ಗ್ರಾಮೀಣ ನ್ಯಾಯಾಲಯಗಳಲ್ಲಿ ಕನೆಕ್ಟಿವಿಟಿ ಸಮಸ್ಯೆ: ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಿಜೆ ರಮಣ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 04, 2021 | 11:23 PM

ಲಸಿಕೆಗಳ ಪೂರೈಕೆ, ನ್ಯಾಯಾಲಯಗಳಲ್ಲಿ ತ್ವರಿತವಾಗಿ ಪರಿಹಾರವಾಗಬೇಕಾದ ಮೂಲಸೌಕರ್ಯ ಸಮಸ್ಯೆಯಂಥ ವಿಚಾರಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮೀಣ ನ್ಯಾಯಾಲಯಗಳಲ್ಲಿ ಕನೆಕ್ಟಿವಿಟಿ ಸಮಸ್ಯೆ: ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಿಜೆ ರಮಣ
ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ
Follow us on

ದೆಹಲಿ: ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ದೇಶದ ಎಲ್ಲ ಹೈಕೋರ್ಟ್​ಗಳ ಮುಖ್ಯ ನ್ಯಾಯಮೂರ್ತಿಗಳ ಜೊತೆಗೆ ಶುಕ್ರವಾರ ಮಾತನಾಡಿದರು. ಲಸಿಕೆಗಳ ಪೂರೈಕೆ, ನ್ಯಾಯಾಲಯಗಳಲ್ಲಿ ತ್ವರಿತವಾಗಿ ಪರಿಹಾರವಾಗಬೇಕಾದ ಮೂಲಸೌಕರ್ಯ ಸಮಸ್ಯೆಯಂಥ ವಿಚಾರಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಲಸಿಕೆ ನೀಡುವಲ್ಲಿ ಆದ್ಯತೆ ಸಿಗಬೇಕು ಎನ್ನುವ ಕಾರಣಕ್ಕೆ ನ್ಯಾಯಾಲಯ ಸಿಬ್ಬಂದಿಯನ್ನು ಮುಂಚೂಣಿ ಕೆಲಸಗಾರರು ಎಂದು ಪರಿಗಣಿಸಲು ಸೂಚಿಸಲಾಗುವುದು ಎಂದು ಹೇಳಿದರು.

ಜೂನ್ 1 ಮತ್ತು 2ರಂದು ಒಟ್ಟು ನಾಲ್ಕು ಬಾರಿ ವಿಡಿಯೊ ಕಾನ್ಫರೆನ್ಸ್​ ಮೂಲಕ ಸಿಜೆ ರಮಣ ಅವರು ಎಲ್ಲ ಹೈಕೋರ್ಟ್​ಗಳ ಮುಖ್ಯ ನ್ಯಾಯಮೂರ್ತಿಗಳ ಜೊತೆಗೆ ಸಂವಾದ ನಡೆಸಿದರು. ಕೊವಿಡ್-19 ಪಿಡುಗಿನ ವೇಳೆ ಹೈಕೋರ್ಟ್​ ಮತ್ತು ಅಧೀನ ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ? ಏನೆಲ್ಲಾ ಸಮಸ್ಯೆ ಎದುರಿಸುತ್ತಿವೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು.

ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಸಿಜೆ ರಮಣ ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ನಿಗಮ ರಚಿಸುವ ತಮ್ಮ ಆಲೋಚನೆಯನ್ನು ಹಂಚಿಕೊಂಡರು. ಈ ನಿಗಮವು ದೇಶದಾದ್ಯಂತ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಲಿದೆ. ಹೈಕೋರ್ಟ್​ ಮತ್ತು ಇತರ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಗಮನ ನೀಡಬೇಕು ಎಂದು ಸಿಜೆ ಸೂಚಿಸಿದರು. ಪಿಡುಗನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಿ. ನ್ಯಾಯಾಂಗದ ಅಧಿಕಾರಿಗಳಿಗೆ ವರ್ಚುವಲ್ ತರಬೇತಿಗಳನ್ನು ಕೊಡಿ ಎಂದು ಸಲಹೆ ಮಾಡಿದರು.

ಜಿಲ್ಲೆಗಳು, ಗ್ರಾಮಾಂತರ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕನೆಕ್ಟಿವಿಟಿ ಸಮಸ್ಯೆ ಇರುವುದು ಅರಿವಿಗೆ ಬಂದಿದೆ. ಅಧೀನ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಗಮನ ನೀಡುತ್ತೇನೆ ಎಂದು ಭರವಸೆ ನೀಡಿದರು.

(Chief Justice NV Ramana Virtual Meeting With High Court Judges Assures to Take Judiciary Problems of Judiciary with Govt of India)

ಇದನ್ನೂ ಓದಿ: ಪಿಎಂ ಕೇರ್ಸ್​ ಯೋಜನೆ ಬಗ್ಗೆ ಪ್ರೆಸ್​ ನೋಟ್ ಬಿಟ್ಟು ಬೇರೆ ವಿವರವಿಲ್ಲ: ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ ಅಮಿಕಸ್ ಕ್ಯೂರಿ

ಇದನ್ನೂ ಓದಿ: ಕಬ್ಬಿಣದ ಅದಿರು ರಫ್ತಿಗೆ ಕೇಂದ್ರದಿಂದ ತಾತ್ವಿಕ ಒಪ್ಪಿಗೆ; ನಿಷೇಧ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್​ಗೆ ಮೇಲ್ಮನವಿ

Published On - 11:22 pm, Fri, 4 June 21