ್ಟುವ ಲಸಿಕೆ ಪಡೆದಿದ್ದೇವೆ” ಎಂದು ಹಿರಾವೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಪ್ರಧಾನ ಮಂತ್ರಿಯವರ ಕರೆ ನಂತರ, ಹಿರಾವೆ ತಮ್ಮ ಹಳ್ಳಿಯ ಇತರ ಜನರಿಗೆ ಲಸಿಕೆ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ತಮ್ಮ ಗ್ರಾಮದ 127 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಹಿರಾವೆ ಅವರ  ಗ್ರಾಮದಲ್ಲಿ ವಾಸಿಸುವ ಕಿಶೋರಿಲಾಲ್ ಧುರ್ವೆ ಅವರೊಂದಿಗೆ ಪಿಎಂ ಮೋದಿ ಸಂವಹನ ನಡೆಸಿದರು. ತನ್ನ ಸುಮಾರು 100 ವರ್ಷದ ತಾಯಿ ಕೋವಿಡ್ -19 ಲಸಿಕೆಯ ಎರಡೂ ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ. ವಿಜ್ಞಾನವನ್ನು ನಂಬಿ ಎಂದು ಮೋದಿ ಕೇಳಿಕೊಂಡಿದ್ದಾರೆ.

ಕೊವಿಡ್ -19 ರ ಬೆದರಿಕೆ ಉಳಿದಿದೆ, ನಾವು ವ್ಯಾಕ್ಸಿನೇಷನ್ ಬಗ್ಗೆ ಗಮನಹರಿಸಬೇಕು ಮತ್ತು ಕೊವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸಬೇಕು” ಎಂದು ಪಿಎಂ ಮೋದಿ ಹೇಳಿದರು.

ಭಾರತವು ಈ ವರ್ಷ ಜನವರಿ 16 ರಂದು ಕೊವಿಡ್ -19 ವಿರುದ್ಧ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಿತು ಮತ್ತು ಇದುವರೆಗೂ 320 ದಶಲಕ್ಷಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ.

ಇದನ್ನೂ ಓದಿ: Mann ki Baat: ಕೊವಿಡ್ ಲಸಿಕೆ ಪಡೆಯಲು ಹಿಂಜರಿಕೆ ಬೇಡ, ಲಸಿಕೆ ಪಡೆದುಕೊಳ್ಳಿ: ನರೇಂದ್ರ ಮೋದಿ

ಇದನ್ನೂ ಓದಿ: Mann Ki Baat: ‘ಮೊದಲು ಎಲ್ಲರಿಗೂ ಲಸಿಕೆ ಕೊಡಿ..ನಂತರ ಮನ್​ ಕೀ ಬಾತ್​ನಲ್ಲಿ ಮಾತಾಡಿ’-ರಾಹುಲ್​ ಗಾಂಧಿ

(Encouraged by Narendra Modi on Mann Ki Baat Madhya Pradesh’s man takes Covid-19 vaccine shot)