CBI Raid: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಚೇರಿ ಮೇಲೆ ಸಿಬಿಐ ದಾಳಿ

ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ದೆಹಲಿಯಲ್ಲಿರುವ ಸೆಕ್ರೆಟರಿಯೇಟ್‌ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ. ಅಧಿಕಾರಿಗಳಿಂದ ಕಾರ್ಯಚರಣೆ ನಡೆಸಲಾಗುತ್ತಿದೆ.

CBI Raid: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಚೇರಿ ಮೇಲೆ ಸಿಬಿಐ ದಾಳಿ
ಮನೀಶ್ ಸಿಸೋಡಿಯಾ Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 14, 2023 | 4:36 PM

ದೆಹಲಿ: ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ( Manish Sisodia) ಅವರ ದೆಹಲಿಯಲ್ಲಿರುವ ಸೆಕ್ರೆಟರಿಯೇಟ್‌ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ. ಅಧಿಕಾರಿಗಳಿಂದ ಕಾರ್ಯಚರಣೆ ನಡೆಸುತ್ತಿದೆ ಎಂದು ANI ವರದಿ ಹೇಳಿದೆ. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಚೇರಿಯ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸುತ್ತಿದೆ ಎಂದು ಎಎಪಿ ನಾಯಕ ಹೇಳಿದ್ದಾರೆ. ಇಂದು ಮತ್ತೆ ಸಿಬಿಐ ನನ್ನ ಕಛೇರಿ ಮೇಲೆ ದಾಳಿ ನಡೆಸಿದ್ದಾರೆ, ಅವರಿಗೆ ಸ್ವಾಗತ. ಅವರು ನನ್ನ ಮನೆ ಮೇಲೆ ದಾಳಿ ಮಾಡಿದರು, ನನ್ನ ಕಚೇರಿ ಮೇಲೆ ದಾಳಿ ಮಾಡಿದರು, ನನ್ನ ಲಾಕರ್ ಅನ್ನು ಶೋಧಿಸಿದರು, ನನ್ನ ಹಳ್ಳಿಯಲ್ಲೂ ತನಿಖೆ ನಡೆಸಿದರು, ನನ್ನ ವಿರುದ್ಧ ಏನೂ ಕಂಡುಬಂದಿಲ್ಲ ಮತ್ತು ನಾನು ಏನು ಅಸ್ತಿ ಮಾಡದ ಕಾರಣ ಏನೂ ಸಿಗುವುದಿಲ್ಲ. ಏನಾದರೂ ತಪ್ಪಾಗಿದೆ ಎಂದು ಶ್ರೀ ಸಿಸೋಡಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇಂದು ದೆಹಲಿ ಡಿಸಿಎಂ ಸಿಸೋಡಿಯಾ ಅವರ ಕಚೇರಿಯಲ್ಲಿ ಯಾವುದೇ ದಾಳಿ ನಡೆಸಿಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಂದ ತನಿಖೆಗೆ ಅನುಮತಿ ಪಡೆದ ನಂತರ ಆಗಸ್ಟ್‌ನಲ್ಲಿ ಸಿಸೋಡಿಯಾ ಅವರ ಮನೆಯನ್ನು ಸಿಬಿಐ ಹಲವು ಬಾರಿ ಶೋಧನೆಗೆ ಒಳಪಡಿಸಿತ್ತು.

ಇದನ್ನು ಓದಿ:Manish Sisodia: ಸಿಬಿಐ ಮುಂದೆ ಇಂದು ಮನೀಶ್ ಸಿಸೋಡಿಯಾ ವಿಚಾರಣೆಗೆ ಹಾಜರು; ಡಿಸಿಎಂ ಬಂಧನದ ಭೀತಿಯಲ್ಲಿ ಆಪ್

ಉಪಮುಖ್ಯಮಂತ್ರಿ ಅವರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಮದ್ಯದಂಗಡಿ ಪರವಾನಗಿಗೆ ಬದಲಾಗಿ ಖಾಸಗಿ ವ್ಯಕ್ತಿಗಳು ರಾಜಕೀಯ ಮುಖಂಡರಿಗೆ ಕಿಕ್ ಬ್ಯಾಕ್ ಮಾಡಿದ್ದಾರೆ. ಇದು ಬಿಜೆಪಿಯ ರಾಜಕೀಯ ಸೇಡು ಎಂದು ಕರೆದಿರುವ ಸಿಸೋಡಿಯಾ ಅವರನ್ನು ಇದೀಗ ಬಂಧಿಸಲಾಗುವುದು ಎಂದು ಎಎಪಿ ಘೋಷಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Sat, 14 January 23