Andhra Pradesh Blast: ಆಂಧ್ರಪ್ರದೇಶದ ಅಚ್ಯುತಪುರಂನ ಫಾರ್ಮಾ ಕಂಪನಿಯಲ್ಲಿ ರಿಯಾಕ್ಟರ್ ಸ್ಫೋಟ; 15 ಜನ ಸಾವು
ಆಂಧ್ರಪ್ರದೇಶದ ಔಷಧೀಯ ಕಂಪನಿ ಎಸ್ಸೆಂಟಿಯಾದಲ್ಲಿ ಬೆಂಕಿ ಸ್ಫೋಟ ಸಂಭವಿಸಿದೆ. ಗಂಭೀರವಾದ ಸುಟ್ಟ ಗಾಯಗಳೊಂದಿಗೆ ಒದ್ದಾಡುತ್ತಿದ್ದ ಹಲವಾರು ಜನರನ್ನು ವಿಶಾಖಪಟ್ಟಣಂನ ಅನಕಾಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದ್: ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿರುವ ರಿಯಾಕ್ಟರ್ ಫಾರ್ಮಾ ಘಟಕದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಬೆಂಕಿ ಸ್ಫೋಟದ ನಂತರ ಕನಿಷ್ಠ 15 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಫಾರ್ಮಾಸ್ಯುಟಿಕಲ್ ಕಂಪನಿ ಕೇಂದ್ರವಾದ ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿರುವ (ಎಸ್ಇಝಡ್) ಔಷಧೀಯ ಕಂಪನಿ ಎಸ್ಸೆಂಟಿಯಾದಲ್ಲಿ ಊಟದ ವಿರಾಮದ ವೇಳೆ ಸ್ಫೋಟ ಮತ್ತು ಬೆಂಕಿ ಸಂಭವಿಸಿದೆ.
ಇದರಿಂದ ಹಲವು ಜನರಿಗೆ ಸುಟ್ಟ ಗಾಯಗಳಾಗಿವೆ. ಅಚ್ಯುತಪುರಂ ವಿಶೇಷ ಆರ್ಥಿಕ ವಲಯ (SEZ) ಔಷಧೀಯ ಕೇಂದ್ರವಾಗಿದ್ದು, ಎಸ್ಸಿಯೆಂಟಿಯಾ ಫಾರ್ಮಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟವನ್ನು ಪ್ರಚೋದಿಸಿತು. ಊಟದ ವಿರಾಮದ ವೇಳೆ ರಿಯಾಕ್ಟರ್ ಸ್ಫೋಟಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಿದೆ. ಎಸ್ಸಿಯೆನ್ಷಿಯಾ SEZನಿಂದ ಕಾರ್ಯನಿರ್ವಹಿಸುತ್ತಿರುವ ದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಇದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಇದನ್ನೂ ಓದಿ: 100 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಯತ್ನ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ವ್ಯಕ್ತಿ ಖುಲಾಸೆ
ಮೃತ ಕಾರ್ಮಿಕರಲ್ಲಿ ಇಬ್ಬರು ರಾಂಬಿಲ್ಲಿ ಮಂಡಲ ಮೂಲದ ಪುಡಿ ಮೋಹನ್ ಮತ್ತು ಎನ್ ಹರಿಕಾ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅನಕಾಪಲ್ಲಿ ಜಿಲ್ಲಾಧಿಕಾರಿ ವಿಜಯ ಕೃಷ್ಣನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ವಿಶಾಖಪಟ್ಟಣಂನ ಆಸ್ಪತ್ರೆಗೆ ಸಾಗಿಸಲಾಗಿದ್ದರೆ, ಇನ್ನು ಕೆಲವರನ್ನು ಅನಕಪಲ್ಲಿ ಎನ್‌ಟಿಆರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
At least 2 people died and 18 suffered injuries, after reactor #explosion at Escientia Pharma factory in the Atchutapuram Pharma SEZ in Anakapalli district on August 21.
The injured were shifted to the hospitals.#Anakapalli #Atchutapuram #Blast #AndhraPradesh #Anakapalle pic.twitter.com/w1JG65EeXg
— Surya Reddy (@jsuryareddy) August 21, 2024
ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ಮತ್ತು ರಕ್ಷಣಾ ಘಟಕಗಳು ಸ್ಥಳಕ್ಕೆ ಧಾವಿಸಿದ್ದರೂ ಸಹ ಬೆಂಕಿಯಿಂದ ಉಂಟಾದ ದಟ್ಟವಾದ ಹೊಗೆಯು ಸೌಲಭ್ಯದಲ್ಲಿ ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯಾಯಿತು. ಈ ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 pm, Wed, 21 August 24