ರಾಮಾನುಜಾಚಾರ್ಯರ ಜನ್ಮೋತ್ಸವಕ್ಕೆ ಸಿಜೆಐ ಎನ್​ವಿ ರಮಣರನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ

ಶ್ರೀ ರಾಮಾನುಜಾಚಾರ್ಯರ 1000 ನೇ ಜನ್ಮೋತ್ಸವ ಆಚರಣೆಗೆ ಹಾಗೂ ಶ್ರೀ ರಾಮಾನುಜ ಸಹಸ್ರಾಬ್ಧಿ ಕಾರ್ಯಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ಎನ್​.ವಿ ರಮಣ ಅವರನ್ನು ಚಿನ್ನ ಜೀಯರ್ ಸ್ವಾಮೀಜಿ ಆಮಂತ್ರಿಸಿದರು.

ರಾಮಾನುಜಾಚಾರ್ಯರ ಜನ್ಮೋತ್ಸವಕ್ಕೆ ಸಿಜೆಐ ಎನ್​ವಿ ರಮಣರನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ
ಸಿಜೆಐ ಎನ್​ವಿ ರಮಣರನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ
Follow us
TV9 Web
| Updated By: ganapathi bhat

Updated on:Sep 17, 2021 | 9:04 PM

ಹೈದರಾಬಾದ್: ಇಲ್ಲಿ ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಶ್ರೀ ರಾಮಾನುಜಾಚಾರ್ಯರ 1000 ನೇ ಜನ್ಮೋತ್ಸವ ಆಚರಣೆಗೆ ಹಾಗೂ ಶ್ರೀ ರಾಮಾನುಜ ಸಹಸ್ರಾಬ್ಧಿ ಕಾರ್ಯಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ಎನ್​.ವಿ ರಮಣ ಅವರನ್ನು ಚಿನ್ನ ಜೀಯರ್ ಸ್ವಾಮೀಜಿ ಆಮಂತ್ರಿಸಿದರು. ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು ಹೈದರಾಬಾದ್​ನ ಶಮ್ಸಾಬಾದ್​ನ ಆಶ್ರಮದಲ್ಲಿ ರಾಮಾನುಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಿಸಲಾಗುವುದು. ಈ ಪ್ರತಿಮೆಯು 216 ಅಡಿ ಎತ್ತರವಿದ್ದು, ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಜಾತಿಬೇಧ ಇಲ್ಲದೆ, ಮಾನವಸಂಕುಲದ ಉನ್ನತಿಗೆ ಕೆಲಸ ಮಾಡಿದ ರಾಮಾನುಜರ ನೆನಪಿಗೆ ಈ ಪ್ರತಿಮೆ ನಿರ್ಮಿಸಲಾಗಿದೆ.

ಶ್ರೀ ರಾಮಾನುಜಾಚಾರ್ಯರು 11ನೇ ಶತಮಾನದ ಹಿಂದು ಧರ್ಮಶಾಸ್ತ್ರಜ್ಞ ತತ್ವಜ್ಞಾನಿ ಹಾಗೂ ಭಕ್ತಿ ಚಳುವಳಿಯನ್ನು ನಡೆಸಿದ ಸಮಾಜ ಸುಧಾರಕರೂ ಆಗಿದ್ದಾರೆ. ರಾಮಾನುಜಾಚಾರ್ಯರ ಈ ಸಮಾನತೆಯ ಪ್ರತಿಮೆಯನ್ನು 200 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಹೈದರಾಬಾದ್​ನ ಹೊರವಲಯದಲ್ಲಿ ಇರುವ ಶಮ್ಸಾಬಾದ್​ನ ಮುಚಿಂತಾಲ್ ಎಂಬಲ್ಲಿ ಇದೆ.

ರಾಮಾನುಜ ಸಂಸ್ಥಾನದ ತ್ರಿದಡಿ ಚಿನ್ನ ಜೀಯರ್ ಮಂಗಳವಾರ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದ್ದರು. ಅಷ್ಟೇ ಅಲ್ಲದೆ, ಫೆಬ್ರವರಿ 2 ರಿಂದ ಫೆಬ್ರವರಿ 14 ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದ್ದರು. ಕಾರ್ಯಕ್ರಮದ ವಿಶೇಷವಾಗಿ ಸಮಾಜದ ಒಳಿತಿಗಾಗಿ ಸಹಸ್ರಹುಂಡಾತ್ಮಕ ಲಕ್ಷ್ಮೀ ಯಾಗ ನಡೆಯಲಿದೆ. ಅದಕ್ಕಾಗಿ 1,035 ಹೋಮ ಕುಂಡಗಳನ್ನು ನಿರ್ಮಿಸಲಾಗುವುದು. ಎರಡು ಲಕ್ಷ ಹಸುವಿನ ಕೆಜಿ ತುಪ್ಪದಿಂದ ಹೋಮ ನೆರವೇರಲಿದೆ ಎಂದು ತಿಳಿಸಲಾಗಿದೆ. ಈ ಸ್ಥಳವು ಶೀಘ್ರವೇ ವಿಶ್ವದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬುದು ಚಿನ್ನ ಜೀಯರ್ ಸ್ವಾಮೀಜಿಗಳ ಆಶಯವಾಗಿದೆ.

ವಿಶೇಷ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್ ಶಾ, ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಗ್ರಾಹಕ ಸೇವೆ, ಆಹಾರ, ಅರಣ್ಯ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಅವರನ್ನು ಆಮಂತ್ರಿಸಲಾಗಿತ್ತು.

ರಾಮಾನುಜಾಚಾರ್ಯರ ಸಮಾನತೆಯ ಮೂರ್ತಿ ಹಾಗೂ 1000ನೇ ಜನ್ಮೋತ್ಸವದ ಕುರಿತ ಮಾಹಿತಿ ಹಾಗೂ ಇನ್ನಿತರ ವಿಚಾರಗಳಿಗೆ ಈ ಸಂಪರ್ಕ ಸಂಖ್ಯೆ, ವೆಬ್​ಸೈಟ್ ಅಥವಾ ಇಮೈಲ್ ವಿಳಾಸ ಬಳಸಬಹುದು. Contact: +91 790 14 2 2022 Website: Statueofequality.org Email: Srs.samaroham@statueofequality.org

ಇದನ್ನೂ ಓದಿ: ಸಮಾನತೆಯ ಮೂರ್ತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರನ್ನು ಆಮಂತ್ರಿಸಿದ ಚಿನ್ನ ಜೀಯರ್ ಸ್ವಾಮಿ

ಇದನ್ನೂ ಓದಿ: ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ

Published On - 8:58 pm, Fri, 17 September 21

ಸಿರಾಜ್ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಹೆಡ್
ಸಿರಾಜ್ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಹೆಡ್
ಹಠಾತ್ತನೆ ಬೆಂಗಳೂರಿಗೆ ಬಂದ ಸನ್ನಿ ಲಿಯೋನಿ: ಕಾರಣವೇನು?
ಹಠಾತ್ತನೆ ಬೆಂಗಳೂರಿಗೆ ಬಂದ ಸನ್ನಿ ಲಿಯೋನಿ: ಕಾರಣವೇನು?
ಪಂಜರದೊಳಗಿದ್ದ ಸಿಂಹವನ್ನು ಕೆಣಕಿ ಕೈ ಬೆರಳನ್ನೇ ಕಳೆದುಕೊಂಡ ಯುವಕ
ಪಂಜರದೊಳಗಿದ್ದ ಸಿಂಹವನ್ನು ಕೆಣಕಿ ಕೈ ಬೆರಳನ್ನೇ ಕಳೆದುಕೊಂಡ ಯುವಕ
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶಾಸಕರ ವಿರುದ್ಧ ಕ್ರಮಕ್ಕೆ ನಿರ್ಧಾರ: ಬಿವಿವೈ
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶಾಸಕರ ವಿರುದ್ಧ ಕ್ರಮಕ್ಕೆ ನಿರ್ಧಾರ: ಬಿವಿವೈ
ರಾಜ್ಯದ 71ಲಕ್ಷ ಬಿಜೆಪಿ ಕಾರ್ಯಕರ್ತರೆಲ್ಲ ಒಂದೇ ತೆರನಾಗಿರುವುದಿಲ್ಲ: ಆಗರವಾಲ
ರಾಜ್ಯದ 71ಲಕ್ಷ ಬಿಜೆಪಿ ಕಾರ್ಯಕರ್ತರೆಲ್ಲ ಒಂದೇ ತೆರನಾಗಿರುವುದಿಲ್ಲ: ಆಗರವಾಲ
ಬಸನಗೌಡ ಯತ್ನಾಳ್ ಬಾಯಿಗೆ ಬೀಗ ಹಾಕಿಸುವಲ್ಲಿ ಬಿವೈ ವಿಜಯೇಂದ್ರ ಸಫಲರಾದರೇ?
ಬಸನಗೌಡ ಯತ್ನಾಳ್ ಬಾಯಿಗೆ ಬೀಗ ಹಾಕಿಸುವಲ್ಲಿ ಬಿವೈ ವಿಜಯೇಂದ್ರ ಸಫಲರಾದರೇ?
ನನ್ನಲ್ಲೇನೂ ಬದಲಾವಣೆ ಆಗಿಲ್ಲ, ನಾನು ಸ್ಥಿತಪ್ರಜ್ಞ: ಬಸನಗೌಡ ಯತ್ನಾಳ್
ನನ್ನಲ್ಲೇನೂ ಬದಲಾವಣೆ ಆಗಿಲ್ಲ, ನಾನು ಸ್ಥಿತಪ್ರಜ್ಞ: ಬಸನಗೌಡ ಯತ್ನಾಳ್
ಮನೆ ಬಿಟ್ಟು ಹೋಗ್ತೀನೆಂದ ತ್ರಿವಿಕ್ರಮ್, ತಪ್ಪು ಆಗಿದ್ದು ಎಲ್ಲಿ
ಮನೆ ಬಿಟ್ಟು ಹೋಗ್ತೀನೆಂದ ತ್ರಿವಿಕ್ರಮ್, ತಪ್ಪು ಆಗಿದ್ದು ಎಲ್ಲಿ
ಕಾಂಗ್ರೆಸ್ ಕಡೆ ಒಲವು ತೋರುತ್ತಿರುವ ಜೆಡಿಎಸ್ ಶಾಸಕರ ಪೈಕಿ ಮಂಜುನಾಥ ಒಬ್ಬರೇ?
ಕಾಂಗ್ರೆಸ್ ಕಡೆ ಒಲವು ತೋರುತ್ತಿರುವ ಜೆಡಿಎಸ್ ಶಾಸಕರ ಪೈಕಿ ಮಂಜುನಾಥ ಒಬ್ಬರೇ?
ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ ಏನೂ ಇಲ್ಲ: ಡಿಕೆ ಶಿವಕುಮಾರ್
ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ ಏನೂ ಇಲ್ಲ: ಡಿಕೆ ಶಿವಕುಮಾರ್