AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Chalo | ರೈತರ ಬಿಗಿಪಟ್ಟಿಗೆ ಮಣಿಯಿತೇ ಕೇಂದ್ರ ಸರ್ಕಾರ?

ಸತತ ಎಂಟು ದಿನಗಳಿಂದ ನಡೆಯುತ್ತಿರುವ ರೈತ ಪ್ರತಿಭಟನೆ, ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತಾಗಿತ್ತು. ಸರ್ಕಾರ ಮತ್ತು ರೈತ ನಾಯಕರ ನಡುವೆ ಬೃಹತ್ ಅಂತರ ಸೃಷ್ಟಿಯಾಗಿತ್ತು.

Delhi Chalo | ರೈತರ ಬಿಗಿಪಟ್ಟಿಗೆ ಮಣಿಯಿತೇ ಕೇಂದ್ರ ಸರ್ಕಾರ?
ದೆಹಲಿ ಚಲೋದ ನಡುವೆ ತನ್ನ ಓದಿನಲ್ಲಿ ನಿರತಳಾದ ಬಾಲಕಿ
guruganesh bhat
|

Updated on:Dec 04, 2020 | 7:09 PM

Share

ದೆಹಲಿ: ರೈತರು ಆಕ್ಷೇಪಿಸುತ್ತಿರುವ Farmers Produce Trade and Commerce ಕಾಯ್ದೆಯಲ್ಲಿ ಮೂರು ಪ್ರಮುಖ ತಿದ್ದುಪಡಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂಬ ಸುಳಿವು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಹೇಳಿಕೆಯಿಂದ ವ್ಯಕ್ತವಾಗಿದೆ.

ಡಿಸೆಂಬರ್ 5 ರಂದು ರೈತರ ಜೊತೆಗೆ ನಡೆಯಲಿರುವ ಇನ್ನೊಂದು ಹಂತದ ಸಭೆಯಲ್ಲಿ ಈ ಕುರಿತು ಮಾತುಕತೆ ನಡೆಯಲಿದೆ. ಸರ್ಕಾರ ರೈತರ ಸಲಹೆಗಳನ್ನು ಕಾಯ್ದೆಯಲ್ಲಿ ಅಳವಡಿಸಲು ಅಥವಾ ಮೂರು ತಿದ್ದುಪಡಿಗೆ ಒಪ್ಪುವ ಸಾಧ್ಯತೆಯಿದೆ. ಸತತ ಎಂಟು ದಿನಗಳಿಂದ ನಡೆಯುತ್ತಿರುವ ರೈತ ಪ್ರತಿಭಟನೆ, ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತಾಗಿತ್ತು. ಸರ್ಕಾರ ಮತ್ತು ರೈತ ನಾಯಕರ ನಡುವೆ ಬೃಹತ್ ಅಂತರ ಸೃಷ್ಟಿಯಾಗಿತ್ತು. ಕೊನೆಗೂ, ಕೇಂದ್ರ ಸರ್ಕಾರ ತನ್ನ ಬಿಗಿಪಟ್ಟು ಸಡಿಲಿಸುವ ಸಾಧ್ಯತೆ ಕಂಡುಬಂದಿದೆ.

ರೈತರ ವಿರೋಧ ಏಕೆ? ಪಾನ್​ ಕಾರ್ಡ್ ಹೊಂದಿರುವ ಯಾರು ಬೇಕಾದರೂ ಕೃಷಿ ಉತ್ಪನ್ನ ಖರೀದಿಸಲು ನೂತನ ಕಾಯ್ದೆಗಳು ಅವಕಾಶ ನೀಡಲಿವೆ. ಇದರ ಕುರಿತು ರೈತರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಎಪಿಎಂಸಿ ಹೊರಗೆ ಖಾಸಗಿ ಕೃಷಿ ಮಂಡಿಗಳನ್ನು ತೆರೆಯಲು ಅನುಮತಿ ನೀಡಲಿವೆ. ಇದರಿಂದ ಸಹಕಾರಿ ಕೃಷಿ ಮಾರುಕಟ್ಟೆಗೆ ಪೆಟ್ಟು ಬೀಳಲಿದೆ ಎಂಬುದು ಪಂಜಾಬ್ ರೈತರ ವಾದವಾಗಿದೆ.

ಇದನ್ನು ಕೇಂದ್ರ ಸರ್ಕಾರ ನಿರಾಕರಿಸುತ್ತಲೇ ಬಂದಿದೆ. ಮುಂದಿನ ಮಾತುಕತೆಯಲ್ಲಿ ಎಪಿಎಂಸಿಯ ಹೊರಗಿನ ವ್ಯಾಪಾರಿಗಳ ನೋಂದಣಿ ಮಾಡಬೇಕು ಎಂಬ ರೈತರ ಆಗ್ರಹವನ್ನೂ ಪರಿಶೀಲಿಸಲು ಕೃಷಿ ಸಚಿವರು ಒಪ್ಪಿಗೆ ನೀಡಿದ್ದಾರೆ.

ನಿನ್ನೆ ಸುಮಾರು ಏಳು ತಾಸಿಗೂ ಹೆಚ್ಚು ನಡೆದ ಮಾತುಕತೆಯಲ್ಲಿ 35 ರೈತ ಒಕ್ಕೂಟಗಳ 40 ನಾಯಕರು ಭಾಗವಹಿಸಿದ್ದರು.

ದೆಹಲಿ ಚಲೋ ಆರ್ಥಿಕತೆಗಷ್ಟೇ ಅಲ್ಲ.. ಮುಂದೆ ದೇಶದ ಭದ್ರತೆಗೇ ಧಕ್ಕೆ ತರಲಿದೆ: ಅಮರೀಂದರ್ ಎಚ್ಚರಿಕೆ

Published On - 11:16 am, Fri, 4 December 20