ಛತ್ತೀಸ್‌ಗಢ ಸಚಿವ ಸಂಪುಟ ವಿಸ್ತರಣೆ; ಒಂಬತ್ತು ಸಚಿವರ ಸೇರ್ಪಡೆ

Vishnu Deo Sai Cabinet: ನೂತನ ಸಚಿವರ ಸೇರ್ಪಡೆಯಿಂದಾಗಿ ವಿಷ್ಣು ದೇವ್ ಸಾಯಿ ನೇತೃತ್ವದ ಛತ್ತೀಸ್‌ಗಢ ಸಂಪುಟದಲ್ಲಿ ಸಚಿವರ ಸಂಖ್ಯೆ 12 ಆಗಿದೆ. ಡಿಸೆಂಬರ್ 13 ರಂದು ಮುಖ್ಯಮಂತ್ರಿ ಸಾಯಿ ಮತ್ತು ಉಪ ಮುಖ್ಯಮಂತ್ರಿಗಳಾದ ಅರುಣ್ ಸಾವೊ ಮತ್ತು ವಿಜಯ್ ಶರ್ಮಾ ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಸ್ತುತ ಸಚಿವ ಸಂಪುಟದಲ್ಲಿ ಛತ್ತೀಸ್‌ಗಢ ಸಿಎಂ ಸೇರಿದಂತೆ ಗರಿಷ್ಠ 13 ಸಚಿವರನ್ನು ಹೊಂದಬಹುದು.

ಛತ್ತೀಸ್‌ಗಢ ಸಚಿವ ಸಂಪುಟ ವಿಸ್ತರಣೆ; ಒಂಬತ್ತು ಸಚಿವರ ಸೇರ್ಪಡೆ
ಛತ್ತೀಸ್‌ಗಢ ಸಚಿವ ಸಂಪುಟ ವಿಸ್ತರಣೆ
Follow us
ರಶ್ಮಿ ಕಲ್ಲಕಟ್ಟ
|

Updated on: Dec 22, 2023 | 1:12 PM

ದೆಹಲಿ ಡಿಸೆಂಬರ್ 22: ಛತ್ತೀಸ್‌ಗಢ (Chhattisgarh )ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ (Vishnu Deo Sai) ಅವರು ಶುಕ್ರವಾರ ಒಂಬತ್ತು ಹೊಸ ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ತಮ್ಮ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಬಿಜೆಪಿ (BJP) ಶಾಸಕರಾದ ಬ್ರಿಜ್ಮೋಹನ್ ಅಗರವಾಲ್, ರಾಮ್ವಿಚಾರ್ ನೇತಮ್, ದಯಾಳ್‌ದಾಸ್ ಬಾಘೇಲ್, ಕೇದಾರ್ ಕಶ್ಯಪ್, ಲಖನ್ಲಾಲ್ ದೇವಾಂಗನ್, ಶ್ಯಾಮ್ ಬಿಹಾರಿ ಜೈಸ್ವಾಲ್, ಒಪಿ ಚೌಧರಿ, ಟ್ಯಾಂಕ್ ರಾಮ್ ವರ್ಮಾ ಮತ್ತು ಲಕ್ಷ್ಮಿ ರಾಜವಾಡೆ ಅವರಿಗೆ ರಾಜ್ಯಪಾಲ ಬಿಸ್ವಭೂಷಣ ಹರಿಚಂದನ್ ಪ್ರಮಾಣ ವಚನ ಬೋಧಿಸಿದರು.

ನೂತನ ಸಚಿವರ ಸೇರ್ಪಡೆಯಿಂದಾಗಿ ಸಾಯಿ ನೇತೃತ್ವದ ಸಂಪುಟದಲ್ಲಿ ಸಚಿವರ ಸಂಖ್ಯೆ 12 ಆಗಿದೆ. ಡಿಸೆಂಬರ್ 13 ರಂದು ಮುಖ್ಯಮಂತ್ರಿ ಸಾಯಿ ಮತ್ತು ಉಪ ಮುಖ್ಯಮಂತ್ರಿಗಳಾದ ಅರುಣ್ ಸಾವೊ ಮತ್ತು ವಿಜಯ್ ಶರ್ಮಾ ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಸ್ತುತ ಸಚಿವ ಸಂಪುಟದಲ್ಲಿ ಛತ್ತೀಸ್‌ಗಢ ಸಿಎಂ ಸೇರಿದಂತೆ ಗರಿಷ್ಠ 13 ಸಚಿವರನ್ನು ಹೊಂದಬಹುದು. ಶೀಘ್ರದಲ್ಲಿಯೇ ಪೋರ್ಟ್‌ಫೋಲಿಯೋಗಳನ್ನು ಹಂಚಿಕೆ ಮಾಡಲಾಗುವುದು. ಇನ್ನೂ ಒಂದು ಕ್ಯಾಬಿನೆಟ್ ಸ್ಥಾನವನ್ನು ನಂತರ ಭರ್ತಿ ಮಾಡಲಾಗುವುದು ಎಂದು ಸಾಯಿ ಸುದ್ದಿಗಾರರಿಗೆ ತಿಳಿಸಿದರು.

ಸಾಯಿ, ರಾಮ್‌ವಿಚಾರ್ ನೇತಮ್ ಮತ್ತು ಕೇದಾರ್ ಕಶ್ಯಪ್ ಪರಿಶಿಷ್ಟ ಪಂಗಡಕ್ಕೆ ಸೇರಿದವರು, ದಯಾಳ್‌ದಾಸ್ ಬಾಘೆಲ್ ಪರಿಶಿಷ್ಟ ಜಾತಿಗೆ ಸೇರಿದವರು, ವಿಜಯ್ ಶರ್ಮಾ ಮತ್ತು ಬ್ರಿಜ್‌ಮೋಹನ್ ಅಗರವಾಲ್ ಸಾಮಾನ್ಯ ವರ್ಗದವರು. ರಾಜ್‌ವಾಡೆ ಒಬ್ಬರೇ ಸಂಪುಟದಲ್ಲಿರುವ ಏಕೈಕ ಮಹಿಳಾ ಸದಸ್ಯೆ. ಅಗರವಾಲ್, ನೇತಮ್, ಕಶ್ಯಪ್ ಮತ್ತು ಬಘೇಲ್ ಅವರು ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರೆ, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದರು ಸಿಎಂ ಸಾಯಿ.

ಕಳೆದ ವಾರ, ಸಾಯಿ ಅವರು ತಮ್ಮ ಮೊದಲ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಇದರಲ್ಲಿ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳಿಗೆ 1.8 ಮಿಲಿಯನ್ ಮನೆಗಳನ್ನು ಒದಗಿಸುವುದು ಮೊದಲ ಕಾರ್ಯವಾಗಿದೆ ಎಂದು ಹೇಳಿದರು. 2017-2018ರ ಭತ್ತ ಖರೀದಿಯಲ್ಲಿ ಬಾಕಿ ಉಳಿದಿರುವ ಬೋನಸ್ ಅನ್ನು ಡಿಸೆಂಬರ್ 25 ರಂದು ರೈತರಿಗೆ ನೀಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿನ ಹೀನಾಯ ಸೋಲು; ಸೋಲಿನ ಕಾರಣ ಪರಿಶೀಲಿಸಿದ ಕಾಂಗ್ರೆಸ್ ನಾಯಕತ್ವ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡಿದ್ದು, ಐದು ವರ್ಷಗಳ ನಂತರ ಬಿಜೆಪಿ 90 ಸ್ಥಾನಗಳಲ್ಲಿ 54 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರಕ್ಕೇರಿದೆ. ರಾಜ್ಯದಲ್ಲಿ 2018 ರಲ್ಲಿ 68 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 35 ಸ್ಥಾನಗಳಿಗೆ ಕುಸಿದಿದ್ದರೆ, ಜಿಜಿಪಿ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ