ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಯಲ್ಲೇ ಉಳಿದ ನಿಯೋಗ
ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ದೆಹಲಿಗೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ವಿಮಾನ ಸರಿಯಾಗುವವರೆಗೆ ದೆಹಲಿಯಲ್ಲೇ ಕೆನಡಾ ನಿಯೋಗ ಉಳಿದುಕೊಳ್ಳಲಿದೆ. ಸದ್ಯ ಇಂಜಿನಿಯರಿಂಗ್ ತಂಡದಿಂದ ದೋಷ ಸರಿಪಡಿಸಲು ಯತ್ನಿಸಲಾಗುತ್ತಿದೆ.
ನವದೆಹಲಿ, ಸೆಪ್ಟೆಂಬರ್ 10: ಜಿ20 ಶೃಂಗಸಭೆ ಮುಗಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (justin trudeau) ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ವಿಮಾನ ಸರಿಯಾಗುವವರೆಗೆ ದೆಹಲಿಯಲ್ಲೇ ಕೆನಡಾ ನಿಯೋಗ ಉಳಿದುಕೊಳ್ಳಲಿದೆ. ಸ್ಥಳದಲ್ಲಿರುವ ಇಂಜಿನಿಯರಿಂಗ್ ತಂಡದಿಂದ ದೋಷ ಸರಿಪಡಿಸಲು ಯತ್ನಿಸಲಾಗುತ್ತಿದೆ ಎಂದು ಎಎನ್ಐ ಸುದ್ದಿಸಂಸ್ಥೆಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ. ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ದೆಹಲಿಗೆ ಆಗಮಿಸಿದ್ದ ಕೆನಡಾ ಪ್ರಧಾನಿ ಇಂದು ರಾತ್ರಿ 8 ಗಂಟೆಗೆ ವಾಪಸ್ ಹೊರಡುವ ವೇಳೆ ತಾಂತ್ರಿಕ ದೋಷ ಕಂಡುಬಂದಿದೆ.
ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಕೆನಡಾಕೆ ಪ್ರಯಾಣಿಸಬೇಕಿದ್ದ ಸಿಎಫ್ಸಿ 001 ತಾಂತ್ರಿಕ ಸಮಸ್ಯೆ ಇದೆ ಎಂದು ಕೆನಡಾದ ಸಶಸ್ತ್ರ ಪಡೆಗಳಿಂದ ತಿಳಿದುಬಂದಿದೆ. ಈ ಸಮಸ್ಯೆಗಳನ್ನು ರಾತ್ರೋರಾತ್ರಿ ಪರಿಹರಿಸಲಾಗುವುದಿಲ್ಲ, ಪರ್ಯಾಯ ವ್ಯವಸ್ಥೆಗಳನ್ನು ಮಾಡುವವರೆಗೆ ನಮ್ಮ ನಿಯೋಗವು ಭಾರತದಲ್ಲಿಯೇ ಉಳಿಯುತ್ತದೆ ಎಂದು ಕೆನಡಾದ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ಎಎನ್ಐ ಟ್ವೀಟ್
Technical snag on special plane forces Canada PM, delegation to stay in India
Read @ANI Story | https://t.co/vQvYo88uTO#India #CanadaPM #JustinTrudeau #G20India2023 pic.twitter.com/0xGlefIdeJ
— ANI Digital (@ani_digital) September 10, 2023
ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬರುವುದಕ್ಕೂ ಮುನ್ನ ಪ್ರಧಾನಿ ಟ್ರುಡೊ ಅವರು ಜಿ 20 ಶೃಂಗಸಭೆಯ ಹೊರತಾಗಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳು ಮತ್ತು ರಾಜತಾಂತ್ರಿಕರ ವಿರುದ್ಧ ಹಿಂಸಾಚಾರ, ಪ್ರಚೋದನೆ ಕುರಿತು ಟ್ರುಡೊ ಬಳಿ ಪ್ರಧಾನಿ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ದ್ವಿಪಕ್ಷೀಯ ಸಭೆ ಬಗ್ಗೆ ಪ್ರಧಾನಿ ಮೋದಿ ಟ್ವೀಟ್
Met PM @JustinTrudeau on the sidelines of the G20 Summit. We discussed the full range of India-Canada ties across different sectors. pic.twitter.com/iP9fsILWac
— Narendra Modi (@narendramodi) September 10, 2023
ಕೆನಡಾದಲ್ಲಿನ ಭಾರತೀಯ ಸಮುದಾಯ ಮತ್ತು ಅವರ ಪೂಜಾ ಸ್ಥಳಗಳಿಗೆ ಬೆದರಿಕೆ ಹಾಕುತ್ತಿರುವ ಬಗ್ಗೆ ತಿಳಿಸಲಾಗಿದೆ. ಸಂಘಟಿತ ಅಪರಾಧ, ಮಾದಕವಸ್ತು ಸಿಂಡಿಕೇಟ್ಗಳು ಮತ್ತು ಮಾನವ ಕಳ್ಳಸಾಗಣೆಯೊಂದಿಗೆ ಅಂತಹ ಶಕ್ತಿಗಳ ಸಂಬಂಧವು ಕೆನಡಾಕ್ಕೂ ಕಳವಳಕಾರಿಯಾಗಿರಬೇಕು. ಅಂತಹ ಬೆದರಿಕೆಗಳನ್ನು ಎದುರಿಸಲು ಉಭಯ ದೇಶಗಳು ಸಹಕರಿಸುವುದು ಅತ್ಯಗತ್ಯ ಎಂದಿದ್ದಾರೆ.
ಇದನ್ನೂ ಓದಿ: ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧ ಹೊಸ ಎತ್ತರಕ್ಕೆ ಕೊಂಡೊಯ್ಯಲಾಗುವುದು: ಪ್ರಧಾನಿ ನರೇಂದ್ರ ಮೋದಿ
ಕೆನಡಾದಲ್ಲಿ ಹೆಚ್ಚುತ್ತಿರುವ ಖಲಿಸ್ತಾನಿ ಪರ ಅಂಶಗಳ ಉಪಸ್ಥಿತಿಯ ಬಗ್ಗೆ ಭಾರತದ ಕಳವಳವನ್ನು ನಿವಾರಿಸಲು ಕೆನಡಾದ ಪ್ರಧಾನಿ ಪ್ರಯತ್ನಿಸಿದ್ದು, ತಮ್ಮ ದೇಶವು ಯಾವಾಗಲೂ ಹಿಂಸಾಚಾರವನ್ನು ತಡೆಯುತ್ತದೆ ಮತ್ತು ದ್ವೇಷವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕೆಲವರ ಕ್ರಮಗಳು ಇಡೀ ಸಮುದಾಯವನ್ನು ಅಥವಾ ಕೆನಡಾವನ್ನು ಪ್ರತಿನಿಧಿಸುವುದಿಲ್ಲ ಎಂದು ತಿಳಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:34 pm, Sun, 10 September 23