ದೆಹಲಿ ಆಗಸ್ಟ್ 28: ಚಂದ್ರಯಾನ-3ರ (Chandrayaan-3) ಪ್ರಗ್ಯಾನ್ ರೋವರ್ (Pragyaan rover) ಚಂದ್ರನ ಮೇಲ್ಮೈಯಲ್ಲಿ ಅದರ ಸ್ಥಳಕ್ಕಿಂತ 3 ಮೀಟರ್ ಮುಂದೆ 4 ಮೀಟರ್ ವ್ಯಾಸದ ಕುಳಿಯೊಂದನ್ನು(4-meter diameter crater) ಕಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೋಮವಾರ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿದ ಇಸ್ರೋ, ಆಗಸ್ಟ್ 27, 2023 ರಂದು, ರೋವರ್ ತನ್ನ ಸ್ಥಳದಿಂದ 3 ಮೀಟರ್ ಮುಂದೆ 4 ಮೀಟರ್ ವ್ಯಾಸದ ಕುಳಿಯನ್ನು ಕಂಡಿತು. ರೋವರ್‌ಗೆ ಮಾರ್ಗವನ್ನು ಬದಲಿಸಲು ಆದೇಶಿಸಲಾಯಿತು. ಅದು ಈಗ ಸುರಕ್ಷಿತವಾಗಿ ಹೊಸ ಹಾದಿಯಲ್ಲಿ ಸಾಗುತ್ತಿದೆ ಎಂದಿದೆ.
ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಭಾರತವು ಆಗಸ್ಟ್ 23 ರಂದು ಇತಿಹಾಸ ಸೃಷ್ಟಿಸಿತ್ತು. ಈಸಾಧನೆ ಮೂಲಕ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ಯುಎಸ್, ಚೀನಾ ಮತ್ತು ರಷ್ಯಾ ನಂತರ ಭಾರತ ನಾಲ್ಕನೇ ದೇಶವಾಯಿತು.
Chandrayaan-3 Mission:
On August 27, 2023, the Rover came across a 4-meter diameter crater positioned 3 meters ahead of its location.
The Rover was commanded to retrace the path.It’s now safely heading on a new path.#Chandrayaan_3#Ch3 pic.twitter.com/QfOmqDYvSF
— ISRO (@isro) August 28, 2023
ಒಂದು ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಉಳಿದಿವೆ. ಚಂದ್ರಯಾನ -3 ರ ರೋವರ್ ಮಾಡ್ಯೂಲ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಿದೆ. ಇದು ಸಮಯದ ವಿರುದ್ಧದ ಓಟ. ಆರು ಚಕ್ರಗಳ ರೋವರ್ ಮೂಲಕ ಗುರುತಿಸಲಾಗದ ದಕ್ಷಿಣ ಧ್ರುವದ ಗರಿಷ್ಠ ದೂರವನ್ನು ಕ್ರಮಿಸಲು ISRO ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್‌ಎಸಿ) ನಿರ್ದೇಶಕ ನಿಲೇಶ್ ಎಂ ದೇಸಾಯಿ ಭಾನುವಾರ ಹೇಳಿದ್ದಾರೆ.
ಚಂದ್ರಯಾನ-3 ಮಿಷನ್‌ನ ಲ್ಯಾಂಡರ್ ಮಾಡ್ಯೂಲ್ ತನ್ನ ಪ್ರಯೋಗಗಳ ಸೆಟ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ನಂತರ ಅವುಗಳನ್ನು ದೇಶದ ಬಾಹ್ಯಾಕಾಶ ಸಂಸ್ಥೆಯ ಪ್ರಧಾನ ಕಛೇರಿಗೆ ಹಿಂತಿರುಗಿಸುತ್ತದೆ ಎಂದು ಇಸ್ರೋ ಭಾನುವಾರ ತಿಳಿಸಿದೆ.
ಚಂದ್ರನ ಮೇಲ್ಮೈಯ ರೋವರ್‌ನ ನಡೆಯುತ್ತಿರುವ ಪರಿಶೋಧನೆಯ ಸಮಯದಲ್ಲಿ ಕುಳಿ ಎದುರಾಗಿದೆ. ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಬಂದಿಳಿದ ರೋವರ್ ಸುಮಾರು 100 ಮಿಮೀ ಆಳವಿರುವ ಚಂದ್ರನ ಕುಳಿಯನ್ನು ಹಾದುಹೋಗುವಲ್ಲಿ ಯಶಸ್ವಿಯಾಯಿತು. ಈ ಸಾಧನೆಯು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿಯಂತ್ರಣ ಕೊಠಡಿಯಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಇದೀಗ ರೋವರ್ ಅನ್ನು ಹಲವಾರು ಸವಾಲುಗಳ ಮೂಲಕ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯನ್ನು ಮುಂದುವರೆಸಿದೆ.
ಕುಳಿ ಪತ್ತೆಯಾದ ನಂತರ, ಇಸ್ರೋ ತಂಡವು ರೋವರ್‌ಗೆ ಅದರ ಮಾರ್ಗವನ್ನು ಬದಲಿಸಿ ಅದರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ದಾರಿಯಲ್ಲಿ ಸಾಗಲು ತ್ವರಿತವಾಗಿ ಆದೇಶಿಸಿತು. ಈ ತ್ವರಿತ ಪ್ರತಿಕ್ರಿಯೆಯು ಬಾಹ್ಯಾಕಾಶ ಪರಿಶೋಧನೆಯ ಸಮಯದಲ್ಲಿ ಅನಿರೀಕ್ಷಿತ ಸವಾಲುಗಳನ್ನು ನಿಭಾಯಿಸುವಲ್ಲಿ ಮಿಷನ್ ತಂಡದ ನಿಖರವಾದ ಮೇಲ್ವಿಚಾರಣೆ ಮತ್ತು ಹೊಂದಿಕೊಳ್ಳುವಿಕೆಯನ್ನು ಎತ್ತಿ ತೋರಿಸುತ್ತದೆ.
ಪ್ರಜ್ಞಾನ್ ಎದುರಿಸಿದ ಎರಡನೇ ಕುಳಿ ಇದಾಗಿದೆ. ಈ ಬಗ್ಗೆ ಮಾತನಾಡಿದ ಹಿರಿಯ ವಿಜ್ಞಾನಿಯೊಬ್ಬರು ಮೊದಲು ಎದುರಾದ ಕುಳಿ ಚಿಕ್ಕದಾಗಿತ್ತು. ಇದು ಹೆಚ್ಚು ದೊಡ್ಡ ಕುಳಿಯಾಗಿದೆ. ಇದನ್ನು ತಪ್ಪಿಸಲು ಮತ್ತು ಸುರಕ್ಷಿತ ಮಾರ್ಗವನ್ನು ಆಯ್ಕೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರತಿ ಮಾರ್ಗ ಯೋಜನೆಗಾಗಿ, ರೋವರ್‌ನ ಆನ್‌ಬೋರ್ಡ್ ನ್ಯಾವಿಗೇಷನ್ ಕ್ಯಾಮೆರಾ ಡೇಟಾವನ್ನು ಡಿಜಿಟಲ್ ಎಲಿವೇಶನ್ ಮಾಡೆಲ್ (DEM) ಗಾಗಿ ಬದಲಿಸಲಾಗುತ್ತದೆ. ನಂತರ ಗ್ರೌಂಡ್ ಮತ್ತು ಮೆಕಾನಿಸಂ ತಂಡಗಳು ಯಾವ ಮಾರ್ಗವನ್ನು ತೆಗೆದುಕೊಳ್ಳಬೇಕು ಮತ್ತು ರೋವರ್ ಅನುಸರಿಸಲು ಆಜ್ಞೆಯನ್ನು ಅಪ್‌ಲಿಂಕ್ ಮಾಡುತ್ತದೆ. ಆಗಸ್ಟ್ 27 ರಂದು, ರೋವರ್ ಹೊಸ ಕುಳಿಯನ್ನು ತಪ್ಪಿಸುವುದನ್ನು ಖಚಿತಪಡಿಸಿಕೊಳ್ಳಲು ಇದೇ ರೀತಿಯ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Mon, 28 August 23