Uttarkashi: ಕಂದಕಕ್ಕೆ ಬಿದ್ದ ಕಾರು: 5 ಜನ ಸ್ಥಳದಲ್ಲೇ ಸಾವು, ಒಬ್ಬರಿಗೆ ಗಾಯ
ಉತ್ತರಕಾಶಿಯಿಂದ ಪುರೋಳಕ್ಕೆ ಹೋಗುತ್ತಿದ್ದ ಕಾರು ಆಳವಾದ ಕಮರಿಗೆ ಬಿದ್ದ ಇಬ್ಬರು ಮಹಿಳೆ ಸೇರಿ ಒಟ್ಟು ಐದು ಜನ ಸಾವನ್ನಪ್ಪಿರುವ ಘಟನೆ ಉತ್ತರಕಾಶಿ ಜಿಲ್ಲೆಯ ಬ್ರಹ್ಮಖಾಲ್ ಬಳಿ ಶನಿವಾರ ನಡೆದಿದೆ.
ಉತ್ತರಕಾಶಿ: ಉತ್ತರಕಾಶಿಯಿಂದ ಪುರೋಳಕ್ಕೆ ಹೋಗುತ್ತಿದ್ದ ಕಾರು ಆಳವಾದ ಕಮರಿಗೆ ಬಿದ್ದ ಇಬ್ಬರು ಮಹಿಳೆ ಸೇರಿ ಒಟ್ಟು ಐದು ಜನ ಸಾವನ್ನಪ್ಪಿರುವ ಘಟನೆ ಉತ್ತರಕಾಶಿ ಜಿಲ್ಲೆಯ ಬ್ರಹ್ಮಖಾಲ್ ಬಳಿ ಶನಿವಾರ ನಡೆದಿದೆ. ಈ ಘಟನೆಯಲ್ಲಿ ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಉತ್ತರಕಾಶಿಯಿಂದ ಪುರೋಳಕ್ಕೆ ಹೋಗುತ್ತಿದ್ದ ವಾಹನವು 400 ಮೀಟರ್ ಆಳದ ಕಮರಿಗೆ ಉರುಳಿದೆ. ಧರಸು-ಯಮುಮೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಿಗ್ಗೆ 11 ರ ಸುಮಾರಿಗೆ ಅಪಘಾತ ಸಂಭವಿಸಿದೆ, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಸಾಮ್ಲಿ ದೇವಿ ಎಂಬ ಗಾಯಾಳು ಮಹಿಳೆಯನ್ನು ಬ್ರಹ್ಮಖಾಲ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಪ್ರಥಮ ಚಿಕಿತ್ಸೆಯ ನಂತರ ಉತ್ತರಕಾಶಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಮುಂದಿನ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಪಘಾತದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೂ ಅವರು ಆದೇಶಿಸಿದ್ದಾರೆ.
ಇದನ್ನು ಓದಿ: Uttarakhand: ಚಮೋಲಿಯಲ್ಲಿ ಭೂಕುಸಿತ, 4 ಮಂದಿ ಸಾವು, ಒಬ್ಬರಿಗೆ ಗಾಯ
ಸಾವನ್ನಪ್ಪಿದರವನ್ನು ಬಲ್ಬೀರ್ ಚೌಹಾಣ್, ಪ್ರೇಮ್ ಲಾಲ್, ಗಂಗಿ ದೇವಿ, ಅಮರ್ ಸಿಂಗ್ ಮತ್ತು ರಾಮಕಾಲಿ ಎಂದು ಗುರುತಿಸಲಾಗಿದೆ. ಅವರೆಲ್ಲರೂ ಉಪ್ರಾದಿ, ಪುರೋಲಾ ಮತ್ತು ತಿಲೋತ್ ಸೇರಿದಂತೆ ಉತ್ತರಕಾಶಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದವರು. ಅಪಘಾತಕ್ಕೆ ನಿಖರ ಕಾರಣ ತಿಳಿದಿಲ್ಲ. ಚಮೋಲಿ ಜಿಲ್ಲೆಯಲ್ಲಿ ಪಿಕ್ ಅಪ್ ವಾಹನವೊಂದು ಆಳವಾದ ಕಂದರಕ್ಕೆ ಬಿದ್ದು 12 ಮಂದಿ ಸಾವನ್ನಪ್ಪಿದ ಮರುದಿನ ಈ ಅಪಘಾತ ಸಂಭವಿಸಿದೆ.