ಚಂದ್ರಯಾನ-3 ಯಶಸ್ವಿ: ಬೈಕ್ ಜಾಥಾದಲ್ಲಿ ಭಾಗವಹಿಸಿ ಸಂಭ್ರಮಾಚರಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಸ್ರೋ ವಿಜ್ಞಾನಿಗಳ ಅಗ್ರಗಣ್ಯ ಸಾಧನೆ ಚಂದ್ರಯಾನ-3 ರ ಯಶಸ್ಸಿನ ಸಂಭ್ರಮಾಚರಣೆಯ ಅಂಗವಾಗಿ ಇಂದು ಹುಬ್ಬಳ್ಳಿಯ ಚೇತನಾ ಬ್ಯುಸಿನೆಸ್ ಸ್ಕೂಲ್ ನಿಂದ ಸಾಯಿ ನಗರ ವೃತ್ತದವರೆಗೆ ಬೈಕ್ ರ್ಯಾಲಿ ನಡೆಸಲಾಯಿತು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗಿಯಾದರು.
ಹುಬ್ಬಳ್ಳಿ, ಆಗಸ್ಟ್ 27: ಇಸ್ರೋ ವಿಜ್ಞಾನಿಗಳ ಅಗ್ರಗಣ್ಯ ಸಾಧನೆ ಚಂದ್ರಯಾನ-3 ರ (Chandrayaan-3) ಯಶಸ್ಸಿನ ಸಂಭ್ರಮಾಚರಣೆಯ ಅಂಗವಾಗಿ ಇಂದು ಹುಬ್ಬಳ್ಳಿಯ ಚೇತನಾ ಬ್ಯುಸಿನೆಸ್ ಸ್ಕೂಲ್ ನಿಂದ ಸಾಯಿ ನಗರ ವೃತ್ತದವರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರ ನೇತೃತ್ವದಲ್ಲಿ ಸ್ಥಳೀಯರು ಹಾಗೂ ಯುವಕರೆಲ್ಲ ಒಗ್ಗೂಡಿ ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಈ ಬೃಹತ್ ಬೈಕ್ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, “ಇಸ್ರೋ ವಿಜ್ಞಾನಿಗಳ ಅವಿರತ ಶ್ರಮದ ಫಲವಾಗಿ ಇಂದು ಜಗತ್ತೇ ಭಾರತವನ್ನು ಪ್ರಶಂಸಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಭಾರತೀಯರು ನಮ್ಮವರ ಸಾಧನೆಯನ್ನು ಸಂಭ್ರಮಿಸುವುದು ಕೂಡ ನಮ್ಮ ಸೌಭಾಗ್ಯ. ಯುವಕರೆಲ್ಲರು ಸೇರಿ ಸ್ವಯಂ ಪ್ರೇರಿತರಾಗಿ ಸಂಭ್ರಮಾಚರಣೆಯನ್ನು ಮಾಡುತ್ತಿರುವುದು ಕೂಡ ಪ್ರಶಂಸನೀಯ ಎಂದರು.
ಇಂದು ಚೇತನ್ ಬಿಸಿನೆಸ್ ಸ್ಕೂಲ್ ನ ಆವರಣದಲ್ಲಿ ‘ ಚಂದ್ರಯಾನ -3’ ರ ಯಶಸ್ಸಿನ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲಾಯಿತು. ದೇಶದ ಪ್ರತಿಯೋಬ್ಬ ವಿದ್ಯಾರ್ಥಿಯೂ ಚಂದ್ರಯಾನ- 3 ಯಶಸ್ಸಿನಿಂದ ಪ್ರೇರಣೆ ಹೊಂದಿದ್ದು ಭಾರತದ ಈ ಐತಿಹಾಸಿಕ ವೈಜ್ಞಾನಿಕ ಯಶಸ್ಸಿಗೆ ಅಭಿಮಾನ ಮತ್ತು ಗರ್ವವನ್ನು ಹೊಂದಿದ್ದಾರೆ.#Chandrayaan3Success pic.twitter.com/HsFUHDihi0
— Pralhad Joshi (@JoshiPralhad) August 27, 2023
ಇದನ್ನೂ ಓದಿ: ಕೊರೊನಾ ಅಕ್ರಮ ತನಿಖಾ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಬಿಜೆಪಿ ವಿರೋಧಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ವೀಣಾ ಬಾರದ್ವಾಡ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಎನ್ ಕಪಟಕರ್, ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ, ಸಂತೋಷ ಚೌಹಾನ್, ತಿಪ್ಪಣ್ಣ ಮಜ್ಜಗಿ ಹಾಗೂ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Sun, 27 August 23