Happy Anniversary: ಸಂಬಂಧಗಳ ಸಂಭ್ರಮ, 50 ವಸಂತಗಳ ಪೂರೈಸಿದ 30 ಜೋಡಿಗಳು ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಪರಿ ಇದು

ವೈವಾಹಿಕ ಜೀವನದಲ್ಲಿ 50 ವಸಂತಗಳನ್ನು ಪೂರೈಸಿದ 30 ಜೋಡಿಗಳು ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಪರಿ ತುಂಬಾ ವಿರಳವಾಗಿತ್ತು. ಕೇವಲ ಒಂದೇ ಧರ್ಮದವರಲ್ಲ ಹಲವು ಧರ್ಮದ ಜೋಡಿಗಳು ರ್ಯಾಂಪ್​ ಮೇಲೆ ಹೆಜ್ಜೆ ಹಾಕಿದರು. ಪಶ್ಚಿಮ ಬಂಗಾಳದ ಕತ್ವಾದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.

Happy Anniversary: ಸಂಬಂಧಗಳ ಸಂಭ್ರಮ, 50 ವಸಂತಗಳ ಪೂರೈಸಿದ 30 ಜೋಡಿಗಳು ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಪರಿ ಇದು
Anniversary
Image Credit source: Tv9 Bangla

Updated on: Dec 05, 2023 | 11:04 AM

ವೈವಾಹಿಕ ಜೀವನದಲ್ಲಿ 50 ವಸಂತಗಳನ್ನು ಪೂರೈಸಿದ 30 ಜೋಡಿಗಳು ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಪರಿ ತುಂಬಾ ವಿರಳವಾಗಿತ್ತು. ಕೇವಲ ಒಂದೇ ಧರ್ಮದವರಲ್ಲ ಹಲವು ಧರ್ಮದ ಜೋಡಿಗಳು ರ್ಯಾಂಪ್​ ಮೇಲೆ ಹೆಜ್ಜೆ ಹಾಕಿದರು. ಪಶ್ಚಿಮ ಬಂಗಾಳದ ಕತ್ವಾದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನು ಬಿಯಾಂಡ್ 50 ಎಂದು ಕರೆಯಲಾಗುತ್ತದೆ. ಈ ಸಮಾರಂಭದಲ್ಲಿ ಭಾಗವಹಿಸುವ ದಂಪತಿ ತಮ್ಮ ವೈವಾಹಿಕ ಜೀವನದ ಐವತ್ತು ವರ್ಷಗಳನ್ನು ದಾಟಿದ್ದಾರೆ. ಸಮಾರಂಭದಲ್ಲಿ ಸನಾಯ್ ಅವರ ಸಂಗೀತ ವಿಭಿನ್ನ ವಾತಾವರಣವನ್ನು ಸೃಷ್ಟಿಸಿತು. ಪೂರ್ವ ಬುರ್ದ್ವಾನ್‌ನ ಕತ್ವಾ ನಗರದ ನಜ್ರುಲ್ ಮುಕ್ತಾ ಮಂಚ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಸುತ್ತಮುತ್ತಲಿ ಪ್ರದೇಶಗಳನ್ನು ಹೂವುಗಳಿಂದ ಸಜ್ಜುಗೊಳಿಸಲಾಗಿತ್ತು. ಮದುವೆಯ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಯೊಂದು ದಂಪತಿ ತಮ್ಮ ಮದುವೆಯ ದಿನವನ್ನು ಮೆಲುಕು ಹಾಕಿದರು.

ಮತ್ತಷ್ಟು ಓದಿ: Telangana: ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಸಾವು

ಹಿರಿಯ ಯೋಧ ದುಲಾಲ್ ಕುಮಾರ್ ಮುಖೋಪಾಧ್ಯಾಯ ಮಾತನಾಡಿ, ನಾನು ಮತ್ತು ನನ್ನ ಪತ್ನಿ ಒಂದೇ ಜೀವ ಎರಡು ಆತ್ಮ, ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಗಾಜಿನ ವಸ್ತುಗಳಂತೆ ಒಡೆಯುತ್ತಿವೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:52 pm, Mon, 4 December 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us