ಪ್ರಶ್ನೆಗಾಗಿ ನಗದು ಪ್ರಕರಣ: ಮಹುವಾ ಮೊಯಿತ್ರಾ ಕುರಿತ ನೈತಿಕ ಸಮಿತಿ ವರದಿ ಲೋಕಸಭೆಯಲ್ಲಿ ಮಂಡನೆ

Mahua Moitra: ಲಂಚ ಸ್ವೀಕರಿಸಿ ತಮ್ಮ ಸಂಸದೀಯ ಪೋರ್ಟಲ್ ಬಳಸಿ ಉದ್ಯಮಿ ದರ್ಶನ್ ಹಿರಾನಂದಾನಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಕೊಟ್ಟಿದ್ದಾರೆ ಆರೋಪದ ಮೇಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲು ಸಮಿತಿಯು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.

ಪ್ರಶ್ನೆಗಾಗಿ ನಗದು ಪ್ರಕರಣ: ಮಹುವಾ ಮೊಯಿತ್ರಾ ಕುರಿತ ನೈತಿಕ ಸಮಿತಿ ವರದಿ ಲೋಕಸಭೆಯಲ್ಲಿ ಮಂಡನೆ
ಮಹುವಾ ಮೊಯಿತ್ರಾ
Follow us
ರಶ್ಮಿ ಕಲ್ಲಕಟ್ಟ
|

Updated on: Dec 08, 2023 | 12:58 PM

ದೆಹಲಿ ಡಿಸೆಂಬರ್  08: ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ (Mahua Moitra)ವಿರುದ್ಧದ ಪ್ರಶ್ನೆಗಾಗಿ ನಗದು (cash-for-query) ಆರೋಪದ ಕುರಿತು ಲೋಕಸಭೆಯ ನೈತಿಕ ಸಮಿತಿಯು(Ethics Committee) ಶುಕ್ರವಾರ ಸಂಸತ್ತಿನ ಕೆಳಮನೆಯಲ್ಲಿ ತನ್ನ ವರದಿಯನ್ನು ಮಂಡಿಸಿದೆ. ಸಮಿತಿಯ ಮುಖ್ಯಸ್ಥ, ಬಿಜೆಪಿ ಸಂಸದ ವಿಜಯ್ ಸೋಂಕರ್ ವರದಿಯನ್ನು ಮಂಡಿಸಿದ್ದಾರೆ. ವಿವಾದಾತ್ಮಕ ವರದಿ ಮಂಡನೆಯಾದ ಕೂಡಲೇ ಸದನದಲ್ಲಿ ಗದ್ದಲದ ನಡುವೆ ಲೋಕಸಭೆಯನ್ನು ಎರಡು ಗಂಟೆಗಳ ಕಾಲ ಮುಂದೂಡಲಾಯಿತು.

ಲಂಚದ ಸ್ವೀಕರಿಸಿ ತಮ್ಮ ಸಂಸದೀಯ ಪೋರ್ಟಲ್ ಬಳಸಿ ಉದ್ಯಮಿ ದರ್ಶನ್ ಹಿರಾನಂದಾನಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಕೊಟ್ಟಿದ್ದಾರೆ ಆರೋಪದ ಮೇಲೆ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲು ಸಮಿತಿಯು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಮೊಯಿತ್ರಾ ಅವರು ಉದ್ಯಮಿಯೊಂದಿಗೆ ತಮ್ಮ ರುಜುವಾತುಗಳನ್ನು ಹಂಚಿಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅಲ್ಲಿ ಕೇಳಲಾದ ಪ್ರಶ್ನೆಗಳು ಮೊಯಿತ್ರಾ ಅವರದ್ದೇ ಆಗಿದೆ. ಪೋರ್ಟಲ್‌ನಲ್ಲಿ ತನ್ನ ಪ್ರಶ್ನೆಗಳನ್ನು ಟೈಪ್ ಮಾಡಲು ಉದ್ಯಮಿಯ ಸಿಬ್ಬಂದಿಯನ್ನು ಬಳಸಿದ್ದೇನೆ ಎಂದು ಅವರು ಹೇಳಿದ್ದಾರೆ. ಯಾವುದೇ ಲಂಚ ಸ್ವೀಕರಿಸಿಲ್ಲ ಅಥವಾ ಯಾವುದೇ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಮಹುವಾ ಹೇಳಿದ್ದಾರೆ. ಏತನ್ಮಧ್ಯೆ ಪ್ರತಿಪಕ್ಷಗಳು ಸದನದಲ್ಲಿ ವರದಿಯ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿವೆ.

ಮಹುವಾ ಮೊಯಿತ್ರಾ ಅವರು ತಮ್ಮ ಲಾಗಿನ್ ಪಾಸ್‌ವರ್ಡ್ ಅನ್ನು ಹಿರಾನಂದಾನಿ ಅವರೊಂದಿಗೆ ಹಂಚಿಕೊಳ್ಳುವ ಮೂಲಕ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ಹೇಳಿಕೊಂಡಿದೆ.

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಕೀಯ ಬೇಡ ಎಂದು ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಹೇಳಿದ್ದಾರೆ. ‘ಇದರಲ್ಲಿ ಯಾವುದೇ ರಾಜಕೀಯ ಬೇಡ…ರಾಷ್ಟ್ರೀಯ ಭದ್ರತೆಯ ಬಗ್ಗೆ ಪ್ರಶ್ನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇಶದ 140 ಕೋಟಿ ಜನರನ್ನು ಪ್ರತಿನಿಧಿಸುವ ಸಂಸದರು ಪ್ರಶ್ನಾರ್ಹರಾಗುತ್ತಾರೆ.ಈ ನಿರ್ಧಾರವನ್ನು 2018ನೇ ಸಾಲಿನಲ್ಲಿ ಕೈಗೊಳ್ಳಬೇಕು. ಶೀಘ್ರ ಮತ್ತು ಕ್ರಮ ತೆಗೆದುಕೊಳ್ಳಬೇಕು, ”ಎಂದು ಅವರು ಶುಕ್ರವಾರ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.

“ಈ ಸಮಸ್ಯೆ ಬಹಳ ದಿನಗಳಿಂದ ನಡೆಯುತ್ತಿದೆ.. ಇದು ರಾಷ್ಟ್ರದಾದ್ಯಂತ ತಪ್ಪು ಸಂದೇಶವನ್ನು ನೀಡುತ್ತಿದೆ. ಈ ಸರ್ಕಾರ ಸೇಡಿನ ರಾಜಕಾರಣವನ್ನು ಏಕೆ ಮಾಡುತ್ತದೆ? ಪ್ರಧಾನಿ ಮೋದಿ ಚೆನ್ನಾಗಿ ಮಾತನಾಡುತ್ತಾರೆ ಆದರೆ ಅವರ ಭಾಷಣದಲ್ಲಿ ಏಕೆ ಇಷ್ಟು ವ್ಯತ್ಯಾಸವಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಕ್ರಮಗಳ ಬಗ್ಗೆ ಹೇಳುತ್ತೀರಿ. ಇದು ಸಂಸತ್ ನಿಂದ ಅಮಾನತುಗೊಳಿಸುವಷ್ಟು ದೊಡ್ಡ ತಪ್ಪೇನು? ಸದನದಲ್ಲಿ ಆಕೆಯನ್ನು ಎಲ್ಲರ ಮುಂದೆ ಪ್ರಶ್ನಿಸುವಂತಿಲ್ಲ ಇದು ಸರ್ವಾಧಿಕಾರದಂತೆ ಕಾಣುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಪ್ರಶ್ನೆಗಾಗಿ ನಗದು ಪ್ರಕರಣ: ನೈತಿಕ ಸಮಿತಿ ಮುಂದೆ ಹಾಜರಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವರದಿಯು ಸರ್ಕಾರದ ದುಸ್ಸಾಹಸ ಎಂದು ಹೇಳಿದ್ದಾರೆ. ಅವರು ಈ ದುಸ್ಸಾಹಸದಲ್ಲಿ ತೊಡಗಿದರೆ, ಅವರು 2024 ರಲ್ಲಿ ಮರುಚುನಾವಣೆಯಲ್ಲಿ ಮಹುವಾಗೆ 50,000 ಹೆಚ್ಚುವರಿ ಮತಗಳು ಸೇರ್ಪಡೆಯಾಗುತ್ತದೆ ಎಂದು ನಾನು ಹೇಳಬಲ್ಲೆ.ಇದು ನ್ಯಾಯಯುತ ಕಾರ್ಯವಿಧಾನವಾಗಿದೆ ಎಂದು ನಾನು ಭಾವಿಸುವುದಿಲ್ಲ . ನಾವು ಅವರು ಸಂಸತ್ತಿನಲ್ಲಿ ಮುಂದುವರಿಯಬೇಕೆಂದು ಬಯಸುತ್ತೇವೆ. ಇದು ಬಿಜೆಪಿಯ ಸಾಮಾನ್ಯ ಶೈಲಿಯಾಗಿದ್ದು, ಅದರ ವಿರುದ್ಧದ ಧ್ವನಿಯನ್ನು ಮೌನಗೊಳಿಸುವ ಮತ್ತೊಂದು ಪ್ರಯತ್ನವಾಗಿದೆ. ನಾವು ಇದನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ