ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಇಂದು ಆಂಧ್ರ ಬಂದ್ಗೆ ಕರೆ ನೀಡಿದ ಟಿಡಿಪಿ
ತೆಲುಗು ದೇಶಂ ಪಕ್ಷ(ಟಿಡಿಪಿ)ರ ವರಿಷ್ಠ ಚಂದ್ರಬಾಬು ನಾಯ್ಡು ಬಂಧನವನ್ನು ವಿರೋಧಿಸಿ ಟಿಡಿಪಿ ಸೋಮವಾರ ಆಂಧ್ರಪ್ರದೇಶದಾದ್ಯಂತ ಬಂದ್ಗೆ ಕರೆ ನೀಡಿದೆ. ಆಂಧ್ರಪ್ರದೇಶದ ಸಿಐಡಿ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ನಾಯ್ಡು ಅವರನ್ನು ಶನಿವಾರ (ಸೆಪ್ಟೆಂಬರ್ 8) ಬಂಧಿಸಿತ್ತು. ಅವರನ್ನು ಭಾನುವಾರ (ಸೆಪ್ಟೆಂಬರ್ 10) ಬೆಳಗ್ಗೆ ವಿಜಯವಾಡದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ತೆಲುಗು ದೇಶಂ ಪಕ್ಷ(ಟಿಡಿಪಿ)ರ ವರಿಷ್ಠ ಚಂದ್ರಬಾಬು ನಾಯ್ಡು(Chandrababu Naidu) ಬಂಧನವನ್ನು ವಿರೋಧಿಸಿ ಟಿಡಿಪಿ ಸೋಮವಾರ ಆಂಧ್ರಪ್ರದೇಶದಾದ್ಯಂತ ಬಂದ್ಗೆ ಕರೆ ನೀಡಿದೆ. ಆಂಧ್ರಪ್ರದೇಶದ ಸಿಐಡಿ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ನಾಯ್ಡು ಅವರನ್ನು ಶನಿವಾರ (ಸೆಪ್ಟೆಂಬರ್ 8) ಬಂಧಿಸಿತ್ತು. ಅವರನ್ನು ಭಾನುವಾರ (ಸೆಪ್ಟೆಂಬರ್ 10) ಬೆಳಗ್ಗೆ ವಿಜಯವಾಡದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಅವರ ಬಂಧನದ ನಂತರ, ನಾಯ್ಡು ಅವರನ್ನು ಶನಿವಾರ-ಭಾನುವಾರ ಮಧ್ಯರಾತ್ರಿ 3:40 ಕ್ಕೆ ವೈದ್ಯಕೀಯ ಪರೀಕ್ಷೆಗಾಗಿ ವಿಜಯವಾಡದ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಾದ ನಂತರ ನಾಯ್ಡು ಅವರನ್ನು ಮತ್ತೆ ಎಸ್‌ಐಟಿ ಕಚೇರಿಗೆ ಕರೆದೊಯ್ದು, ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಖಂಡಿಸಿದರು ಮತ್ತು ಮಾಜಿ ಮುಖ್ಯಮಂತ್ರಿಯನ್ನು ಬೆಂಬಲಿಸಲು ವಿಜಯವಾಡಕ್ಕೆ ತೆರಳಲು ಪ್ರಯತ್ನಿಸಿದರು. ಅವರು ಮೊದಲು ವಿಶೇಷ ವಿಮಾನದಲ್ಲಿ ಹೋಗಲು ಪ್ರಯತ್ನ ಪಟ್ಟರು, ಆದರೆ, ಪೊಲೀಸರು ಅವರನ್ನು ತಡೆದರು.
ಮತ್ತಷ್ಟು ಓದಿ: ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣ: ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ
ಬಳಿಕ ರಸ್ತೆ ಮೂಲಕ ವಿಜಯವಾಡಕ್ಕೆ ತೆರಳಲು ಆರಂಭಿಸಿದ ಪೊಲೀಸರು ಆತನ ಬೆಂಗಾವಲು ವಾಹನವನ್ನು ತಡೆದು ವಶಕ್ಕೆ ತೆಗೆದುಕೊಂಡರು. ಪೊಲೀಸರು ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ.
ಚಂದ್ರಬಾಬು ನಾಯ್ಡು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ತನ್ನ ಸೇವೆಯನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಹುಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ವಿಜಯವಾಡದ ಸ್ಥಳೀಯ ನ್ಯಾಯಾಲಯವು ಭಾನುವಾರ ಚಂದ್ರಬಾಬು ನಾಯ್ಡು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕೌಶಲ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ 300 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಎಪಿ ಸಿಐಡಿ ಮುಖ್ಯಸ್ಥ ಎನ್ ಸಂಜಯ್ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ