Buddha Vihara: ರಾಮಮಂದಿರವನ್ನು ‘ಬುದ್ಧ ವಿಹಾರ’ ಎಂದು ಘೋಷಿಸುವಂತೆ ಸಲ್ಲಿಸಿದ್ದ ಅರ್ಜಿಯ ತಿರಸ್ಕರಿಸಿದ ಸುಪ್ರೀಂ
ಅಯೋಧ್ಯೆಯನ್ನು 'ಬುದ್ಧ ವಿಹಾರ' ಎಂದು ಘೋಷಿಸುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ ಈ ಅರ್ಜಿ ವಿಚಾರಣೆಗೆ ನಿರಾಕರಿಸಿದೆ.
ದೆಹಲಿ: ಅಯೋಧ್ಯೆಯನ್ನು (Ayodhya) ‘ಬುದ್ಧ ವಿಹಾರ’ (Buddha Vihar) ಎಂದು ಘೋಷಿಸುವಂತೆ ಸುಪ್ರೀಂಕೋರ್ಟ್ಗೆ (Supreme Court) ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ ಈ ಅರ್ಜಿ ವಿಚಾರಣೆಗೆ ನಿರಾಕರಿಸಿದೆ. ಅಯೋಧ್ಯೆಯನ್ನು ಬುದ್ದ ವಿಹಾರ ಎಂದು ಘೋಷಿಸುವಂತೆ ಮನವಿ ಮಾಡಲಾಗಿತ್ತು. ರಾಮ ಜನ್ಮಭೂಮಿ ಸ್ಥಳದಲ್ಲಿ ಬೌದ್ಧ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಬುದ್ದ ವಿಹಾರ ಎಂದು ಘೋಷಿಸುವಂತೆ ಮನವಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿದಾರರಾದ ವಕೀಲ ವಿನೀತ್ ಮೌರ್ಯ ವಾದ ಮಂಡಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆಗೆ ನಿರಾಕರಿಸಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ಭೂಮಿಯನ್ನು ‘ಅಯೋಧ್ಯೆ ಬುದ್ಧ ವಿಹಾರ್’ ಎಂದು ಘೋಷಿಸಲು ಸಲ್ಲಿಸಲಾದ ಮನವಿಯನ್ನು ಪರಿಗಣಿಸಿದೇ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ಸ್ಥಳದಿಂದ ಬೌದ್ಧ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರ್ಜಿದಾರರಾದ ವಿನೀತ್ ಮೌರ್ಯ ವಾದಿಸಿದ್ದು, ಬಾಬರಿ ಮಸೀದಿ-ರಾಮ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ 2010 ರ ತೀರ್ಪಿನಲ್ಲಿ ಇದನ್ನು ದಾಖಲಿಸಿದೆ.
ಆದ್ದರಿಂದ, ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳು (ತಿದ್ದುಪಡಿ ಮತ್ತು ಮಾನ್ಯತೆ) ಕಾಯಿದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಭೂಮಿಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಪುರಾತತ್ವ ಸ್ಥಳವೆಂದು ಘೋಷಿಸಬೇಕು ಎಂದು ವಾದಿಸಲಾಯಿತು. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠವು , ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ವ್ಯವಹರಿಸಿದೆ ಮತ್ತು ಅರ್ಜಿಯನ್ನು ಹಿಂತೆಗೆದುಕೊಳ್ಳುವಂತೆ ಮೌರ್ಯ ಅವರಿಗೆ ಸೂಚಿಸಿದೆ, ಒಂದು ವೇಳೆ ಹಿಂತೆಗೆದುಕೊಳ್ಳತ್ತಿದ್ದರೆ ಪೀಠವು ಅದನ್ನು ವಜಾಗೊಳಿಸುತ್ತದೆ. ನಂತರ ಮೌರ್ಯ ಮನವಿಯನ್ನು ಹಿಂಪಡೆಯಲು ಮುಂದಾದರು.
ಇದನ್ನೂ ಓದಿ: Ayodhya Ram Mandir: ನೀವು ಅರ್ಚಕರೇ? ರಾಮ ಮಂದಿರ ಉದ್ಘಾಟನೆ ದಿನಾಂಕ ಘೋಷಿಸಿದ್ದಕ್ಕೆ ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ
ಮನವಿಯ ಪ್ರಕಾರ, 16 ನೇ ಶತಮಾನದಲ್ಲಿ ಈ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸುವ ಮೊದಲು, ಸ್ಥಳದಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ರಚನೆಗಳು ಮತ್ತು ಕಲಾಕೃತಿಗಳು ಇದ್ದವು, ಅವುಗಳನ್ನು ಮಸೀದಿ ನಿರ್ಮಿಸಲು ಕೆಡವಲಾಯಿತು. ಅಯೋಧ್ಯೆ ಭೂ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟ್ 2010 ರ ತೀರ್ಪಿನಲ್ಲಿ ಬೌದ್ಧ ವಾಸ್ತುಶಿಲ್ಪದ ವೈಶಿಷ್ಟ್ಯಗಳೊಂದಿಗೆ ಸ್ತೂಪಗಳು ಮತ್ತು ಸ್ತಂಭಗಳ ಪುರಾವೆಗಳಿವೆ ಎಂದು ಗುರುತಿಸಿದೆ ಎಂದು ಮೌರ್ಯ ಪ್ರತಿಪಾದಿಸಿದರು, ಈ ಬಗ್ಗೆ ಇತಿಹಾಸಕಾರರು, ಭಾರತೀಯ ಪುರಾತತ್ವ ಇಲಾಖೆ ಸಾಕ್ಷಿಗಳ ಪ್ರಕಾರ ಇದನ್ನು ನಿರೂಪಿಸಲಾಗಿದೆ ಎಂದು ಹೇಳಿದ್ದರು.
ಅವರ ಪ್ರಕಾರ, ಬೌದ್ಧ ಸಮುದಾಯದ ಹಕ್ಕುಗಳ ಬಗ್ಗೆ ಯಾವುದೇ ಹೆಚ್ಚಿನ ತೀರ್ಮಾನಗಳನ್ನು ಮಾಡಲಾಗಿಲ್ಲ ಏಕೆಂದರೆ ಬೌದ್ಧ ಸಮುದಾಯದ ಸದಸ್ಯರು ಪ್ರಕರಣದಲ್ಲಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಯಿತು ಮತ್ತು ಹೈಕೋರ್ಟ್‌ನಲ್ಲಿ ತಮ್ಮ ವಾದವನ್ನು ಮಂಡಿಸುವುದನ್ನು ತಡೆಯುತ್ತದೆ. 2019 ರಲ್ಲಿ ಸುಪ್ರೀಂ ಕೋರ್ಟ್ ಈ ಜಾಗ ರಾಮನಿಗೆ ಸೇರಿದ್ದು ಎಂದು ಮತ್ತು ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Fri, 3 February 23