AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರಕ್ಕೆ ಭೇಟಿ ನೀಡಿದ ಸಿಡಿಎಸ್ ಜನರಲ್ ಅನಿಲ್ ಚೌಹಾಣ್

ಈ ಬಗ್ಗೆ ಟ್ವೀಟ್ ಮಾಡಿದ ಭಾರತೀಯ ಸೇನಾಪಡೆಯ ಚಿನಾರ್ ಕಾರ್ಪ್ಸ್​​ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಸೇನಾ ಕಮಾಂಡರ್ ಮತ್ತು ಚಿನಾರ್ ಕಾರ್ಪ್ಸ್ ಕಮಾಂಡರ್ ಅವರ ಜತೆಗಿದ್ದರು ಎಂದಿದೆ.

ಕಾಶ್ಮೀರಕ್ಕೆ ಭೇಟಿ ನೀಡಿದ ಸಿಡಿಎಸ್ ಜನರಲ್ ಅನಿಲ್ ಚೌಹಾಣ್
ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಕಾಶ್ಮೀರಕ್ಕೆ ಭೇಟಿ
ರಶ್ಮಿ ಕಲ್ಲಕಟ್ಟ
|

Updated on: Feb 03, 2023 | 2:48 PM

Share

ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ (CDS General Anil Chauhan )ಅವರು ಫೆಬ್ರವರಿ 3 ರಂದು ಕಾಶ್ಮೀರದಲ್ಲಿ (Kashmir) ಗಡಿ ನಿಯಂತ್ರಣ ರೇಖೆ ಮತ್ತು ಸೇನಾಪಡೆಗಳನ್ನು ಭೇಟಿ ಮಾಡಿ ಭದ್ರತಾ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಉತ್ತರ ಸೇನಾ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಅವರೊಂದಿಗೆ ಸಿಡಿಎಸ್, ಉತ್ತರ ಕಾಶ್ಮೀರದ ಎಲ್‌ಒಸಿ ಉದ್ದಕ್ಕೂ ನಿಯೋಜಿಸಲಾದ ಸೈನಿಕರನ್ನು ಭೇಟಿ ಮಾಡಿ ಅವರ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ. ಸಿಡಿಎಸ್ ಅನಿಲ್ ಚೌಹಾಣ್ ಅವರು ಚಿನಾರ್ ಕಾರ್ಪ್ಸ್​​ನ  ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಭಾರತೀಯ ಸೇನಾಪಡೆಯ ಚಿನಾರ್ ಕಾರ್ಪ್ಸ್​​ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಸೇನಾ ಕಮಾಂಡರ್ ಮತ್ತು ಚಿನಾರ್ ಕಾರ್ಪ್ಸ್ ಕಮಾಂಡರ್ ಅವರ ಜತೆಗಿದ್ದರು.ಅವರು ಮುಂಚೂಣಿಯಲ್ಲಿರುವ ಪ್ರದೇಶ ಮತ್ತು ಒಳನಾಡಿನಲ್ಲಿರು ಸೇನಾಪಡೆಗಳನ್ನು ಭೇಟಿ ಮಾಡಿದರು.. ಪ್ರಚಲಿತ ಭದ್ರತಾ ಪರಿಸ್ಥಿತಿ,  ಕಾರ್ಯಾಚರಣೆ ಸನ್ನದ್ಧತೆ ಮತ್ತು ಸೈನಿಕ-ನಾಗರಿಕ ಸಂಪರ್ಕದ ಕುರಿತು ಅವರಿಗೆ ವಿವರಿಸಲಾಗಿದೆ. ಅವರು ಚಿನಾರ್ ವಾರಿಯರ್ಸ್ ವೃತ್ತಿಪರತೆಯನ್ನು ಶ್ಲಾಘಿಸಿದರು ಎಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ