Madhulika Rawat ಸೇನಾ ಸಿಬ್ಬಂದಿಯ ಪತ್ನಿ ಮತ್ತು ಮಕ್ಕಳ ಕಲ್ಯಾಣ, ಮಹಿಳೆಯರ ಸಬಲೀಕರಣಕ್ಕೆ ದುಡಿದಿದ್ದರು ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್
Tamil Nadu Helicopter Crash ಮಧುಲಿಕಾ ರಾವತ್ ಅವರು AWWA ಅಧ್ಯಕ್ಷರಾಗಿದ್ದರು. ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ಸೇನಾ ಸಿಬ್ಬಂದಿಯ ಪತ್ನಿಯರು, ಮಕ್ಕಳು ಮತ್ತು ಅವಲಂಬಿತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಎಡಬ್ಲ್ಯುಡಬ್ಲ್ಯುಎ ಭಾರತದ ಅತಿದೊಡ್ಡ ಎನ್ಜಿಒಗಳಲ್ಲಿ ಒಂದಾಗಿದೆ..
ತಮಿಳುನಾಡಿನ ಕುನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನದಲ್ಲಿ(Tamil Nadu Chopper Crash) ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (Bipin Rawat) ಅವರ ಪತ್ನಿ ಮಧುಲಿಕಾ ರಾವತ್ (Madhulika Rawat)ಮೃತಪಟ್ಟಿದ್ದಾರೆ. ಮಧುಲಿಕಾ ರಾವತ್ ಅವರು AWWA (Army Wives Welfare Association) ಅಧ್ಯಕ್ಷರಾಗಿದ್ದರು. ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ಸೇನಾ ಸಿಬ್ಬಂದಿಯ ಪತ್ನಿಯರು, ಮಕ್ಕಳು ಮತ್ತು ಅವಲಂಬಿತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಎಡಬ್ಲ್ಯುಡಬ್ಲ್ಯುಎ ಭಾರತದ ಅತಿದೊಡ್ಡ ಎನ್ಜಿಒಗಳಲ್ಲಿ ಒಂದಾಗಿದೆ. ಮಧುಲಿಕಾ ರಾವತ್ ವೀರ ನಾರಿಗಳು (ಸೇನಾ ವಿಧವೆಯರು) ಮತ್ತು ವಿಕಲಚೇತನ ಮಕ್ಕಳಿಗೆ ಸಹಾಯ ಮಾಡುವ ಅನೇಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿಯಾನಗಳ ಭಾಗವಾಗಿದ್ದಾರೆ. ಮಧುಲಿಕಾ ರಾವತ್ ಅವರು ಸೇನಾ ಸಿಬ್ಬಂದಿಯ ಪತ್ನಿಯರನ್ನು ಸಬಲೀಕರಣಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದವರು. ಬ್ಯೂಟಿಷಿಯನ್ ಕೋರ್ಸ್‌ಗಳ ಜೊತೆಗೆ ಟೈಲರಿಂಗ್, ಹೆಣಿಗೆ ಮತ್ತು ಬ್ಯಾಗ್ ಮೇಕಿಂಗ್ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡಲು ಕೇಕ್ ಮತ್ತು ಚಾಕೊಲೇಟ್ ತಯಾರಿಸುವ ಕೋರ್ಸ್ ಗಳಿಗೂ ಪ್ರೋತ್ಸಾಹ ನೀಡುತ್ತಿದರು. ಇದರ ಜತೆ ಸದಸ್ಯರ ಆರೋಗ್ಯ ಜಾಗೃತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತಿದ್ದರು. ಮಧುಲಿಕಾ ರಾವತ್ ಅವರು ದೆಹಲಿಯಲ್ಲಿ ಶಿಕ್ಷಣ ಪಡೆದಿದ್ದು ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಗಳಿಸಿದ್ದಾರೆ. AWWA ಹೊರತುಪಡಿಸಿ, ಅವರು ಅನೇಕ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುವುದನ್ನು ವಿಶೇಷವಾಗಿ ಕ್ಯಾನ್ಸರ್ ಪೀಡಿತರಿಗಾಗಿ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ.
MRS MADHULIKA RAWAT PRESIDENT ARMY WIVES WELFARE ASSOCIATION pic.twitter.com/lq5bviBUHy
— AWWA.India (@AWWA40071909) June 18, 2018
ಮಧುಲಿಕಾ ರಾವತ್, ಪತಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಬುಧವಾರ (ಡಿ 8) ಮಧ್ಯಾಹ್ನ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿದ್ದರು. ದಂಪತಿಗಳು ಕೂನೂರಿನ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ: Bipin Rawat Death: ಸೇನಾ ಹೆಲಿಕಾಪ್ಟರ್ ಪತನ ದುರಂತ; ಸಿಡಿಎಸ್ ಬಿಪಿನ್ ರಾವತ್ ದುರ್ಮರಣ