ಆಧಾರ್​ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂಕೋರ್ಟ್​!

ಆಧಾರ್​ ಸಿಂಧುತ್ವ ಪ್ರಶ್ನಿಸಿ ಈ ಮೊದಲು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರನ್ನೊಳಗೊಂಡ ಪೀಠ ಆಧಾರ್​ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಇದನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.

ಆಧಾರ್​ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂಕೋರ್ಟ್​!
ಆಧಾರ್​ ಕಾರ್ಡ್​
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 20, 2021 | 7:12 PM

ನವದೆಹಲಿ: ಆಧಾರ್ ಕಾರ್ಡ್ ಸಿಂಧುತ್ವದ ಬಗ್ಗೆ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದೆ. ಈ ಮೂಲಕ 2018ರಲ್ಲಿ ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿದಿದೆ.

ಆಧಾರ್​ ಸಿಂಧುತ್ವ ಪ್ರಶ್ನಿಸಿ ಈ ಮೊದಲು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರನ್ನೊಳಗೊಂಡ ಪೀಠ ಆಧಾರ್​ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಆಧಾರ್‌ ಜೋಡಣೆಯು ಸೌಲಭ್ಯ ಮತ್ತು ಸಹಾಯಧನ ನೀಡಿಕೆಗೆ ಸೀಮಿತವಾಗಬೇಕು ಎಂದಿದ್ದ ಸುಪ್ರೀಂಕೋರ್ಟ್​, ಬ್ಯಾಂಕ್​ ಹಾಗೂ ಮೊಬೈಲ್​ ಸಂಖ್ಯೆಗೆ ಆಧಾರ್​ ಜೋಡಣೆ ಮಾಡುವುದು ಕಡ್ಡಾಯವಲ್ಲ ಎಂದು ಹೇಳಿತ್ತು. ತೀರ್ಪಿನಲ್ಲಿ ನೀಡಲಾದ ಆಧಾರ್​ ಸಿಂಧುತ್ವವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಲ್.ನಾಗೇಶ್ವರ ರಾವ್ ಅವರಿದ್ದ ಐದು ಸದಸ್ಯರ ಪೀಠ 4:1 ಆಧಾರದ ಮೇಲೇ ತೀರ್ಪನ್ನು ನೀಡಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಭಿನ್ನಮತದ ತೀರ್ಪು ನೀಡಿದರು. ಉಳಿದ ನಾಲ್ವರು ನ್ಯಾಯಮೂರ್ತಿಗಳು ಹಳೆಯ ತೀರ್ಪನ್ನೇ ಎತ್ತಿ ಹಿಡಿದಿದ್ದಾರೆ.

2017ರಲ್ಲಿ ಆಧಾರ್ ಕಾಯ್ದೆ ಮತ್ತು ಫೈನಾನ್ಸ್​ ಕಾಯ್ದೆಗಳನ್ನು ಹಣಕಾಸು ವಿಧೇಯಕಗಳಾಗಿ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮೂಲಕ  ರಾಜ್ಯಸಭೆಯಲ್ಲಿ ಈ ಕಾಯ್ದೆಗಳು ಅಂಗೀಕಾರವಾಗಲೇಬೇಕಾದ ನಿರ್ಬಂಧದಿಂದ ಬಿಡಿಸಿಕೊಂಡವು. ಸಂವಿಧಾನದ 110ನೇ ಪರಿಚ್ಛೇದದ ಪ್ರಕಾರ ಹಣಕಾಸು ವಿಧೇಯಕಗಳಿಗೆ ಸಂಬಂಧಿಸಿದಂತೆ ರಾಜ್ಯಸಭೆ ಸೂಚಿಸುವ ಮಾರ್ಪಾಡುಗಳನ್ನು ಜಾರಿ ಮಾಡಲು ಲೋಕಸಭೆ ಒಪ್ಪಿಕೊಳ್ಳಲೇಬೇಕೆಂಬ ನಿರ್ಬಂಧ ಇರುವುದಿಲ್ಲ. ಹೀಗಾಗಿ ಹಣಕಾಸು ವಿಧೇಯಕದ ಅಡಿಯಲ್ಲಿ ಆಧಾರ್ ಕಾಯ್ದೆಯನ್ನು ಒಪ್ಪಿಕೊಳ್ಳಲು ಇರುವ ತೊಡಕುಗಳನ್ನು ಪ್ರಸ್ತಾಪಿಸಿ ನ್ಯಾಯಮೂರ್ತಿ ಚಂದ್ರಚೂಡ ಭಿನ್ನಮತದ ತೀರ್ಪು ನೀಡಿದರು.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಲು.. ಎಲ್ಲಿಯವರೆಗೆ ಅವಕಾಶ?