ಮಕ್ಕಳನ್ನು ಕದ್ದು ಮಾರುವ ದಂಧೆ: ಉತ್ತರ ಪ್ರದೇಶದ ರೈಲ್ವೇ ನಿಲ್ದಾಣದಿಂದ ಅಪಹರಣಕ್ಕೊಳಗಾದ ಮಗು ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಪತ್ತೆ

ದೀಪ್ ಕುಮಾರ್ ಎಂಬ ವ್ಯಕ್ತಿ ಮಗುವನ್ನು ಕರೆದೊಯ್ದಿದ್ದಾನೆ ಎಂದು ನಾವು ಕಂಡುಕೊಂಡಿದ್ದೇವೆ.  ಆತ ನೆರೆಯ ಹಾಥರಸ್ ಜಿಲ್ಲೆಯಲ್ಲಿ ಆಸ್ಪತ್ರೆಯನ್ನು ನಡೆಸುತ್ತಿರುವ ಇಬ್ಬರು ವೈದ್ಯರನ್ನು ಒಳಗೊಂಡಿರುವ ಗ್ಯಾಂಗ್‌ನ ಭಾಗವಾಗಿದ್ದಾನೆ

ಮಕ್ಕಳನ್ನು ಕದ್ದು ಮಾರುವ ದಂಧೆ: ಉತ್ತರ ಪ್ರದೇಶದ ರೈಲ್ವೇ ನಿಲ್ದಾಣದಿಂದ ಅಪಹರಣಕ್ಕೊಳಗಾದ ಮಗು ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಪತ್ತೆ
ಮಗುವನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 30, 2022 | 7:57 AM

ಲಖನೌ: ಕಳೆದ ವಾರ ಮಥುರಾ ರೈಲು ನಿಲ್ದಾಣದಲ್ಲಿ(Mathura railway station) ಮಲಗಿದ್ದ ತಂದೆ-ತಾಯಿಯ ಪಕ್ಕದಿಂದ ಕದ್ದಿದ್ದ ಏಳು ತಿಂಗಳ ಗಂಡು ಮಗು 100 ಕಿ.ಮೀ ದೂರದಲ್ಲಿ ಫಿರೋಜಾಬಾದ್‌ನ (Firozabad) ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಪತ್ತೆಯಾಗಿದೆ. ಈ ಮೂಲಕ  ಮಕ್ಕಳನ್ನು ಕದ್ದು ಮಾರಾಟ ಮಾಡುವ ದಂಧೆ ಬಯಲುಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ . ಬಿಜೆಪಿ ಕಾರ್ಪೊರೇಟರ್ ವಿನಿತಾ ಅಗರ್ವಾಲ್ ಮತ್ತು ಅವರ ಪತಿ, ತಮಗೆ ಗಂಡು ಮಗು ಬೇಕು ಎಂದು ಇಬ್ಬರು ವೈದ್ಯರಿಂದ ₹ 1.8 ಲಕ್ಷಕ್ಕೆ ಬಾಲಕನನ್ನು ಖರೀದಿಸಿದ್ದರು. ದಂಪತಿಗೆ ಈಗಾಗಲೇ ಮಗಳಿದ್ದಾಳೆ. ಪ್ಲಾಟ್‌ಫಾರ್ಮ್‌ನಿಂದ ಮಗುವನ್ನು ಎತ್ತಿಕೊಂಡು ಹೋಗುವಾಗ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ವ್ಯಕ್ತಿ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಮಥುರಾದಲ್ಲಿ ರೈಲ್ವೇ ಪೊಲೀಸರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯ ದೃಶ್ಯಗಳಲ್ಲಿ ಪೊಲೀಸರು ಮಗುವನ್ನು ತನ್ನ ತಾಯಿಗೆ ಹಸ್ತಾಂತರಿಸುತ್ತಿರುವುದನ್ನು ತೋರಿಸಿವೆ. ಮತ್ತೊಂದು ದೃಶ್ಯದಲ್ಲಿ 500 ರೂಪಾಯಿ ನೋಟುಗಳ ಕಂತೆ ಇದ್ದು ಇದನ್ನು , ಬಂಧಿತ ವೈದ್ಯರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಣಕ್ಕಾಗಿ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್ ಅಪಹರಣವನ್ನು ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಮುಷ್ತಾಕ್ ಹೇಳಿದರು.

“ದೀಪ್ ಕುಮಾರ್ ಎಂಬ ವ್ಯಕ್ತಿ ಮಗುವನ್ನು ಕರೆದೊಯ್ದಿದ್ದಾನೆ ಎಂದು ನಾವು ಕಂಡುಕೊಂಡಿದ್ದೇವೆ.  ಆತ ನೆರೆಯ ಹಾಥರಸ್ ಜಿಲ್ಲೆಯಲ್ಲಿ ಆಸ್ಪತ್ರೆಯನ್ನು ನಡೆಸುತ್ತಿರುವ ಇಬ್ಬರು ವೈದ್ಯರನ್ನು ಒಳಗೊಂಡಿರುವ ಗ್ಯಾಂಗ್‌ನ ಭಾಗವಾಗಿದ್ದಾನೆ. ಇತರ ಕೆಲವು ಆರೋಗ್ಯ ಕಾರ್ಯಕರ್ತರು ಸಹ ಭಾಗಿಯಾಗಿದ್ದಾರೆ. ನಾವು ಮಗುವನ್ನು ಯಾರ ಮನೆಯಲ್ಲಿಟ್ಟಿದ್ದರು ಎಂಬುದರ ಬಗ್ಗೆ ವು ವಿಚಾರಣೆ ನಡೆಸಿದ್ದೇವೆ.ಅವರು ನಮಗೆ ಒಬ್ಬಳೇ ಮಗಳು ಇದ್ದುದರಿಂದ ಒಬ್ಬ ಮಗನನ್ನು ಬಯಸಿದ್ದೆವು. ಅದಕ್ಕಾಗಿಯೇ ಅವರು ಈ ಒಪ್ಪಂದ ಮಾಡಿಕೊಂಡಿದ್ದಾಗಿ ಮುಷ್ತಾಕ್ ಪತ್ರಕರ್ತರಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಧಿತ ಕಾರ್ಪೊರೇಟರ್ ಕಡೆಯಿಂದ ಅಥವಾ ಬಿಜೆಪಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಘಟನೆಯ ದೃಶ್ಯಾವಳಿಗಳನ್ನು ನೋಡಿದರೆ ಆಗಸ್ಟ್ 23 ರ ರಾತ್ರ ಒಬ್ಬ ವ್ಯಕ್ತಿಯು ತನ್ನ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಹಾದು ಹೋಗುತ್ತಿರುವುದನ್ನು ತೋರಿಸುತ್ತದೆ. ಸ್ವಲ್ಪ ಸಮಯದ ನಂತರ, ಅವನು ಹಿಂತಿರುಗಿ ಬಂದು ಮಗುವನ್ನು ಅಪಹರಿಸಿ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ರೈಲಿನತ್ತ ಓಡುತ್ತಿರುವುದನ್ನು ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದಿದೆ.

Published On - 8:19 pm, Mon, 29 August 22

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ