ಏರ್​ಇಂಡಿಯಾದಲ್ಲಿ ಕೆಲಸ ಪಡೆಯಲು ನೂಕುನುಗ್ಗಲು, 2216 ಹುದ್ದೆಗಳಿಗೆ 25,000 ಆಕಾಂಕ್ಷಿಗಳು

|

Updated on: Jul 17, 2024 | 12:36 PM

ಏರ್​ಇಂಡಿಯಾವು ಏರ್​ಪೋರ್ಟ್​ ಲೋಡರ್​ಗಳ ಹುದ್ದೆಗಾಗಿ ಏರ್​ ಇಂಡಿಯಾ ಹಮ್ಮಿಕೊಂಡಿದ್ದ ಉದ್ಯೋಗ ನೇಮಕಾತಿ ಅಭಿಯಾನದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಏರ್​ಇಂಡಿಯಾದಲ್ಲಿ ಕೆಲಸ ಪಡೆಯಲು ನೂಕುನುಗ್ಗಲು, 2216 ಹುದ್ದೆಗಳಿಗೆ 25,000 ಆಕಾಂಕ್ಷಿಗಳು
ಉದ್ಯೋಗಾಕಾಂಕ್ಷಿಗಳು
Follow us on

ಏರ್​ಪೋರ್ಟ್​ ಲೋಡರ್​ಗಳ ಹುದ್ದೆಗೆ ಏರ್​ ಇಂಡಿಯಾ ನಡೆಸಿದ್ದ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇರುವುದು 2216 ಹುದ್ದೆ ಆದರೆ ಬರೋಬ್ಬರಿ 25,000 ಆಕಾಂಕ್ಷಿಗಳು ಬಂದಿದ್ದರು ಕಾಲ್ತುಳಿತ ರೀತಿಯ ಪರಿಸ್ಥಿತಿ ಎದುರಾಗಿತ್ತು. ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ಅಭ್ಯರ್ಥಿಗಳು ಅರ್ಜಿ ವಿತರಣಾ ಕೌಂಟರ್ ಅನ್ನು ತಲುಪಲು ಪರಸ್ಪರ ತಳ್ಳಾಡುವುದನ್ನು ಕಾಣಬಹುದು.

ಎನ್​ಡಿಟಿವಿ ಈ ಸುದ್ದಿಯನ್ನು ವರದಿ ಮಾಡಿದ್ದು, ಅರ್ಜಿ ಪಡೆಯಲು ಅಭ್ಯರ್ಥಿಗಳು ಗಂಟೆಗಟ್ಟಲೆ ಊಟ, ನೀರು ಇಲ್ಲದೆ ಕಾದಿದ್ದು, ಕೆಲವರು ಈ ಸಂದರ್ಭದಲ್ಲಿ ಅಸ್ವಸ್ಥಗೊಂಡರು ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಎಂದು ಕಾಂಗ್ರೆಸ್​ ಆಗಾಗ ಆರೋಪಿಸುತ್ತಲೇ ಇದೆ, ಪ್ರಸ್ತುತ ನಡೆಯುತ್ತಿರುವ ಘಟನೆಗಳು ಇದಕ್ಕೆಲ್ಲಾ ಪುಷ್ಟಿ ನೀಡುವಂತಿದೆ.

ಏರ್​ ಪೋರ್ಟ್​ ಲೋಡರ್​ಗಳೆಂದರೆ ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವುದು ಮತ್ತು ಬ್ಯಾಗೇಜ್ ಬೆಲ್ಟ್‌ಗಳು ಮತ್ತು ರಾಂಪ್ ಟ್ರಾಕ್ಟರುಗಳನ್ನು ನಿರ್ವಹಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಪ್ರತಿ ವಿಮಾನಕ್ಕೆ ಸಾಮಾನು, ಸರಕು ಮತ್ತು ಆಹಾರ ಸರಬರಾಜುಗಳನ್ನು ನಿರ್ವಹಿಸಲು ಕನಿಷ್ಠ ಐದು ಲೋಡರ್‌ಗಳ ಅಗತ್ಯವಿದೆ.

ಮತ್ತಷ್ಟು ಓದಿ:  10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಇಂಟರ್​ವ್ಯೂ ವೇಳೆ ಕಾಲ್ತುಳಿತದ ವಿಡಿಯೋ ವೈರಲ್

ಏರ್‌ಪೋರ್ಟ್ ಲೋಡರ್‌ಗಳ ವೇತನವು ತಿಂಗಳಿಗೆ 20,000 ರೂ.ನಿಂದ ರಿಂದ 25,000 ರೂ.ನಡುವೆ ಇರುತ್ತದೆ.
ಆದರೆ ಹೆಚ್ಚಿನವರು ಓವರ್‌ಟೈಮ್ ಕೆಲಸ ಮಾಡಿ 30,000 ರೂ.ಗಳಿಗಿಂತ ಹೆಚ್ಚು ಗಳಿಸುತ್ತಾರೆ. ಉದ್ಯೋಗಕ್ಕಾಗಿ ಶೈಕ್ಷಣಿಕ ಮಾನದಂಡಗಳು ಮೂಲಭೂತವಾಗಿವೆ, ಆದರೆ ಅಭ್ಯರ್ಥಿಯು ದೈಹಿಕವಾಗಿ ಬಲವಾಗಿರಬೇಕು.

ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರದಲ್ಲಿ ನಡೆದ ವಾಕ್-ಇನ್ ಸಂದರ್ಶನದಲ್ಲಿ ನೂರಾರು ಉದ್ಯೋಗಾಕಾಂಕ್ಷಿಗಳು ಒಬ್ಬರನ್ನೊಬ್ಬರು ತಳ್ಳುತ್ತಿರುವ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಮುಂಬೈನಲ್ಲೂ ಅಂಥದ್ದೇ ಘಟನೆ ನಡೆದಿದೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕೇವಲ 10 ಹುದ್ದೆಗಳ ನೇಮಕಾತಿಗೆ ಸುಮಾರು 1,800 ಆಕಾಂಕ್ಷಿಗಳು ಹಾಜರಾಗಿದ್ದರು. ಅಂತಹ ನೂಕು ನುಗ್ಗಲಿನಿಂದಾಗಿ ಕಛೇರಿಯ ಪ್ರವೇಶಕ್ಕೆ ಹೋಗುವ ರ‍್ಯಾಂಪ್‌ನ ಒಂದು ಕಂಬಿಯು ಉದ್ಯೋಗಾಕಾಂಕ್ಷಿಗಳ ಭಾರದಿಂದ ಕುಸಿದು ಬಿದ್ದಿತ್ತು.

ಅದೃಷ್ಟವಶಾತ್, ರ‍್ಯಾಂಪ್ ತುಂಬಾ ಎತ್ತರವಾಗಿರಲಿಲ್ಲ ಮತ್ತು ರೇಲಿಂಗ್ ಕುಸಿದ ನಂತರ ಸಮತೋಲನ ಕಳೆದುಕೊಂಡ ಯಾವುದೇ ಆಕಾಂಕ್ಷಿಗಳಿಗೆ ಗಂಭೀರ ಗಾಯಗಳಾಗಿರಲಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ