ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ತೆಲಂಗಾಣ ಸರ್ಕಾರ ಕೆಲಸಕ್ಕಿಂತ ಹೆಚ್ಚು ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತೆಲಂಗಾಣ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ದೆಹಲಿ: ತೆಲಂಗಾಣ ಸರ್ಕಾರ (Telangana Government) ರಾಜ್ಯದಲ್ಲಿ ಯಾವುದೇ ರೀತಿಯಾದ ಅಭಿವೃದ್ದಿ ಕಾರ್ಯ ಮಾಡಿಲ್ಲ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) (ಕೆಸಿಆರ್) ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಅವರ ಪಕ್ಷ ಅಪ್ಪ-ಮಕ್ಕಳ ಪಕ್ಷವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad joshi )ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಡವರಿಗೆ ಅಕ್ಕಿ ನೀಡುವ ಯೋಜನೆಯಲ್ಲೂ ಕೆಸಿಆರ್ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರದಿಂದ ಈ ಯೋಜನೆಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ. ನೀತಿ ಆಯೋಗದ ಸಭೆಗೂ ಕೆಸಿಆರ್ ಬರಲಿಲ್ಲ. ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯನ್ನು ರಾಜ್ಯದಲ್ಲಿ ಸರಿಯಾಗಿ ಅನಷ್ಠಾನಗೊಳಿಸಿಲ್ಲ. ಆವಾಸ್ ಯೋಜನೆಯಡಿ ನೀಡಲಾದ ಹಣ ಬೇರೆಡೆ ಹರಿದು ಹೋಗುತ್ತಿದೆ. ಬಡವರಿಗೆ ಡಬಲ್ ಬೆಡ್ ರೂಂ ಮನೆ ಕೊಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆವಾಸ್ ಯೋಜನೆ ಅಡಿ ಮನೆಗಳನ್ನು ಏಕೆ ನಿರ್ಮಾಣ ಮಾಡಲಿಲ್ಲ? ಎಂದು ಪ್ರಶ್ನಿಸಿದರು.
2011ರಲ್ಲಿ ಪ್ರಧಾನ ಮಂತ್ರಿಗಳು ದೇಶದ ಪ್ರತಿಯೊಬ್ಬ ಬಡವರು ಮನೆಯನ್ನು ಹೊಂದಿರಬೇಕು ಎಂದು ಆವಾಸ್ ಯೋಜನೆಯನ್ನು ಜಾರಿಗೆ ತಂದರು. ಆವಾಸ್ ಯೋಜನೆ ಅಡಿಯಲ್ಲಿ ತೆಲಂಗಾಣದಲ್ಲಿ 2022ರ ವೇಳೆಗೆ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಕೆಸಿಆರ್ ಹೇಳಿದ್ದರು. ಆದರೆ ಇನ್ನೂವರೆಗು ಮನೆಗಳನ್ನು ನಿರ್ಮಿಸಿಲ್ಲ. ತೆಲಂಗಾಣದ ಹಳೆ ನಗರಕ್ಕೆ ಮೆಟ್ರೋ ಸಂಚಾರ ಈಗಾಗಲೆ ಪ್ರಾರಂಭವಾಗಬೇಕಿತ್ತು. ಆದರೆ ಎಆಯ್ಎಂಕೆ ಜೊತೆ ಟಿಆರ್ಎಸ್ ಸೇರಿಕೊಂಡು ಕಾಮಾಗಾರಿಯನ್ನು ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.
ಈ ಕುರಿತಾದ ಸಿಎಜಿ ವರದಿ ಬಗ್ಗೆ ಕೆಸಿಆರ್ ಮತ್ತು ಕೆಟಿಆರ್ ಯಾಕೆ ಉತ್ತರಿಸಲಿಲ್ಲ? ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತೇನೆ ಅಥವಾ ಪ್ರತಿ ಕುಟುಂಬದ ನಿರುದ್ಯೋಗಿ ಯುವಕನಿಗೆ 3000 ರೂ ನೀಡುತ್ತೇವೆ ಎಂದು ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ್ರಿ. ಆದರೆ ನೀವು ಉದ್ಯೋಗವನ್ನು ನಿಮ್ಮ ಕುಟುಂಬದವರಿಗೆ ಮಾತ್ರ ನೀಡಿದ್ದೀರಿ ಎಂದು ವ್ಯಂಗ್ಯವಾಡಿದರು.
ಹೈದರಾಬಾದ್-ಬಿಜಾಪುರ ಹೆದ್ದಾರಿ ನಿರ್ಮಾಣಕ್ಕೆ 2017ರಲ್ಲಿ ಕೇಂದ್ರದಿಂದ 924 ಕೋಟಿ ಬಿಡುಗಡೆಯಾಗಿತ್ತು. ಈ ಹಣ ಎಲ್ಲಿ ಹೋಯ್ತು? ಇನ್ನೂ ಕಡೂ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿಲ್ಲ. ರಾಜ್ಯ ಸರ್ಕಾರ ಹೆದ್ದಾರಿ ನಿರ್ಮಾಣಕ್ಕೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿಲ್ಲ. ಇನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ರಾಜ್ಯದಲ್ಲಿ ಇಲ್ಲಿವರೆಗು ಯಾಕೆ ಜಾರಿಗೆ ತಂದಿಲ್ಲ ಎಂದು ವಾಗ್ದಾಳಿ ಮಾಡಿದರು.
ಕೇಂದ್ರದಿಂದ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆಯಾಗಿ ಮೂರು ವರ್ಷಗಳನಂತರ ರಾಜ್ಯದಲ್ಲಿ ಅನುಷ್ಠಾನಗೊಳಿಸಿದರು. ಆದ್ರಪ್ರದೇಶ ಇಬ್ಬಾಗವಾಗುವುದಕ್ಕೂ ಮೊದಲು, ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ 2009-2014ರಲ್ಲಿ ಐದು ವರ್ಷಗಳಲ್ಲಿ ರೈಲು ಯೋಜನೆಗೆ ರಾಜ್ಯಕ್ಕೆ 886 ಕೋಟಿ ನೀಡಿತ್ತು. ಆದರೆ ರಾಜ್ಯ ಇಬ್ಬಾಗವಾದ ಮೇಲೆ, ತೆಲಂಗಾಣ ಒಂದೇ ರಾಜ್ಯಕ್ಕೆ 2014 ರಿಂದ 2019ರ ತನಕ ಕೇಂದ್ರದಿಂದ 1920 ಕೋಟಿ ನೀಡಲಾಯಿತು. 2019-2020 ರಲ್ಲಿ 2050 ಕೋಟಿ ನೀಡಲಾಯಿತು. 2020-21ರಲ್ಲಿ 2600 ಕೋಟಿ, 2021-22 2420 ಕೋಟಿ, 2022-23ರಲ್ಲಿ 3240 ಕೋಟಿ ನೀಡಲಾಗಿದೆ. ಆದರು ಕೂಡ ಹಣವನ್ನು ರೈಲು ಯೋಜನೆಗಾಗಿ ಸಮರ್ಪಕವಾಗಿ ಬಳಸುತ್ತಿಲ್ಲ ಎಂದು ಕಿಡಿಕಾರಿದರು.
ಕಳೆದ 6-7 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದಿಂದ 2.5 ಲಕ್ಷ ಕೋಟಿಯನ್ನು ರಾಜ್ಯಕ್ಕೆ ನೀಡಿದ್ದೇವೆ. ಕೆಸಿಆರ್ ಈ ಹಣ ಎಲ್ಲಿ ಹೋಯ್ತು? ರಾಜ್ಯದಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ 90 ಕೋಟಿಯನ್ನು ನೀಡಿದ್ದೇವೆ. ಆದರೂ ಕೂಡವಾಗಿ ಸಮರ್ಪಕಾವಾಗಿ ಹೆದ್ದಾರಿ ನಿರ್ಮಾಣವಾಗಿಲ್ಲ. ಈ ಸಂಬಂಧ ಸಿಎಜಿ ನಿಮ್ಮ ಮೇಲೆ ಗಂಭೀರ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 pm, Fri, 23 September 22