AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣು ಮಗಳ ಮದುವೆಗಾಗಿ ಕೂಡಿಟ್ಟಿದ್ದ ಹಣದ ಗಂಟು ಕೈ ತಪ್ಪಿದೆ.. ಅಜ್ಜ-ಅಜ್ಜಿ ಕಣ್ಣೀರು

Termites: ಹೀಗಾಗಿ ಐದು ತಿಂಗಳಿಂದ ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ. ಹೀಗಿರುವಾಗ ಲಕ್ಷ್ಮಣನ ತಂದೆ-ತಾಯಿಗಳು ಮಗನ ಸಾಮಾನುಗಳನ್ನು ಸುರಕ್ಷಿತವಾಗಿಡಲು ಮತ್ತು ಮಗನ ಸಂಕೇತವಾಗಿ ಇಡಲು ಬಯಸಿದ್ದರು. ಅದರ ಭಾಗವಾಗಿ ಆ ಹಿರಿಯ ಅಜ್ಜ-ಅಜ್ಜಿ, ಲಕ್ಷ್ಮಣ್ ಬಳಸುತ್ತಿದ್ದ ಟ್ರಂಕ್ ಬಾಕ್ಸ್ ತೆರೆದು ನೋಡಿದ್ದಾರೆ. ಆಗ ಅವರು ಆತಂಕಕಾರಿ ಕ್ಷಣಗಳನ್ನು ಎದುರಿಸಿದ್ದಾರೆ

ಹೆಣ್ಣು ಮಗಳ ಮದುವೆಗಾಗಿ ಕೂಡಿಟ್ಟಿದ್ದ ಹಣದ ಗಂಟು ಕೈ ತಪ್ಪಿದೆ.. ಅಜ್ಜ-ಅಜ್ಜಿ ಕಣ್ಣೀರು
ಹೆಣ್ಣು ಮಗಳ ಮದುವೆಗಾಗಿ ಕೂಡಿಟ್ಟಿದ್ದ ಹಣದ ಗಂಟು ಕೈ ತಪ್ಪಿದೆ.. ಅಜ್ಜ-ಅಜ್ಜಿ ಕಣ್ಣೀರು
ಸಾಧು ಶ್ರೀನಾಥ್​
|

Updated on: Nov 20, 2023 | 10:28 AM

Share

ಪಾರ್ವತಿಪುರಂ ಮಾನ್ಯಂ ಜಿಲ್ಲೆಯ (Andhra Pradesh) ಬಡ ಕೂಲಿ ಕಾರ್ಮಿಕ ಕುಟುಂಬದಲ್ಲಿ ಅನಿರೀಕ್ಷಿತ ಅಹಿತಕರ ಘಟನೆ ನಡೆದಿದೆ. ಪಾರ್ವತಿಪುರಂ ಮಂಡಲದ ಪುತ್ತೂರಿನಲ್ಲಿ ಆದಿಮೂಲಂ ಲಕ್ಷ್ಮಣ ರಾವ್ ಎಂಬ ರೈತ ಕೂಲಿ ಮಾಡಿ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಲಕ್ಷ್ಮಣನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಅವರು ತಮ್ಮ ಹಿರಿಯ ಮಗಳನ್ನು ಒಳ್ಳೆಯ ವರನಿಗೆ ಮದುವೆ ಮಾಡಿಕೊಡಬೇಕೆಂದು ಬಯಸಿದ್ದರು, ಅದಕ್ಕಾಗಿ ಅವರು ಪ್ರತಿ ರೂಪಾಯಿಯನ್ನು ಎಚ್ಚರಿಕೆಯಿಂದ ಎತ್ತಿಡುತ್ತಿದ್ದರು. ದುಡಿದು ಬಂದ ಹಣದಲ್ಲಿ ಒಂದಷ್ಟು ಹಣವನ್ನು ಮನೆಯ ಖರ್ಚಿಗೆ ಖರ್ಚು (Money) ಮಾಡಿ, ಉಳಿದ ಹಣವನ್ನು ಟ್ರಂಕಿನ ಕವರ್ ಗಳಲ್ಲಿ ಎಚ್ಚರಿಕೆಯಿಂದ ಬಚ್ಚಿಡುತ್ತಿದ್ದರು. ಒಂದಲ್ಲ ಎರಡು ವರ್ಷದ ತನ್ನ ಕಷ್ಟಾರ್ಥದ ದುಡಿಮೆಯನ್ನು ಹೀಗೆ ಜೋಪಾನ ಮಾಡಿ, ಬಚ್ಚಿಟ್ಟಿದ್ದರು.

ಹೀಗೆ ದುಡಿದ ಎರಡು ಲಕ್ಷಕ್ಕೂ ಅಧಿಕ ಹಣವನ್ನು ಪೆಟ್ಟಿಗೆಯಲ್ಲಿಟ್ಟಿದ್ದಾರೆ. ಸುಮಾರು ಐದು ತಿಂಗಳ ಹಿಂದೆ ಲಕ್ಷ್ಮಣರಾವ್ ಅವರು ತಮ್ಮ ಮನೆಯ ಟೆರೇಸ್ ಮೇಲೆ ಮಲಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಲಕ್ಷ್ಮಣನ ಸಾವಿನಿಂದ ಬಡ ಕುಟುಂಬ ದುಃಖದಲ್ಲಿ ಮುಳುಗಿದೆ. ಲಕ್ಷ್ಮಣನ ಸಾವಿನೊಂದಿಗೆ ಆತನ ಹಿರಿಯ ಮಗಳ ಮದುವೆಯೂ ಸಂಕಷ್ಟಕ್ಕೆ ಸಿಲುಕಿತ್ತು.

ಹೀಗಾಗಿ ಐದು ತಿಂಗಳಿಂದ ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ. ಹೀಗಿರುವಾಗ ಲಕ್ಷ್ಮಣನ ತಂದೆ-ತಾಯಿಗಳು ಮಗನ ಸಾಮಾನುಗಳನ್ನು ಸುರಕ್ಷಿತವಾಗಿಡಲು ಮತ್ತು ಮಗನ ಸಂಕೇತವಾಗಿ ಇಡಲು ಬಯಸಿದ್ದರು. ಅದರ ಭಾಗವಾಗಿ ಆ ಹಿರಿಯ ಅಜ್ಜ-ಅಜ್ಜಿ, ಲಕ್ಷ್ಮಣ್ ಬಳಸುತ್ತಿದ್ದ ಟ್ರಂಕ್ ಬಾಕ್ಸ್ ತೆರೆದು ನೋಡಿದ್ದಾರೆ. ಆಗ ಅವರು ಆತಂಕಕಾರಿ ಕ್ಷಣಗಳನ್ನು ಎದುರಿಸಿದ್ದಾರೆ. ಮಗನ ಪೆಟ್ಟಿಗೆ ತೆರೆದು ನೋಡಿದಾಗ ಗೆದ್ದಲು ಹುಳುಗಳ ನಡುವೆ ಮಣ್ಣಿನಲ್ಲಿ ಚೂರುಗಳಾಗಿರುವ ಐನೂರು ಮತ್ತು ನೂರು ರೂಪಾಯಿ ನೋಟುಗಳು ಪತ್ತೆಯಾಗಿವೆ.

Also Read: ಶಬರಿಮಲೆ ಮಾರ್ಗದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕೇರಳ ಅರಣ್ಯ ಇಲಾಖೆಯಿಂದ ನೈಜ-ಸಮಯದ ಮೇಲ್ವಿಚಾರಣೆ, ಅಯ್ಯನ್ ಮೊಬೈಲ್ ಆಪ್

ಕಣ್ಣೆದುರಿಗೆ ಕಂಡ ಆ ಹಣವನ್ನು ನೋಡಿ ಲಕ್ಷ್ಮಣನ ವೃದ್ಧ ಅಪ್ಪ-ಅಮ್ಮ ಕಣ್ಣೀರು ಹಾಕಿದರು. ಒಂದೆಡೆ ಸಂಸಾರಕ್ಕೆ ಒತ್ತಾಸೆ ನೀಡುತ್ತಲೇ ಮತ್ತೊಂದೆಡೆ ಮಗನ ಮೇರು ಜವಾಬ್ದಾರಿ ನೋಡಿದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಲಕ್ಷ್ಮಣ್ ಮೃತಪಟ್ಟು ಐದು ತಿಂಗಳಾದರೂ ಮೃತ ಮಗ ಬಾಕ್ಸ್ ತೆರೆಯದಿರುವುದು ಈ ಅಚಾತುರ್ಯಕ್ಕೆ ಕಾರಣವಾಗಿದೆ. ಕೂಲಿಕಾರ್ಮಿಕರು ಕಷ್ಟಪಟ್ಟು ದುಡಿದ ಹಣ ಗೆದ್ದಲು ಬಾಧೆಯಿಂದ ಹೀಗಾಗಿದ್ದು, ನೋಟಿನ ಕಂತೆಗಳು ತುಂಡಾಗಿರುವುದನ್ನು ಕಂಡು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಒಂದೆಡೆ ಮಗನ ಸಾವು, ಮತ್ತೊಂದೆಡೆ ಮಗ ಪಟ್ಟಿದ್ದ ಕಷ್ಟ ಕಂಡು ವೃದ್ಧ ತಂದೆ-ತಾಯಿ ಇನ್ನಷ್ಟು ಕಂಗಾಲಾಗಿದ್ದಾರೆ. ಆ ಬಡ ಕುಟುಂಬಕ್ಕೆ ಆಗಿರುವ ಅನ್ಯಾಯ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಈ ವಿಚಾರ ಇದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೇಬಿ ಪ್ರೊಡ್ಯೂಸರ್ ಸಹಾಯ.. ಇದರ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಬೇಬಿ ಚಿತ್ರದ ನಿರ್ಮಾಪಕ ಶ್ರೀನಿವಾಸ್ ಕುಮಾರ್ (ಎಸ್‌ಕೆಎನ್) ಬಡ ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಹೀಗಾಗಿರುವುದು ತುಂಬಾ ಬೇಸರದ ಸಂಗತಿ. ಹಾಗೆ ಹಣ ಬಚ್ಚಿಟ್ಟ ನಿಮ್ಮ ಮುಗ್ಧತೆ ನೋಡಿದರೆ ತುಂಬಾ ದುರದೃಷ್ಟವೆನಿಸುತ್ತಿದೆ. ತಂದೆಯ ವಿವರಗಳನ್ನು ಕಳುಹಿಸಿ. ಅವರ ಮಗಳ ಮದುವೆಗೆ ಬೇಕಾದ 2 ಲಕ್ಷ ರೂಪಾಯಿ ನೀಡುತ್ತೇನೆ’ ಎಂದು ಎಸ್ ಕೆಎನ್ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ