ನಕಲಿ ಪ್ರಮಾಣ ಪತ್ರಕ್ಕೆ ಲಂಚ: ಜಾಮಿಯಾ ಮಿಲಿಯಾ ಪ್ರೊಫೆಸರ್ ಖಲೀದ್ ಮೊಯಿನ್​ ಅಂದರ್

| Updated By: ಸಾಧು ಶ್ರೀನಾಥ್​

Updated on: Mar 16, 2022 | 9:54 PM

CBI: ಅನೇಕ ಖಾಸಗಿ ಬಿಲ್ಡರ್​​ಗಳು, ಆರ್ಕಿಟೆಕ್ಟ್​​ಗಳು, ಮಧ್ಯವರ್ತಿಗಳು ಮುಂತಾದವರೊಂದಿಗೆ ಶಾಮೀಲಾಗಿ ಲಂಚ ಪಡೆದು, ಕಟ್ಟಡಗಳ ಬಾಳಿಕೆ ಬಗ್ಗೆ ನಕಲಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣವೊಂದರಲ್ಲಿ 1 ಲಕ್ಷ ರೂಪಾಯಿ ಸ್ವೀಕರಿಸುವಾಗ ಬಲೆ ಬೀಸಿದ ಸಿಬಿಐ ಮೂವರನ್ನೂ ಬಂಧಿಸಿದೆ.

ನಕಲಿ ಪ್ರಮಾಣ ಪತ್ರಕ್ಕೆ ಲಂಚ: ಜಾಮಿಯಾ ಮಿಲಿಯಾ ಪ್ರೊಫೆಸರ್ ಖಲೀದ್ ಮೊಯಿನ್​ ಅಂದರ್
ಲಂಚ: ಜಾಮಿಯಾ ಮಿಲಿಯಾ ಪ್ರೊಫೆಸರ್ ಖಲೀದ್ ಮೊಯಿನ್​ ಅಂದರ್
Follow us on

ನವದೆಹಲಿ: ಸುಮಾರು 1 ಲಕ್ಷ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಸಿಬಿಐ ಬಲೆ ಬೀಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯ ಪ್ರೊಫೆಸರ್ ಖಲೀದ್ ಮೊಯಿನ್​ ಮತ್ತು ಇನ್ನಿಬ್ಬರನ್ನು ಬುಧವಾರ ಬಂಧಿಸಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ (Jamia Milia Islamia University) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮೊಹಮದ್ ಖಲೀದ್ ಮೊಯಿನ್​, ಅವರ ಇಬ್ಬರು ಸಹವರ್ತಿಗಳಾದ ಅಬೀದ್ ಖಾನ್ ಮತ್ತು ಪ್ರಖಾರ್ ಪವಾರ್ ಅವರುಗಳನ್ನು ದೆಹಲಿಯ ಓಕ್ಲಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಸಿಬಿಐ ಅಧಿಕಾರಿಗಳು (Central Bureau of Investigation -CBI) ಬಂಧಿಸಿದರು.

ಗುರುಗಾವ್​​ನಲ್ಲಿ ಚಿಂಟೆಲ್ಸ್ ಪರಡಿಸೊ ಅಪಾರ್ಟ್​​ಮೆಂಟ್ ಗೆ ಸುರಕ್ಷಾ ಪ್ರಮಾಣ ಪತ್ರವನ್ನು ಪ್ರೊಫೆಸರ್ ಮೊಹಮದ್ ಖಲೀದ್ ಮೊಯಿನ್ ಅವರು ವಿತರಿಸಿದ್ದರು. ಆದರೆ ಈ ಅಪಾರ್ಟ್​​ಮೆಂಟ್ ಇತ್ತೀಚೆಗೆ ಕುಸಿದುಬಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಆದರೆ ಅಪಾರ್ಟ್​​ಮೆಂಟ್ ಕುಸಿತಕ್ಕೂ ಪ್ರೊಫೆಸರ್ ಮೊಹಮದ್ ಬಂಧನಕ್ಕೂ ಸಂಬಂಧ ಇಲ್ಲ.

ಅನೇಕ ಖಾಸಗಿ ಬಿಲ್ಡರ್​​ಗಳು, ಆರ್ಕಿಟೆಕ್ಟ್​​ಗಳು, ಮಧ್ಯವರ್ತಿಗಳು ಮುಂತಾದವರೊಂದಿಗೆ ಶಾಮೀಲಾಗಿ ಲಂಚ ಪಡೆದು, ಕಟ್ಟಡಗಳ ಬಾಳಿಕೆ ಬಗ್ಗೆ ನಕಲಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣವೊಂದರಲ್ಲಿ 1 ಲಕ್ಷ ರೂಪಾಯಿ ಸ್ವೀಕರಿಸುವಾಗ ಬಲೆ ಬೀಸಿದ ಸಿಬಿಐ ಮೂವರನ್ನೂ ಬಂಧಿಸಿದೆ.

ಬಳಿಕ, ಆರೋಪಿಗಳ ವಾಸ ಸ್ಥಳಗಳ ಮೇಲೂ ಸಿಬಿಐ ದಾಳಿ ನಡೆಸಿದೆ. ಆ ವೇಳೆ, ಪ್ರೊಫೆಸರ್ ಮೊಹಮದ್ ಅವರಿಗೆ ಸೇರಿದ 30 ಲಕ್ಷ ರೂಪಾಯಿ ನಗದು ಮತ್ತು ಬ್ಯಾಂಕ್​ ಖಾತೆಯೊಂದರಲ್ಲಿ ಒಂದು ಕೋಟಿ 20 ಲಕ್ಷ ರೂಪಾಯಿ ಪತ್ತೆಯಾಗಿದೆ.

Also Read:
ಮಂಗಳೂರು: ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ ಅಂತಾ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

Also Read:
ಮಂಗಳೂರು ಏರ್ ಪೋರ್ಟ್ ಗೆ ಬಾಂಬ್ ಇಟ್ಟಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಆದಿತ್ಯರಾವ್​ಗೆ ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್