ಸಿಧು ಪಂಜಾಬ್ ರಾಜಕೀಯದ ರಾಖೀ ಸಾವಂತ್; ಎಎಪಿ ನಾಯಕ ರಾಘವ್ ಚಡ್ಡಾ ಟ್ವೀಟ್​​ಗೆ ಕಾಂಗ್ರೆಸ್ ಆಕ್ರೋಶ

Raghav Chadha: ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್​​ ಪಿಪಿಸಿಸಿ ಮುಖ್ಯಸ್ಥರಿಗೆ ಛೀಮಾರಿ ಹಾಕಿದ್ದು, ಸಿಧು ಪಂಜಾಬ್ ರಾಜಕೀಯದ ರಾಖಿ ಸಾವಂತ್ ಎಂದು ಚಡ್ಡಾ ಪ್ರತಿಕ್ರಿಯಿಸಿದರು.

ಸಿಧು ಪಂಜಾಬ್ ರಾಜಕೀಯದ ರಾಖೀ ಸಾವಂತ್; ಎಎಪಿ ನಾಯಕ ರಾಘವ್ ಚಡ್ಡಾ ಟ್ವೀಟ್​​ಗೆ ಕಾಂಗ್ರೆಸ್ ಆಕ್ರೋಶ
ನವಜೋತ್ ಸಿಂಗ್ ಸಿಧು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 17, 2021 | 6:24 PM

ದೆಹಲಿ: ಆಮ್ ಆದ್ಮಿ ಪಕ್ಷದ (AAP) ಪಂಜಾಬ್ ಸಹ-ಉಸ್ತುವಾರಿ ಮತ್ತು ದೆಹಲಿ ಶಾಸಕರಾದ ರಾಘವ್ ಚಡ್ಡಾ(Raghav Chadha) ನವಜೋತ್ ಸಿಂಗ್ ಸಿಧು (Navjot Singh Sidhu) ಅವರನ್ನು “ಪಂಜಾಬ್ ರಾಜಕೀಯದ ರಾಖಿ ಸಾವಂತ್”(Rakhi Sawant) ಎಂದು ಕರೆದಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ಅವರು ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾನೂನು ಬಗ್ಗೆ ವಾಗ್ದಾಳಿ ನಡೆಸಿ ದೆಹಲಿ ಸರ್ಕಾರ ನಟಿಸುತ್ತಿದೆ ಎಂದು ಟೀಕಿಸಿದಕ್ಕೆ ಪ್ರತಿಕ್ರಿಯೆಯಾಗಿ ಚಡ್ಡಾ ಈ ರೀತಿ ಹೇಳಿದ್ದಾರೆ. ದೆಹಲಿ ಸರ್ಕಾರವು ಮೂರು ಕೃಷಿ ಕಾನೂನುಗಳಲ್ಲಿ ಒಂದನ್ನು (ಕಳೆದ ವರ್ಷ ಡಿಸೆಂಬರ್‌ನಲ್ಲಿ) ರೈತರಿಗೆ ಮಂಡಿಗಳ ಹೊರಗೆ ಮಾರಾಟ ಮಾಡಲು ಅವಕಾಶ ನೀಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ನಿಂದ ಕಾನೂನು ಮತ್ತೆ ಡಿನೋಟಿಫೈ ಆಗಿದೆಯೇ ಎಂದು ಸಿಧು ಟ್ವೀಟ್ ಮಾಡಿದ್ದರು.

ಮೂರು ಕೃಷಿ ಕಾನೂನುಗಳು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟು ಇಂದಿಗೆ ಒಂದು ವರ್ಷವಾಗಿದ್ದು ಈಗಲೂ ಕೃಷಿ ಕಾನೂನು ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಶೋಷಣೆ ಮತ್ತು ಎಮ್‌ಎಸ್‌ಪಿ ಘೋಷಿಸಿದ ಬೆಳೆಗಳ ಮೇಲೆ ಬೆಲೆ ಇಳಿಕೆ ಆಗುತ್ತಿದೆ. ಅರವಿಂದ ಕೇಜ್ರಿವಾಲ್ ಅವರೇ ನೀವು ಖಾಸಗಿ ಮಂಡಿಯ ಕೇಂದ್ರ ಕಪ್ಪು ಕಾನೂನಿಗೆ ಸೂಚನೆ ನೀಡಿದ್ದೀರಿ! ಅದನ್ನು ಡಿ-ನೋಟಿಫೈ ಮಾಡಲಾಗಿದೆಯೇ ಅಥವಾ ನಾಟಕವಾಡುವುದು ಇನ್ನೂ ಮುಂದುವರಿದಿದೆಯೇ? ಎಂದು ಸಿಧು ಟ್ವೀಟ್ ಮಾಡಿದ್ದಾರೆ.

ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್​​ ಪಿಪಿಸಿಸಿ ಮುಖ್ಯಸ್ಥರಿಗೆ ಛೀಮಾರಿ ಹಾಕಿದ್ದು, ಸಿಧು ಪಂಜಾಬ್ ರಾಜಕೀಯದ ರಾಖಿ ಸಾವಂತ್ ಎಂದು ಚಡ್ಡಾ ಪ್ರತಿಕ್ರಿಯಿಸಿದರು.

ಪಂಜಾಬ್ ರಾಜಕೀಯದ ರಾಖಿ ಸಾವಂತ್ ನವಜೋತ್ ಸಿಂಗ್ ಸಿಧು ಅವರನ್ನು ಕ್ಯಾಪ್ಟನ್ ವಿರುದ್ಧ ನಾನ್ ಸ್ಟಾಪ್ ವಾಗ್ದಾಳಿಗಾಗಿ ಕಾಂಗ್ರೆಸ್ ಹೈಕಮಾಂಡ್  ಗದರಿದೆ. ಆದ್ದರಿಂದ ಇಂದು ಅವರು ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಗುಡುಗುತ್ತಿದ್ದಾರೆ. ನಾಳೆಯವರೆಗೆ ಕಾಯಿರಿ, ಏಕೆಂದರೆ ಅವರು ಕ್ಯಾಪ್ಟನ್ ವಿರುದ್ಧ ತಮ್ಮ ಟೀಕೆಗಳನ್ನು ತೀವ್ರವಾಗಿ ಪುನರಾರಂಭಿಸುತ್ತಾರೆ “ಎಂದು ಚಡ್ಡಾ ಟ್ವೀಟ್ ಮಾಡಿದ್ದಾರೆ.

ಆದಾಗ್ಯೂ, ಚಡ್ಡಾ ಅವರ ಟ್ವೀಟ್ ಅನ್ನು ಮಹಿಳಾ ವಿರೋಧಿ ” ಮತ್ತು “ಸೆಕ್ಸಿಸ್ಟ್” ಎಂದು ಕರೆಯಲಾಯಿತು. ಈ ಹಿಂದೆ ಎಎಪಿಯಲ್ಲಿದ್ದು ಆಮೇಲೆ ಕಾಂಗ್ರೆಸ್ ಸೇರಿದ್ದ ಅಲ್ಕಾ  ಲಾಂಬಾ,  ಚಡ್ಡಾ ಅವರ ಟೀಕೆಗಳು ಎಎಪಿಯ ಮಹಿಳೆಯರ ಬಗ್ಗೆ ತಳೆದಿರುವ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ಅದನ್ನು ಆರ್‌ಎಸ್‌ಎಸ್ ಚಿಂತನೆಯೊಂದಿಗೆ ಸಮೀಕರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು “ಕರುಣಾಜನಕ ರಾಜಕೀಯ” ದ ಪ್ರದರ್ಶನ ಎಂದು ಕರೆದ ಲಾಂಬಾ ಅವರನ್ನು “ಸಂಘಿ ಚಡ್ಡಾ” ಎಂದಿದ್ದಾರೆ.

ಇದನ್ನೂ ಓದಿ: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಸುಖ್‌ಬೀರ್ ಬಾದಲ್, ಹರ್ಸಿಮ್ರತ್ ಕೌರ್ ಬಂಧನ; ದೆಹಲಿಯಲ್ಲಿ ಸೆಕ್ಷನ್ 144 ಜಾರಿ

(AAP leader Delhi MLA Raghav Chadha called Navjot Singh Sidhu the Rakhi Sawant of Punjab politics)

Published On - 6:17 pm, Fri, 17 September 21