9 ವರ್ಷದ ದಲಿತ ಬಾಲಕಿ ಲೈಂಗಿಕ ದೌರ್ಜನ್ಯದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ: ದೆಹಲಿ ಪೊಲೀಸ್
ಕೂಲರ್ನಿಂದ ನೀರು ತರುವಾಗ ವಿದ್ಯುತ್ ಸ್ಪರ್ಶದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಗಳು ಸಮರ್ಥಿಸಿಕೊಂಡಿದ್ದಾರೆ. ಆಕೆಯನ್ನು ಅತ್ಯಾಚಾರ ಮಾಡಿದ ನಂತರ ಆರೋಪಿಗಳು ಶವವನ್ನು ಸುಟ್ಟು ಹಾಕಿದ್ದಾರೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ.
ದೆಹಲಿ: ದೆಹಲಿಯಲ್ಲಿ 9 ವರ್ಷದ ದಲಿತ ಬಾಲಕಿಯ ಸಾವು ಪ್ರಕರಣದ ವಿಚಾರಣೆ ನಡೆದಿದ್ದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆರೋಪಿಗಳ ಹೇಳಿಕೆಗಳನ್ನು ಆಧರಿಸಿ ಈ ರೀತಿ ಹೇಳಿರುವುದಾಗಿ ಪೊಲೀಸರು ನ್ಯಾಯಾಲಯದಲ್ಲಿ ಹೇಳಿದ್ದಾರೆ. ತಣ್ಣಗಿರುವ ನೀರು ತರಲೆಂದು ಸ್ಮಶಾನಕ್ಕೆ ಹೋಗಿದ್ದ ಬಾಲಕಿ ಅಲ್ಲಿ ಶವವಾಗಿ ಪತ್ತೆಯಾಗಿದ್ದಳು. ಸ್ಮಶಾನದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿತ್ತು. ಪ್ರಸ್ತುತ ಪ್ರಕರಣದಲ್ಲಿ ಸ್ಮಶಾನದಲ್ಲಿನ ಅರ್ಚ ಕ ರಾಧೇ ಶ್ಯಾಮ್ (55) ಮತ್ತು ಇತರ ಮೂವರು ಉದ್ಯೋಗಿಗಳಾದ ಕುಲದೀಪ್ ಸಿಂಗ್ (63), ಲಕ್ಷ್ಮಿ ನಾರಾಯಣ್ (48) ಮತ್ತು ಸಲೀಂ ಅಹ್ಮದ್ (49)ಅವರನ್ನು ಬಂಧಿಸಲಾಗಿತ್ತು. ಕೂಲರ್ನಿಂದ ನೀರು ತರುವಾಗ ವಿದ್ಯುತ್ ಸ್ಪರ್ಶದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಗಳು ಸಮರ್ಥಿಸಿಕೊಂಡಿದ್ದಾರೆ. ಆಕೆಯನ್ನು ಅತ್ಯಾಚಾರ ಮಾಡಿದ ನಂತರ ಆರೋಪಿಗಳು ಶವವನ್ನು ಸುಟ್ಟು ಹಾಕಿದ್ದಾರೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ.
ಪೊಲೀಸರು ಸಲ್ಲಿಸಿದ ಸಾಕ್ಷ್ಯಗಳ ಪ್ರಕಾರ “ಅತ್ಯಾಚಾರವೆಸಗುವಾಗ, ಆರೋಪಿ ಕುಲದೀಪ್ ಸಂತ್ರಸ್ತೆಯ ಕೈಗಳನ್ನು ಹಿಡಿದುಕೊಂಡನು ಮತ್ತು ಆರೋಪಿ ರಾಧೇ ಶ್ಯಾಮ್ ಅವಳ ಮೇಲೆ ಅತ್ಯಾಚಾರ ಮಾಡಿದನು. ರಾಧೇ ಶ್ಯಾಮ್ ಸಂತ್ರಸ್ತೆಯ ಬಾಯಿಯ ಮೇಲೆ ಕೈ ಇಟ್ಟುಕೊಂಡಿದ್ದರಿಂದ ಆಕೆಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಅದರ ನಂತರ, ಆರೋಪಿಗಳಾದ ರಾಧೇ ಶ್ಯಾಮ್ ಮತ್ತು ಕುಲದೀಪ್ ಸಿಂಗ್ ಅವರು ರಾಧೇ ಶ್ಯಾಮ್ ಅವರ ಕೊಠಡಿಯಿಂದ ವಾಟರ್ ಕೂಲರ್ನೊಂದಿಗೆ ಹಾಲ್‌ಗೆ ಶವವನ್ನು ತೆಗೆದುಕೊಂಡು ಆಕೆಯ ದೇಹವನ್ನು ಬೆಂಚ್ ಮೇಲೆ ಇರಿಸಿದರು.
ಈ ಹಂತದಲ್ಲಿ ಅವರನ್ನು ಇಬ್ಬರು ಪ್ರಾಸಿಕ್ಯೂಷನ್ ಸಾಕ್ಷಿಗಳು ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ಎಲ್ಲಾ ನಾಲ್ವರು ಆರೋಪಿಗಳು ಸ್ಮಶಾನ ಮೈದಾನದಲ್ಲಿ ಒಟ್ಟುಗೂಡಿದರು. ಅತ್ಯಾಚಾರ ಮತ್ತು ಕೊಲೆ ಸಾಕ್ಷ್ಯವನ್ನು ತೆಗೆದುಹಾಕಲು ಮೃತರ ಶವವನ್ನು ಸುಡಲು ನಿರ್ಧರಿಸಿದ್ದಾರೆ” ಎಂದು ಪೊಲೀಸರು ಹೇಳಿದರು.
ಸಂತ್ರಸ್ತೆ5.30ಕ್ಕೆ ಸಾವಿಗೀಡಾಗಿದ್ದಾಳೆ ಎಂದು ಹೇಳುವ ಮೂಲಕ ಶ್ಯಾಮ್ ಸಾಕ್ಷ್ಯವನ್ನು ತಿರುಚಲು ಪ್ರಯತ್ನಿಸಿದ್ದನು. ಆದಾಗ್ಯೂ ಸಂತ್ರಸ್ತೆಯನ್ನು ಸಾಯಂಕಾಲ 5:42 ಕ್ಕೆ ಸಿಸಿಟಿವಿ ಫೂಟೇಜ್‌ನಲ್ಲಿ ಜೀವಂತವಾಗಿ ನೋಡಿದವರಿದ್ದಾರೆ ಎಂದ ಎಂದು ಪೊಲೀಸರು ಹೇಳಿದ್ದಾರೆ.
ಅಹ್ಮದ್ ಮತ್ತು ನಾರಾಯಣ್ ಪ್ರಾಥಮಿಕವಾಗಿ ಸಾಕ್ಷ್ಯ ನಾಶದಲ್ಲಿ ಮತ್ತು ಶವ ಸಂಸ್ಕಾರಕ್ಕೆ ಸಹಕರಿಸಿದ್ದಾರೆ ಎಂದು ಪೊಲೀಸರು ಸಲ್ಲಿಸಿದರು. ಈ ಇಬ್ಬರು ಶ್ಯಾಮ್ ಮತ್ತು ಸಿಂಗ್ ಅವರು ಅಪರಾಧದಲ್ಲಿ ವಹಿಸಿದ ಪಾತ್ರದ ಬಗ್ಗೆ ತನಿಖಾಧಿಕಾರಿಗಳ ಮುಂದೆ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಟರ್ ಕೂಲರ್‌ನಲ್ಲಿ “ವಿದ್ಯುತ್ ಪ್ರವಾಹ” ಇಲ್ಲದಿರುವುದರಿಂದ ವಿದ್ಯುತ್ ಸ್ಪರ್ಶಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಎಫ್‌ಎಸ್‌ಎಲ್ ವರದಿಯ ಪ್ರಕಾರ, “ವಾಟರ್ ಕೂಲರ್‌ನಲ್ಲಿ ಯಾವುದೇ ಜೈವಿಕ ದ್ರವ/ಡಿಎನ್‌ಎ ಟ್ರೇಸ್/ಸ್ಯಾಂಪಲ್ ಕಂಡುಬಂದಿಲ್ಲ, ಇದು ಮೃತ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಏಕೆಂದರೆ, ವಿದ್ಯುತ್ ತಗುಲಿದ ಸಂದರ್ಭದಲ್ಲಿ, ಡಿಎನ್ಎ ಟ್ರೇಸ್ ವಾಟರ್ ಕೂಲರ್ ನ ಮೇಲೆ ಇರುತ್ತದೆ “. ಶ್ಯಾಮ್ ಅವರ ಮೊಬೈಲ್ ಹಿಸ್ಟರಿ ನೋಡಿದಾಗ ಆತ ಪೋರ್ನ್ ಚಟ ಹೊಂದಿದ್ದ ಎಂದು ತಿಳಿದುಬಂದಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅವರು ಜೂನ್ 11 ರಿಂದ ಜುಲೈ 30 ರವರೆಗೆ ಸುಮಾರು 1,300 ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ. ಫೋನ್‌ನಲ್ಲಿ ಯಾವುದೇ ಕಾಲ್ ಲಾಗ್‌ಗಳು ಕಂಡುಬಂದಿಲ್ಲವಾದ್ದರಿಂದ ಅವರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಪೋರ್ನ್ ಬ್ರೌಸ್ ಮಾಡಲು ಮಾತ್ರ ಬಳಸಿದ್ದಾರೆ. ಆತ ಫೋನ್ ಅನ್ನು ಎಲ್ಲರಿಂದಲೂ ಗೌಪ್ಯವಾಗಿಟ್ಟನು ”ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಸಂತ್ರಸ್ತೆಯ ಕುಟುಂಬಕ್ಕೆ ಮಧ್ಯಂತರ ಪರಿಹಾರಕ್ಕಾಗಿ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ತನಿಖಾಧಿಕಾರಿ ಈ ಹೇಳಿಕೆಯನ್ನು ಸಲ್ಲಿಸಿದ್ದಾರೆ. ಸೆಪ್ಟೆಂಬರ್ 14 ರಂದು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಶುತೋಷ್ ಕುಮಾರ್ ಮಧ್ಯಂತರ ಪರಿಹಾರವಾಗಿ 2.5 ಲಕ್ಷ ರೂ.ಗಳನ್ನು ತಕ್ಷಣ ಬಾಲಕಿಯ ಕುಟುಂಬಕ್ಕೆ ವಿತರಿಸುವಂತೆ ಸೂಚಿಸಿದರು.
ಅತ್ಯಾಚಾರ, ತಪ್ಪಾದ ಬಂಧನ, ಕೊಲೆ, ಸಾಕ್ಷ್ಯ ನಾಶ, ಮತ್ತು ಲೈಂಗಿಕ ದೌರ್ಜನ್ಯ (ಪೋಕ್ಸೊ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ‘ದಲಿತ ಬಾಲಕಿಯೂ ದೇಶದ ಮಗಳು’: ದೆಹಲಿಯಲ್ಲಿ 9ರ ಹರೆಯದ ಬಾಲಕಿಯ ಅತ್ಯಾಚಾರ ಪ್ರಕರಣ ಬಗ್ಗೆ ಜನಾಕ್ರೋಶ
(Delhi Police to court 9-year-old Dalit girl died due to suffocation while being sexually assaulted )