Chess Olympiad 2022 ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮುಖ್ಯ; ಚೆಸ್ ಒಲಿಂಪಿಯಾಡ್ ಉದ್ಘಾಟಿಸಿ ಮೋದಿ ಭಾಷಣ

ಸೋತವರು ಎಂಬುದಿಲ್ಲ , ವಿಜೇತರು ಮತ್ತು ಭವಿಷ್ಯದ ವಿಜೇತರು ಇದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Chess Olympiad 2022 ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮುಖ್ಯ; ಚೆಸ್ ಒಲಿಂಪಿಯಾಡ್ ಉದ್ಘಾಟಿಸಿ ಮೋದಿ ಭಾಷಣ
ಚೆನ್ನೈನಲ್ಲಿ ಚೆಸ್ ಒಲಿಂಪಿಯಾಡ್ ಉದ್ಘಾಟಿಸಿದ ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 28, 2022 | 9:02 PM

ಭಾರತೀಯ ಕ್ರೀಡೆಗಳಿಗೆ ಇದಕ್ಕಿಂತ ಉತ್ತಮವಾದ ಸಮಯ ಹಿಂದೆಂದೂ ಇರಲಿಲ್ಲ. ನಾವು ಹಿಂದೆ ಗೆಲ್ಲದಿದ್ದ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದಿದ್ದೇವೆ. ಇಂದು ಭಾರತದಲ್ಲಿ 44 ನೇ ಚೆಸ್ ಒಲಿಂಪಿಯಾಡ್ (Chess Olympiad 2022) ನಡೆಯುತ್ತಿದೆ. ಯುಕೆಯಲ್ಲಿ ನಡೆಯುವ 22ನೇ ಕಾಮನ್‌ವೆಲ್ತ್‌ನಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸೋತವರು ಎಂಬುದಿಲ್ಲ , ವಿಜೇತರು ಮತ್ತು ಭವಿಷ್ಯದ ವಿಜೇತರು ಇದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ತಮಿಳುನಾಡಿನಲ್ಲಿ ಚೆಸ್ ಒಲಿಂಪಿಯಾಡ್ ಉದ್ಘಾಟಿಸಿ ಭಾಷಣ ಮಾಡಿದ ಮೋದಿ ಕ್ರೀಡಾ ಪ್ರತಿಭೆಗಳನ್ನು ಮತ್ತು ಮೂಲಸೌಕರ್ಯಗಳನ್ನು  ಪೋತ್ಸಾಹಿಸುವುದು ಮುಖ್ಯ ಎಂದಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು

  1. ಎರಡು ವರ್ಷಗಳ ಹಿಂದೆ, ಜಗತ್ತು ಈ ಶತಮಾನ ಅತಿದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪ್ರಾರಂಭಿಸಿತು. ಅಂತಹ ಸಮಯದಲ್ಲಿ, ಪ್ರತಿಯೊಂದು ಪಂದ್ಯಾವಳಿಯು ನಮಗೆ ನಾವು ಬಲಶಾಲಿಗಳು, ನಾವು ಒಟ್ಟಿಗೆ ಇದ್ದರೆ ಉತ್ತಮ ಎಂಬ ಸಂದೇಶವನ್ನು ನೀಡಿತು. ಕೋವಿಡ್ ನಂತರದ ಅವಧಿಯು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮಹತ್ವವನ್ನು ಒತ್ತಿಹೇಳಿದೆ.
  2. ತಮಿಳುನಾಡು ಭಾರತದ ಚೆಸ್ ಶಕ್ತಿ ಕೇಂದ್ರವಾಗಿದೆ. ಇದು ಅನೇಕ ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹುಟ್ಟುಹಾಕಿದೆ.
  3. ಕ್ರೀಡೆಯನ್ನು ಯಾವಾಗಲೂ ದೈವಿಕವೆಂದು ಪರಿಗಣಿಸಲಾಗಿದೆ. ಇದೀಗ ನಡೆಯುತ್ತಿರುವ ಸ್ಥಳವೂ ಅಂತದ್ದೇ. ತಮಿಳುನಾಡಿನಲ್ಲಿ ನೀವು ಸತುರಂಗನಾಥನ ದೇವಾಲಯವನ್ನು ಕಾಣಬಹುದು. ದೇವರು ಕೂಡ ಚದುರಂಗದ ಆಟವನ್ನು ಆಡಿದ್ದನು. ತಮಿಳುನಾಡಿಗೆ ಚೆಸ್‌ನೊಂದಿಗೆ ಬಲವಾದ ಐತಿಹಾಸಿಕ ಸಂಬಂಧವಿದೆ.
  4. ಚೆಸ್ ಒಲಿಂಪಿಯಾಡ್ ಭಾರತದಲ್ಲಿ ಮೊದಲ ಬಾರಿಗೆ ಆಟದ ಮೂಲದಲ್ಲಿ ನಡೆಯುತ್ತಿದೆ. ಒಲಿಂಪಿಯಾಡ್ ಮೊದಲ ಬಾರಿಗೆ ಭಾರತಕ್ಕೆ ಬಂದಿದೆ. ಮೂರು ದಶಕಗಳ ನಂತರ ಏಷ್ಯಾಕ್ಕೆ ಬರುತ್ತಿದೆ. ಪ್ರತಿಯೊಬ್ಬ ಭಾರತೀಯನ ಪರವಾಗಿ ಈ ಕಾರ್ಯಕ್ರಮಕ್ಕಾಗಿ ನಾನು ಎಫ್ಐಡಿಇಗೆ (FIDE) ಧನ್ಯವಾದ ಹೇಳುತ್ತೇನೆ.
  5. ನಿಮ್ಮನ್ನು ಆರಾಮದಾಯಕವಾಗಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಸ್ಪರ್ಧಿಗಳಲ್ಲಿ ಮೋದಿ ಹೇಳಿದ್ದಾರೆ.
  6. 44 ಚೆಸ್ ಒಲಿಂಪಿಯಾಡ್‌ಗೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ.ಚೆಸ್ ಆಟದ ತವರಿಗೇ ಈ ಆಟ ಬಂದಿದೆ ನಮ್ಮ ದೇಶಕ್ಕೆ ಇದು ಮಹತ್ವದ ಸಮಯ.ನಾನು ಈ ಪಂದ್ಯಾವಳಿಯ ಸಂಘಟಕರನ್ನು ಶ್ಲಾಘಿಸಲು ಬಯಸುತ್ತೇನೆ. ಅತ್ಯಂತ ಕಡಿಮೆ ಅವಧಿಯಲ್ಲಿ, ಅವರು ಅತ್ಯುತ್ತಮ ವ್ಯವಸ್ಥೆಗಳನ್ನು ಮಾಡಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್ ಭಾಷಣ ಕೀಜಾಡಿ ಉತ್ಖನನ ಸ್ಥಳದಲ್ಲಿ ದೊರೆತ ಕೆಲವು ದಂತದ ನಾಣ್ಯಗಳನ್ನು ಚದುರಂಗದಂತಹ ಆಟವಾಡಲು ಬಳಸಿರಬಹುದು ಎಂದು ಹೇಳಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಆಟ ಮತ್ತು ತಮಿಳು ಸಂಸ್ಕೃತಿಯ ನಡುವಿನ ಸಂಬಂಧವನ್ನು ವಿವರಿಸಿದರು. ಈ ಕಾರ್ಯಕ್ರಮಕ್ಕೆ ತಮಿಳುನಾಡು ಸರ್ಕಾರ ತಕ್ಷಣವೇ 102 ಕೋಟಿ ರೂ. ಮಂಜೂರು ಮಾಡಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಆಟವನ್ನು ಉತ್ತೇಜಿಸಲು ರಾಜ್ಯ ಶಿಕ್ಷಣ ಇಲಾಖೆ 1 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದಿದ್ದಾರೆ. ಭಾರತದ 73 ಗ್ರ್ಯಾಂಡ್ ಮಾಸ್ಟರ್‌ಗಳಲ್ಲಿ 26 ತಮಿಳುನಾಡಿನವರು. ಇದು ಬುದ್ಧಿವಂತಿಕೆ ಮತ್ತು ತಂತ್ರದ ಆಟವಾಗಿದೆ. ಚೆಸ್‌ನಲ್ಲಿ ತಮಿಳುನಾಡು ಮಿಂಚುತ್ತಿರುವುದು ನನಗೆ ಹೆಮ್ಮೆ ತಂದಿದೆ. ಚೆನ್ನೈ ಅನ್ನು ಭಾರತದ ಚೆಸ್ ರಾಜಧಾನಿ ಎಂದು ಕರೆಯಬಹುದು. ಸಾಮಾನ್ಯವಾಗಿ ಅಂತರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲು 18 ತಿಂಗಳು ತೆಗೆದುಕೊಳ್ಳುತ್ತದೆ, ಆದರೆ ನಾವು ಅದನ್ನು ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಿದ್ದೇವೆ ಎಂದು ಸ್ಟಾಲಿನ್ ಹೇಳಿದ್ದಾರೆ.

Published On - 8:35 pm, Thu, 28 July 22

ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು