ಆ ಒಂದು ಕಾರಣಕ್ಕಾಗಿ ಕೆನಡಾ ಭಾರತದ ಮೇಲೆ ಇಂತಹ ಆರೋಪ ಮಾಡುತ್ತಿದೆ: ಎಸ್ ಜೈಶಂಕರ್

|

Updated on: Sep 27, 2023 | 11:35 AM

ನಮ್ಮ ಮೇಲೆ ಕೆನಡಾ ಆರೋಪ ಮಾಡಲು ಈ ಕಾರಣವಾಗಿರಬಹುದು, ಈ ಹಿಂದೆ ಕೆನಡಾದ ಯುಎಸ್ ರಾಯಭಾರಿ ಡೇವಿಡ್ ಕೊಹೆನ್ ಅವರು ಫೈವ್ ಐಸ್ ಪಾಲುದಾರರಲ್ಲಿ ಗುಪ್ತಚರ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ಭಾರತ ಹೇಳಿತ್ತು. ಅದಕ್ಕಾಗಿ ಟ್ರೂಡೊ ಅವರು ಸಿಖ್ಖ್​​​ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಏಜೆಂಟ್​​​ಗಳ ಕೈವಾಡ ಇದೆ ಎಂದು ಹೇಳುತ್ತಿದ್ದಾರೆ.

ಆ ಒಂದು ಕಾರಣಕ್ಕಾಗಿ ಕೆನಡಾ ಭಾರತದ ಮೇಲೆ ಇಂತಹ ಆರೋಪ ಮಾಡುತ್ತಿದೆ: ಎಸ್ ಜೈಶಂಕರ್
ಜೈಶಂಕರ್​ ಮತ್ತು ಜಸ್ಟಿನ್ ಟ್ರುಡೊ
Follow us on

ನ್ಯೂಯಾರ್ಕ್‌, ಸೆ.27: ಸಿಖ್ಖ್​​​ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಕೈವಾಡ ಇದೆ ಎಂಬ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳಿಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ (ಸಿಎಫ್‌ಆರ್) ಸಂವಾದದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್ ನಾವು ಕೆನಡಾಕ್ಕೆ ಹೇಳಿದ ಮಾತುಗಳು ಇಲ್ಲಿಯು ನಿಮ್ಮ ಮುಂದೆ ಪ್ರಮಾಣಿಕವಾಗಿ ಹಂಚಿಕೊಳ್ಳುವೇ. ಒಂದನೇಯದ್ದು ಇದು ಭಾರತ ಸರ್ಕಾರ ನೀತಿಯಲ್ಲ, ಇದನ್ನು ಕೆನಡಾಕ್ಕೂ ಹೇಳಿದ್ದೇವೆ. ಎರಡನೇಯದ್ದು ಎಲ್ಲ ತನಿಖೆಗೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದ್ದೇವೆ.

ಅಂತರಾಷ್ಟ್ರೀಯ ಒಕ್ಕೂಟಗಳಲ್ಲಿ ರಾಜಕೀಯ ಲಾಭಕ್ಕಾಗಿ ಯಾವುದೇ ಭಯೋತ್ಪಾದನೆಗಳಿಗೆ ಬೆಂಬಲ ನೀಡಿಬಾರದು ಎಂಬುದನ್ನು ಕೆನಡಾ ಮರೆತಿದೆ. ಹೀಗಾಗಿ ಕೆನಡಾ, ವಿಶ್ವಸಂಸ್ಥೆ ಸೇರಿದಂತೆ ಈ ವಿಚಾರದಲ್ಲಿ ಒಕ್ಕೂಟ ರಾಷ್ಟ್ರಗಳ ಸಹಾಯವನ್ನು ಕೇಳುತ್ತಿದೆ ಎಂದು ಹೇಳಿದರು. ನಮ್ಮ ಮೇಲೆ ಕೆನಡಾ ಆರೋಪ ಮಾಡಲು ಈ ಕಾರಣವಾಗಿರಬಹುದು, ಈ ಹಿಂದೆ ಕೆನಡಾದ ಯುಎಸ್ ರಾಯಭಾರಿ ಡೇವಿಡ್ ಕೊಹೆನ್ ಅವರು ಫೈವ್ ಐಸ್ ಪಾಲುದಾರರಲ್ಲಿ ಗುಪ್ತಚರ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ಭಾರತ ಹೇಳಿತ್ತು. ಅದಕ್ಕಾಗಿ ಟ್ರೂಡೊ ಅವರು ಸಿಖ್ಖ್​​​ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಏಜೆಂಟ್​​​ಗಳ ಕೈವಾಡ ಇದೆ ಎಂದು ಹೇಳುತ್ತಿದ್ದಾರೆ.

ಈಗಾಗಲೇ ಭಾರತದ ಭಯೋತ್ಪಾದಕರ ಪಟ್ಟಿಯಲ್ಲಿ ಸಿಖ್ಖ್​​​ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಕೂಡ ಸೇರಿಸಲಾಗಿದೆ. ಆದರೆ ಜೂನ್ 18ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಸಿಖ್ ದೇವಾಲಯದ ಹೊರಗೆ ನಿಜ್ಜರ್​ನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆದರೆ ಇದರಲ್ಲಿ ಭಾರತದ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈವರೆಗೆ ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಕೆನಡಾ ವಾಸ್ತವವಾಗಿ ಪ್ರತ್ಯೇಕತಾವಾದಿ ಶಕ್ತಿಗಳು, ಸಂಘಟಿತ ಅಪರಾಧ, ಹಿಂಸಾತ್ಮಕ ಉಗ್ರವಾದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಜೈಶಂಕರ್​ ಹೇಳಿದ್ದಾರೆ.

ಇದನ್ನೂ ಓದಿ: ಗಲ್ವಾನ್ ಕಣಿವೆ ಘರ್ಷಣೆ ಬಳಿಕ ಭಾರತ-ಚೀನಾ ಸಂಬಂಧ ಹಳಸಿದೆ: ಎಸ್​ ಜೈಶಂಕರ್

ಭಾರತದ ಮೇಲೆ ಕೆನಡಾ ಇಂತಹ ಆರೋಪಗಳನ್ನು ಮಾಡಿದಾಗ ನಾವು ಅವರಲ್ಲಿ ಇದಕ್ಕೆ ಸಾಕ್ಷಿ ನೀಡುವಂತೆ ಹೇಳಿದ್ದೇವು, ಆದರೆ ಈ ಬಗ್ಗೆ ಯಾವುದೇ ಪುರಾವೆಗಳನ್ನು ಕೆನಡಾ ನೀಡಿಲ್ಲ. ಹತ್ಯೆ ಸಂಬಂಧಿಸಿದಂತೆ ಮತ್ತು ಅದರಲ್ಲಿ ಭಾರತದ ಕೈವಾಡ ಇದೆ ಎಂಬ ದಾಖಲೆ ಇದ್ದರೆ ಖಂಡಿತ ಆ ಬಗ್ಗೆ ತನಿಖೆ ನಡೆಸುತ್ತೇವೆ.

ಇನ್ನು ಅಲ್ಲಿನ ಭದ್ರತಾ ವಾತಾವರಣ ಸರಿ ಇಲ್ಲ ಎಂಬ ಕಾರಣಕ್ಕೆ ಹೊಸ ವೀಸಾಗಳನ್ನು ಅಮಾನತುಗೊಳಿಸಿತು ಮತ್ತು ಒಟ್ಟಾವಾದಲ್ಲಿ ದೇಶದ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆಗೊಳಿಸುವಂತೆ ಕೇಳಿಕೊಂಡಿದ್ದು ಎಂದು ಜೈಶಂಕರ್​ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ