CBSE Exams 2021: ಸಿಬಿಎಸ್​ಇ ಪರೀಕ್ಷೆ ರದ್ದತಿ ಕೋರಿ ವಿದ್ಯಾರ್ಥಿಗಳಿಂದ ಅರ್ಜಿ; ವಿಚಾರಣೆ ಮೇ 31ಕ್ಕೆ ಮುಂದೂಡಿದ ಸುಪ್ರೀಂ

ದೇಶದಲ್ಲಿ ಕೊವಿಡ್ ಸೋಂಕು ತೀವ್ರವಾದ ಹಿನ್ನೆಲೆ ಸಿಬಿಎಸ್​ಇ ಪರೀಕ್ಷೆಗಳನ್ನು ರದ್ದು ಕೋರಿ ಅರ್ಜಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಸಿಬಿಎಸ್​ಇ 12ನೇ ತರಗತಿಯ ಸುಮಾರು 300 ವಿದ್ಯಾರ್ಥಿಗಳು ಪರೀಕ್ಷೆ ನಡೆಸದಂತೆ ಸುಪ್ರೀಕೋರ್ಟ್ ಮೊರೆ ಹೋಗಿದ್ದರು.

CBSE Exams 2021: ಸಿಬಿಎಸ್​ಇ ಪರೀಕ್ಷೆ ರದ್ದತಿ ಕೋರಿ ವಿದ್ಯಾರ್ಥಿಗಳಿಂದ ಅರ್ಜಿ; ವಿಚಾರಣೆ ಮೇ 31ಕ್ಕೆ ಮುಂದೂಡಿದ ಸುಪ್ರೀಂ
ಸುಪ್ರೀಂ​ ಕೋರ್ಟ್
Follow us
guruganesh bhat
| Updated By: Digi Tech Desk

Updated on:May 28, 2021 | 6:38 PM

ದೆಹಲಿ: ಸಿಬಿಎಸ್​ಇ12ನೇ ತರಗತಿ ಪರೀಕ್ಷೆಯನ್ನು ನಡೆಸದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮೇ 31ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಈಗಾಗಲೇ ಸಿಬಿಎಸ್​ಇ ಪರೀಕ್ಷೆ ನಡೆಸಲು ತೀರ್ಮಾನಿಸಿರುವ ಶಿಕ್ಷಣ ಸಚಿವಾಲಯವು ಜೂನ್1ಕ್ಕೆ ವೇಳಾಪಟ್ಟಿ ಮತ್ತು ಪರೀಕ್ಷೆಯ ಸ್ವರೂಪವನ್ನು ಪ್ರಕಟಿಸಲಿದೆ. ಆದರೆ ದೇಶದಲ್ಲಿ ಕೊವಿಡ್ ಸೋಂಕು ತೀವ್ರವಾದ ಹಿನ್ನೆಲೆ ಸಿಬಿಎಸ್​ಇ ಪರೀಕ್ಷೆಗಳನ್ನು ರದ್ದು ಕೋರಿ ಅರ್ಜಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಸಿಬಿಎಸ್​ಇ 12ನೇ ತರಗತಿಯ ಸುಮಾರು 300 ವಿದ್ಯಾರ್ಥಿಗಳು ಪರೀಕ್ಷೆ ನಡೆಸದಂತೆ ಸುಪ್ರೀಕೋರ್ಟ್ ಮೊರೆ ಹೋಗಿದ್ದರು.

ಕೊವಿಡ್ ಪಿಡುಗಿನ ನಡುವೆ ಸಿಬಿಎಸ್​ಇ 12 ತರಗತಿ ಪರೀಕ್ಷೆ ನಡೆಸುವ ಕುರಿತು  ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಒಮ್ಮತದ ನಿರ್ಧಾರ ಹೊರಹೊಮ್ಮಿರಲಿಲ್ಲ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್​ ಜೂನ್ 1ರಂದು ಪರೀಕ್ಷೆ ನಡೆಸುವ ಪದ್ಧತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರಿಸಲಿದ್ದಾರೆ ಎಂದು ಹೇಳಲಾಗಿದೆ. ಸಭೆಯಲ್ಲಿ ಚರ್ಚೆಯಾದ ಅಭಿಪ್ರಾಯಗಳ ಸಾರಾಂಶವನ್ನು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ತಲುಪಿಸಲಾಗಿದ್ದು, ಪ್ರಧಾನ ಮಂತ್ರಿಗಳ ಕಚೇರಿಯಿಂದ ಅಂತಿಮ ನಿರ್ಣಯ ಹೊರಬೀಳಲಿದೆ ಎಂದು ಸಹ ಹೇಳಲಾಗಿದೆ.

ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್​ ಮತ್ತು ಎಲ್ಲಾ ರಾಜ್ಯ ಸರ್ಕಾರಗಳ ಶಿಕ್ಷಣ ಸಚಿವರು ಭಾಗವಹಿಸಿದ್ದ ಸಭೆಯಲ್ಲಿ ಆಫ್​ಲೈನ್ ಪರೀಕ್ಷೆಗಳನ್ನು ನಡೆಸುವ ಕುರಿತು ಎರಡು ಅಭಿಪ್ರಾಯಗಳು ವ್ಯಕ್ತವಾದವು. ಕೊವಿಡ್ ಒಂದು ಹಂತಕ್ಕೆ ಹತೋಟಿಗೆ ಬಂದ ನಂತರ ಜುಲೈನಲ್ಲಿ ಸಿಬಿಎಸ್​​ಇ 12ನೇ ತರಗತಿ ಪರೀಕ್ಷೆ ಸಾಧ್ಯತೆಯ ಕುರಿತು ಹೆಚ್ಚಿನವರ ಒಲವು ವ್ಯಕ್ತವಾಗಿತ್ತು.. ಅಲ್ಲದೇ, ಪರೀಕ್ಷೆಗಳನ್ನು ನಡೆಸಲು 3 ತಿಂಗಳ ಕಾಲಾವಧಿ ಬಳಸಿಕೊಳ್ಳಬೇಕು. ಮೊದಲ ತಿಂಗಳಲ್ಲಿ ಪರೀಕ್ಷಾ ಪೂರ್ವ ಸಿದ್ಧತೆಗೆ, ಇನ್ನುಳಿದ ಎರಡು ತಿಂಗಳನ್ನು ಪರೀಕ್ಷೆ ನಡೆಸಲು ಮತ್ತು ಫಲಿತಾಂಶ ಘೋಷಣೆಗೆ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಅಲ್ಲದೇ, ಕಿರು ಅವಧಿಯ ಪರೀಕ್ಷೆ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಮುಖ 19 ವಿಷಯಗಳಿಗೆ 90 ನಿಮಿಷಗಳ ಕಿರು ಅವಧಿಯ ಪರೀಕ್ಷೆ ನಡೆಸಿ, ಮಿಕ್ಕ ವಿಷಯಗಳಿಗೆ ವಿದ್ಯಾರ್ಥಿಗಳ ಈವರೆಗಿನ ಆಧಾರದ ಮೇಲೆ ಅಂಕಗಳನ್ನು ನೀಡುವ ಕುರಿತೂ ಚರ್ಚಿಸಲಾಗಿತ್ತು.

ಇದನ್ನೂ ಓದಿ: ಡಿಆರ್‌ಡಿಒದ ಆಂಟಿ-ಕೊವಿಡ್ ಡ್ರಗ್ ಪ್ಯಾಕೆಟ್​ಗೆ ₹990; ಸರ್ಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಲಭ್ಯ 

ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಂದರಲ್ಲೇ ಈವರೆಗೆ 1350 ಮಕ್ಕಳಲ್ಲಿ ಕೊವಿಡ್ ಸೋಂಕು ದೃಢ

( CBSE class 12 exams Supreme Court adjourns hearing to May 31)

Published On - 4:17 pm, Fri, 28 May 21