CDS Bipin Rawat: ವಿಶ್ವದ ಹಲವೆಡೆ ಎಂಐ 17 ಹೆಲಿಕಾಪ್ಟರ್​ ದುರಂತಗಳ ಸರಮಾಲೆ: ಬಿಕ್ರಮ್ ವೊಹ್ರಾ ಬರಹ

ರಕ್ಷಣ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಪತನಗೊಂಡಿದೆ. ವಿಶ್ವದ ವಿವಿಧ ದೇಶಗಳಲ್ಲಿ ವಿಐಪಿಗಳ ಸಂಚಾರಕ್ಕೆ ಬಳಕೆಯಾಗುತ್ತಿರುವ ಈ ಹೆಲಿಕಾಪ್ಟರ್​ನ ದುರಂತ ಇತಿಹಾಸವನ್ನು ನೆನಪಿಸಿಕೊಂಡಿದ್ದಾರೆ ಹಿರಿಯ ಪತ್ರಕರ್ತ ಬಿಕ್ರಮ್ ವೊಹ್ರಾ.

CDS Bipin Rawat: ವಿಶ್ವದ ಹಲವೆಡೆ ಎಂಐ 17 ಹೆಲಿಕಾಪ್ಟರ್​ ದುರಂತಗಳ ಸರಮಾಲೆ: ಬಿಕ್ರಮ್ ವೊಹ್ರಾ ಬರಹ
ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 08, 2021 | 6:22 PM

ರಕ್ಷಣ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಪತನಗೊಂಡಿದೆ. ವಿಶ್ವದ ವಿವಿಧ ದೇಶಗಳಲ್ಲಿ ವಿಐಪಿಗಳ ಸಂಚಾರಕ್ಕೆ ಬಳಕೆಯಾಗುತ್ತಿರುವ ಈ ಹೆಲಿಕಾಪ್ಟರ್​ನ ದುರಂತ ಇತಿಹಾಸವನ್ನು ನೆನಪಿಸಿಕೊಂಡಿದ್ದಾರೆ ಹಿರಿಯ ಪತ್ರಕರ್ತ ಬಿಕ್ರಮ್ ವೊಹ್ರಾ.

ಅದು ನವೆಂಬರ್ 22, 1963. ಅಮೆರಿಕ ಅಧ್ಯಕ್ಷ ಜಾನ್ ಎಫ್.ಕೆನಡಿ ಅವರ ಹತ್ಯೆ ಸುದ್ದಿಯ ವಿವರಗಳಿಗಾಗಿ ನಾವು ಕಾದುಕುಳಿತಿದ್ದೆವು. ಆಗ ಭಾರತದಲ್ಲಿ ನಡೆದ ಹೆಲಿಕಾಪ್ಟರ್ ದುರಂತದ ಮಾಹಿತಿ ನಮ್ಮನ್ನು ಅಪ್ಪಳಿಸಿತ್ತು. ರಕ್ಷಣಾ ಇಲಾಖೆ ಹೇಳಿಕೆಯೊಂದನ್ನು ಹೊರಡಿಸಿ ಅಲ್ಯೂಟ್ 3 ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟವರ ವಿವರಗಳನ್ನು ನೀಡಿತ್ತು. ಪಶ್ಚಿಮ ಕಮಾಂಡ್​ನ ಕಮಾಂಡಿಂಗ್ ಆಫೀಸರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ದೌಲತ್ ಸಿಂಗ್, ಏರ್​ವೈಸ್ ಮಾರ್ಷಲ್ ಇ.ಡಬ್ಲ್ಯು.ಪಿಂಟೊ, 15 ಕಾರ್ಪ್ಸ್​ನ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಬಿಕ್ರಮ್ ಸಿಂಗ್, ಭೂಸೇನೆಯ 25ನೇ ಇನ್​ಫೆಂಟ್ರಿ ಡಿವಿಷನ್ ಮುಖ್ಯಸ್ಥರಾಗಿದ್ದ ಮೇಜರ್ ಜನರಲ್ ಕೆ.ಎನ್.ಡಿ.ನಾನಾವತಿ, ಮಿಲಿಟರಿ ಕಮಾಂಡರ್ ಆಗಿದ್ದ ಬ್ರಿಗೇಡಿಯರ್ ಎಸ್.ಆರ್.ಓಬೆರಾಯ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಎಸ್​.ಎಸ್.ಸೋಧಿ ಈ ದುರಂತದಲ್ಲಿ ಸಾವನ್ನಪ್ಪಿದ್ದರು. ಅದು ಭಾರತ ಕಂಡ ಅತ್ಯಂತ ಕೆಟ್ಟ ಹೆಲಿಕಾಪ್ಟರ್ ದುರಂತ. ಒಂದು ವೈಮಾನಿಕ ವಾಹನದಲ್ಲಿ ನಿರ್ದಿಷ್ಟವಾಗಿ ಇಷ್ಟೇ ಜನರು ಇರಬೇಕೆಂಬ ನಿಯಮವನ್ನು ಅನಂತರ ಜಾರಿಗೊಳಿಸಲಾಯಿತು.

ಇಷ್ಟಾದ ನಂತರವೂ ಇಂದು ನಾವು ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಬೇಕಾಗಿದೆ.

ವಿಶ್ವದಲ್ಲಿ ಈವರೆಗೆ 12,000ಕ್ಕೂ ಹೆಚ್ಚು MI-17 ಹೆಲಿಕಾಪ್ಟರ್​ಗಳನ್ನು ನಿರ್ಮಿಸಲಾಗಿದೆ. ಭಾರತದಲ್ಲಿ 200ಕ್ಕೂ ಹೆಚ್ಚು ಹೆಲಿಕಾಪ್ಟರ್​ಗಳು ಕಾರ್ಯಾಚರಣೆ ನಡೆಸುತ್ತಿವೆ. ಮೂರು ವಾರಗಳ ಹಿಂದಷ್ಟೇ ಅರುಣಾಚಲಪ್ರದೇಶದಲ್ಲಿ ಒಂದು ಎಂಐ-17 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಪತನಗೊಂಡ ಹೆಲಿಕಾಪ್ಟರ್​ನಲ್ಲಿ ಪೈಲಟ್, ಸಹ-ಪೈಲಟ್ ಮತ್ತು ಫ್ಲೈಟ್ ಎಂಜಿನಿಯರ್ ಇದ್ದರು. ಎಂಐ-17 ಹೆಲಿಕಾಪ್ಟರ್​ಗಳು 24 ಪ್ರಯಾಣಿಕರನ್ನು ಮತ್ತು ಸಣ್ಣಪುಟ್ಟ ವಾಹನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. 4000 ಕೆಜಿ ತೂಕ ಹೊರುವ ಸಾಮರ್ಥ್ಯವಿರುವ ಈ ಹೆಲಿಕಾಪ್ಟರ್​ನ ಮಿಲಿಟರಿ ಆವೃತ್ತಿಯು 36 ಸೇನಾಸಿಬ್ಬಂದಿಯನ್ನು ಸಂಘರ್ಷಗಳ ಸಂದರ್ಭದಲ್ಲಿ ಏಕಕಾಲಕ್ಕೆ ಹೊತ್ತೊಯ್ಯಬಲ್ಲದು. ವಿಶ್ವದ ಸುಮಾರು 60 ದೇಶಗಳಲ್ಲಿ ಈ ಹೆಲಿಕಾಪ್ಟರ್​ಗಳು ಹಾರಾಡುತ್ತಿವೆ. ಪ್ರಯಾಣಿಕರಿಗಾಗಿ ರೂಪಿಸಿರುವ ಈ ಹೆಲಿಕಾಪ್ಟರ್​ನ ಮತ್ತೊಂದು ಆವೃತ್ತಿಯು ದೊಡ್ಡ ಕ್ಯಾಬಿನ್ ಹೊಂದಿದ್ದು, ಜನರಲ್ ರಾವತ್​ರಂಥ ವಿಐಪಿಗಳ ಸಂಚಾರಕ್ಕೆ ಬಳಕೆಯಾಗುತ್ತಿದೆ. ಸೇನೆಯ ಕಮಾಂಡರ್​ಗಳು ಸಹ ಈ ಹೆಲಿಕಾಪ್ಟರ್​ಗಳನ್ನು ನಿಯಮಿತವಾಗಿ ಬಳಸುತ್ತಾರೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಿಸಲು ನೆರವಾಗಿದ್ದು ಸಹ ಇದೇ ಎಂಐ-17 ಹೆಲಿಕಾಪ್ಟರ್.

ಇಂದು (ಡಿ.8) ದುರಂತಕ್ಕೀಡಾದ ಹೆಲಿಕಾಪ್ಟರ್​ 1975ರಲ್ಲಿ ಮೊದಲ ಬಾರಿಗೆ ಹಾರಾಡಿತ್ತು. ಗಟ್ಟಿಮುಟ್ಟಾಗಿರುವ ಸದೃಢ ಹೆಲಿಕಾಪ್ಟರ್​ನಲ್ಲಿ ಬಳಕೆಯಾಗಿರುವ 45 ವರ್ಷಗಳಷ್ಟು ಹಳೆಯ ತಂತ್ರಜ್ಞಾನವನ್ನು ಹಲವು ಬಾರಿ ಮೇಲ್ದರ್ಜೆಗೆ ಏರಿಸಲಾಗಿದೆ. ಕಾಶ್ಮೀರದ ಬುದ್ಗಾಮ್ ಗ್ರಾಮದಲ್ಲಿ 2019ರಲ್ಲಿ ಕ್ಷಿಪಣಿ ಅಪ್ಪಳಿಸಿದ ನಂತರ ಪತನಗೊಂಡಿದ್ದು ಸಹ ಇದೇ ಹೆಲಿಕಾಪ್ಟರ್. ಆಗ ಆರು ಮಂದಿ ಮೃತಪಟ್ಟಿದ್ದರು. ಈ ಘಟನೆಗೆ ತನ್ನ ತಪ್ಪೇ ಕಾರಣ ಎಂದು ಭಾರತೀಯ ವಾಯುಪಡೆ ನಂತರ ಒಪ್ಪಿಕೊಂಡಿತ್ತು. 2011ರಲ್ಲಿ ತವಾಂಗ್​ನಲ್ಲಿ ಎಂಐ-17 ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿದ್ದ 23 ಜನರ ಪೈಕಿ 17 ಮಂದಿ ಸಾವನ್ನಪ್ಪಿದ್ದರು. ಪರ್ವತದ ಶಿಖರವೊಂದಕ್ಕೆ ಅಪ್ಪಳಿಸಿ, ನಂತರ ಬೆಂಕಿಹೊತ್ತಿಕೊಂಡಿತ್ತು.

ಕಳೆದ ವರ್ಷ, ಅಂದರೆ ಮೇ 2020ರಲ್ಲಿ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್​ ತನ್ನ ದೈನಂದಿನ ನಿರ್ವಹಣಾ ಹಾರಾಟ ನಡೆಸಲೆಂದು ಸಿಕ್ಕಿಂನ ಚೇತನ್​ನಿಂದ ಮುಕುತಾಂಗ್​ಗೆ ಹೊರಟಿತ್ತು. ತಾಂತ್ರಿಕ ವೈಫಲ್ಯದಿಂದ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಕಳೆದ ಆಗಸ್ಟ್​ ತಿಂಗಳಲ್ಲಿ ಮೆಕ್ಸಿಕನ್ ನೌಕಾಪಡೆಯ ಎಂಐ-17 ಹೆಲಿಕಾಪ್ಟರ್​ ಪತನಗೊಂಡಿತ್ತು. ಈ ಹೆಲಿಕಾಪ್ಟರ್​ನಲ್ಲಿ ಮೆಕ್ಸಿಕೊದ ಗೃಹ ಇಲಾಖೆ ಸಚಿವ ವೆರಾಕ್ರೂಸ್ ಸಹ ಇದ್ದರು. ಜನವರಿ 14, 2009ರಂದು ಅಫ್ಘಾನ್ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಹೆರಾತ್​ನಲ್ಲಿ ಪತನಗೊಂಡಿತ್ತು. ಅದರಲ್ಲಿದ್ದ ಎಲ್ಲ 13 ಮಂದಿಯೂ ನಿಧನರಾಗಿದ್ದರು. ಅಫ್ಘಾನಿಸ್ತಾನ ಸೇನೆಯ ಪ್ರಾದೇಶಿಕ ಕಮಾಂಡರ್ ಫಜಲ್ ಅಹಮದ್ ಸಯಾರ್ ಅಪಘಾತಕ್ಕೀಡಾದ ಹೆಲಿಕಾಪ್ಟರ್​ನಲ್ಲಿದ್ದರು. 2015ರಲ್ಲಿ ಪಾಕಿಸ್ತಾನ ಸೇನೆಯ ಎಂಐ-17 ಹೆಲಿಕಾಪ್ಟರ್ ಗಿಲ್ಗಿಟ್​ ಬಾಲ್ಟಿಸ್ತಾನದಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ನಾರ್ವೆ ಮತ್ತು ಫಿಲಿಪೈನ್ಸ್ ರಾಯಭಾರಿಗಳು ಮತ್ತು ಅವರ ಪತ್ನಿಯರು ಹಾಗೂ ಇಂಡೋನೇಷ್ಯಾ ರಾಯಭಾರಿ ಮೃತಪಟ್ಟಿದ್ದರು. ಪೋಲೆಂಡ್ ಮತ್ತು ಹಾಲೆಂಡ್ ರಾಯಭಾರಿಗಳು ಗಾಯಗೊಂಡಿದ್ದರು. 2018ರಲ್ಲಿ ಬಾಂಗ್ಲಾದೇಶ ವಾಯುಪಡೆಗೆ ಸೇರಿದ್ದ ಎಂಐ-17 ಹೆಲಿಕಾಪ್ಟರ್ ಶ್ರೀಮಂಗಳದಲ್ಲಿ ಪತನಗೊಂಡಿತ್ತು. ಕುವೈತ್ ಸಶಸ್ತ್ರಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮದ್ ಅಲ್-ಖುದರ್ ಮತ್ತು ಕುವೈತ್ ನೌಕಾಪಡೆಯ ಕಮಾಂಡರ್ ಮೇಜರ್ ಜನರಲ್ ಖಾಲಿದ್ ಮೊಹಮದ್ ಅಬ್ದುಲ್ಲಾ ಈ ಹೆಲಿಕಾಪ್ಟರ್​ನಲ್ಲಿದ್ದರು. ಈ ದುರಂತದಲ್ಲಿ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಅಧಿಕೃತ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಎಂಐ-17 ಸೋವಿಯತ್ ವಿನ್ಯಾಸದ ರಷ್ಯಾ ದೇಶದ ಮಿಲಿಟರಿ ಹೆಲಿಕಾಪ್ಟರ್​ ವರ್ಗಕ್ಕೆ ಸೇರಿದ್ದು. ಕಜಾನ್ ಮತ್ತು ಉಲಾನ್-ಉಡೆ ಎನ್ನುವ ಎರಡು ಕಾರ್ಖಾನೆಗಳಲ್ಲಿ ಇದನ್ನು ತಯಾರಿಸಲಾಗುತ್ತಿದೆ. ರಷ್ಯಾದಲ್ಲಿ ಎಂಐ-8ಎಂ ಹೆಸರಿನ ಹೆಲಿಕಾಪ್ಟರ್​ಗಳು ಸೇವೆಯಲ್ಲಿವೆ. ಸಾಮಾನ್ಯವಾಗಿ ಈ ಹೆಲಿಕಾಪ್ಟರ್​ಗಳನ್ನು ಸರಕು ಸಾಗಣೆಗೆ ಬಳಸುತ್ತಾರೆ. ಇದರ ಜೊತೆಗೆ ಗನ್​ಶಿಪ್ (ಶಸ್ತ್ರಾಸ್ತ್ರ) ಮತ್ತು ವಿಐಐ ಸೇವೆಗಳಿಗೂ ಇದು ಬಳಕೆಯಾಗುತ್ತಿದೆ.

ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದ್ದ ಚಾಪರ್ ಕೊಯಮತ್ತೂರ್ ಬಳಿ ಪತನ, 11 ಸಾವು ಇದನ್ನೂ ಓದಿ: CDS Bipin Rawat: ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ: ಪ್ರಧಾನಿ ಮೋದಿ ಹಾಗೂ ಸಂಸತ್​ಗೆ ರಾಜನಾಥ್ ಸಿಂಗ್ ವಿವರ

Published On - 6:14 pm, Wed, 8 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ