AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandipura virus: ಜುಲೈನಿಂದ ಗುಜರಾತ್‌ನಲ್ಲಿ ಚಂಡೀಪುರ ವೈರಸ್​​ನಿಂದ ಸಾವಿಗೀಡಾಗಿದ್ದು 28 ಮಕ್ಕಳು: ಆರೋಗ್ಯ ಸಚಿವ

ಗುಜರಾತಿನ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಣ್ಣಿನ ಮನೆಗಳ ಬಿರುಕುಗಳು ಮತ್ತು ಕುಳಿಗಳಲ್ಲಿ ಚಂಡೀಪುರ ವೈರಸ್ ಅನ್ನು ಹೊತ್ತಿರುವ ಮರಳು ನೊಣ ವಿಶಿಷ್ಟವಾಗಿ ವಾಸಿಸುತ್ತದೆ ಎಂದು ಆರೋಗ್ಯ ಸಚಿವರು ಸದನಕ್ಕೆ ತಿಳಿಸಿದರು. ಈ ರೋಗವನ್ನು ಎದುರಿಸಲು ರಾಜ್ಯ ಸರ್ಕಾರವು ವೆಕ್ಟರ್ ನಿಯಂತ್ರಣ ಮತ್ತು ವೈರಸ್ ನಿಯಂತ್ರಣಕ್ಕಾಗಿ ವ್ಯಾಪಕವಾದ ಡ್ರೈವ್ ಅನ್ನು ಪ್ರಾರಂಭಿಸಿದೆ.

Chandipura virus: ಜುಲೈನಿಂದ ಗುಜರಾತ್‌ನಲ್ಲಿ ಚಂಡೀಪುರ ವೈರಸ್​​ನಿಂದ ಸಾವಿಗೀಡಾಗಿದ್ದು 28 ಮಕ್ಕಳು: ಆರೋಗ್ಯ ಸಚಿವ
ಮನೆಗಳಲ್ಲಿ ರೋಗ ಪರಿಶೋಧನೆ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರು
ರಶ್ಮಿ ಕಲ್ಲಕಟ್ಟ
|

Updated on: Aug 21, 2024 | 8:54 PM

Share

ಗಾಂಧಿನಗರ ಆಗಸ್ಟ್ 21: ಜುಲೈನಲ್ಲಿ ಮೊದಲ ಪ್ರಕರಣ ವರದಿಯಾದಾಗಿನಿಂದ ಗುಜರಾತ್‌ನಲ್ಲಿ (Gujarat) ಚಂಡೀಪುರ ವೈರಸ್ (Chandipura Virus) 14 ವರ್ಷದೊಳಗಿನ 28 ಮಕ್ಕಳನ್ನು ಬಲಿ ತೆಗೆದುಕೊಂಡಿದೆ ಎಂದು ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಬುಧವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ (AAP) ಶಾಸಕ ಉಮೇಶ್ ಮಕ್ವಾನಾ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರವರು. ಪಟೇಲ್ ಪ್ರಕಾರ, ರಾಜ್ಯದಲ್ಲಿ 164 ವೈರಲ್ ಎನ್ಸೆಫಾಲಿಟಿಸ್ ಪ್ರಕರಣಗಳು ವರದಿಯಾಗಿದ್ದು, 101 ಮಕ್ಕಳು ಸೋಂಕಿನಿಂದ ಸಾವಿಗೀಡಾಗಿದ್ದಾರೆ. 164 ಪ್ರಕರಣಗಳಲ್ಲಿ, 61 ನಿರ್ದಿಷ್ಟವಾಗಿ ಚಂಡೀಪುರ ವೈರಸ್‌ನಿಂದ ಉಂಟಾಗಿದೆ. ಇದು ಜ್ವರ, ಜ್ವರ ತರಹದ ರೋಗಲಕ್ಷಣಗಳು ಮತ್ತು ಮೆದುಳಿನ ತೀವ್ರವಾದ ಉರಿಯೂತವನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ವೈರಸ್ ಮುಖ್ಯವಾಗಿ ಸೊಳ್ಳೆಗಳು ಮತ್ತು ನೊಣ(ಸ್ಯಾಂಡ್ ಫ್ಲೈ)ಗಳಂತಹ ವಾಹಕಗಳಿಂದ ಹರಡುತ್ತದೆ.

ಕಳೆದ ವಾರದಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಕಳೆದ 12 ದಿನಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಸಚಿವರು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಜುಲೈ 17 ರಂದು, ಅರಾವಳಿಯಲ್ಲಿ ನಾಲ್ಕು ವರ್ಷದ ಮಗು ಮೋಟಾ ಕಾಂತರಿಯಾ ಅದೇ ತಿಂಗಳ ಆರಂಭದಲ್ಲಿ ಸಬರಕಾಂತದ ಸರ್ಕಾರಿ ಆಸ್ಪತ್ರೆಯಲ್ಲಿ ವೈರಸ್‌ಗೆ ಬಲಿಯಾದ ನಂತರ ಚಂಡೀಪುರ ವೈರಸ್‌ನಿಂದಾದ ಮೊದಲ ಸಾವನ್ನು ಗುಜರಾತ್ ಸರ್ಕಾರ ದೃಢಪಡಿಸಿತು.

ಗುಜರಾತಿನ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಣ್ಣಿನ ಮನೆಗಳ ಬಿರುಕುಗಳು ಮತ್ತು ಕುಳಿಗಳಲ್ಲಿ ಚಂಡೀಪುರ ವೈರಸ್ ಅನ್ನು ಹೊತ್ತಿರುವ ಮರಳು ನೊಣ ವಿಶಿಷ್ಟವಾಗಿ ವಾಸಿಸುತ್ತದೆ ಎಂದು ಆರೋಗ್ಯ ಸಚಿವರು ಸದನಕ್ಕೆ ತಿಳಿಸಿದರು. ಈ ರೋಗವನ್ನು ಎದುರಿಸಲು ರಾಜ್ಯ ಸರ್ಕಾರವು ವೆಕ್ಟರ್ ನಿಯಂತ್ರಣ ಮತ್ತು ವೈರಸ್ ನಿಯಂತ್ರಣಕ್ಕಾಗಿ ವ್ಯಾಪಕವಾದ ಡ್ರೈವ್ ಅನ್ನು ಪ್ರಾರಂಭಿಸಿದೆ.

ಈ ಅಭಿಯಾನದ ಭಾಗವಾಗಿ, ಆರೋಗ್ಯ ತಂಡಗಳು ಪೀಡಿತ ಪ್ರದೇಶಗಳಲ್ಲಿ 53,000 ಕ್ಕೂ ಹೆಚ್ಚು ಮನೆಗಳನ್ನು ಸಮೀಕ್ಷೆ ನಡೆಸಿವೆ. ಹಳ್ಳಿಗಳ 7 ಲಕ್ಷಕ್ಕೂ ಹೆಚ್ಚು ಮಣ್ಣಿನ ಮನೆಗಳಲ್ಲಿ ಕೀಟನಾಶಕವಾದ ಮಲಾಥಿಯಾನ್ ಪುಡಿಯನ್ನು ಸಿಂಪಡಿಸಿವೆ. ಹೆಚ್ಚುವರಿಯಾಗಿ, ಸುಮಾರು 1.58 ಲಕ್ಷ ಮನೆಗಳಲ್ಲಿ ದ್ರವರೂಪದ ಕೀಟನಾಶಕವನ್ನು ಸಿಂಪಡಿಸಲಾಗಿದೆ. ಮಕ್ಕಳ ದುರ್ಬಲತೆಯನ್ನು ಗುರುತಿಸಿ, ಅಧಿಕಾರಿಗಳು ಪೀಡಿತ ಜಿಲ್ಲೆಗಳಲ್ಲಿ ಸುಮಾರು 40,000 ಶಾಲೆಗಳು ಮತ್ತು 36,000 ಅಂಗನವಾಡಿಗಳಲ್ಲಿ ಈ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Andhra Pradesh Blast: ಆಂಧ್ರಪ್ರದೇಶದ ಅಚ್ಚುತಪುರಂನ ಫಾರ್ಮಾ ಕಂಪನಿಯಲ್ಲಿ ರಿಯಾಕ್ಟರ್ ಸ್ಫೋಟ; 7 ಜನ ಸಾವು

ಮೊದಲ ಬಾರಿಗೆ 1965 ರಲ್ಲಿ ಭಾರತದ ಮಹಾರಾಷ್ಟ್ರದ ಚಂಡೀಪುರ ಎಂಬ ಹಳ್ಳಿಯಲ್ಲಿ ಗುರುತಿಸಲಾಯಿತು. CHPV ವೈರಸ್ ರಾಬ್ಡೋವಿರಿಡೆ ಕುಟುಂಬಕ್ಕೆ ಸೇರಿದ್ದು ವೆಸಿಕ್ಯುಲರ್ ಸ್ಟೊಮಾಟಿಟಿಸ್ ವೈರಸ್‌ಗೆ ನಿಕಟ ಸಂಬಂಧ ಹೊಂದಿದೆ. ಇದು ಪ್ರಾಥಮಿಕವಾಗಿ ಸೋಂಕಿತ ಮರಳು ನೊಣಗಳ ಕಡಿತದ ಮೂಲಕ ಮಾನವರಿಗೆ ಹರಡುತ್ತದೆ, ಆದಾಗ್ಯೂ ಇತರ ಕೀಟಗಳು ಅದರ ಹರಡುವಿಕೆಯಲ್ಲಿ ಪಾತ್ರವನ್ನು ವಹಿಸಬಹುದು. ಆಂಧ್ರಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ರೋಗ ವರದಿಯಾಗಿದ್ದು ಭಾರತದ ವಿವಿಧ ಭಾಗಗಳಲ್ಲಿ ಈ ವೈರಸ್ ವಿರಳವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು