GHMC Election Results 2020: ಬಿಜೆಪಿ ನಾಗಾಲೋಟದ ನಡುವೆಯೂ TRS ಮೇಲುಗೈ
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು ಬಿಜೆಪಿ ನಾಗಾಲೋಟದಲ್ಲಿದೆ. ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದ್ರೆ ಮ್ಯಾಜಿಕ್ ನಂಬರ್ 76
ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. 150 ಸ್ಥಾನಗಳ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣಾ ಮತ ಎಣಿಕೆಯಲ್ಲಿ ಬಿಜೆಪಿ 42 ಸೀಟುಗಳಲ್ಲಿ ಮುನ್ನಡೆ ಸಾಧಿಸಿದರೆ ತೆಲಂಗಾಣ ರಾಷ್ಟ್ರ ಸಮಿತಿ -TRS ಪಕ್ಷವು 66 ಸ್ಥಾನಗಳಲ್ಲಿ ಮುಂದಿದೆ. ಇನ್ನು AIMIM 31 ಸ್ಥಾನಗಳಲ್ಲಿ ಮುಂದಿದೆ. ಕಾಂಗ್ರೆಸ್ 3 ವಾರ್ಡ್ ನಲ್ಲಿ ಮುಂದಿದೆ. ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದ್ರೆ ಮ್ಯಾಜಿಕ್ ನಂಬರ್ 76 ಅಗತ್ಯವಿದೆ.
2023ರ ಅಸೆಂಬ್ಲಿ ಚುನಾವಣೆ ಮೇಲೆ ಕಣ್ಣಿಟ್ಟಿರುವ, ತನ್ನ ಪಕ್ಷಕ್ಕೆ ನೆಲೆಯೇ ಇಲ್ಲದ ಹೈದರಾಬಾದಿನಲ್ಲಿ ಬಿಜೆಪಿ, ಸದ್ಯದ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮಹತ್ವದ ಸಾಧನೆ ಮಾಡುತ್ತಿದೆ. ಆದ್ರೆ ಆಡಳಿತಾರೂಢ TRS ಮತ್ತೆ ಕಾರ್ಪೊರೇಷನ್ ಚುಕ್ಕಾಣಿ ಹಿಡಿಯುವ ಮುನ್ಸೂಚನೆಗಳಿವೆ.
Published On - 9:52 am, Fri, 4 December 20