ಕೇರಳದ ರಹಸ್ಯ ಪ್ರೇಮಿಗಳ ವಿವಾಹ; 10 ವರ್ಷದ ನಿಗೂಢ ಪ್ರೀತಿಗೆ ಸಿಕ್ತು ಅಧಿಕೃತ ಮುದ್ರೆ

ಮದುವೆಯ ಬಳಿಕ ಇಬ್ಬರೂ ಸೇರಿ ಎಲ್ಲರಿಗೂ ಸಿಹಿ ಹಂಚಿದ್ದಾರೆ.  ಅದಕ್ಕೂ ಮಿಗಿಲಾಗಿ ಸಜಿತಾಳ ತಂದೆ-ತಾಯಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಆದರೆ ರೆಹಮಾನ್​ ಕುಟುಂಬದವರು ಆಗಮಿಸಿರಲಿಲ್ಲ.

ಕೇರಳದ ರಹಸ್ಯ ಪ್ರೇಮಿಗಳ ವಿವಾಹ; 10 ವರ್ಷದ ನಿಗೂಢ ಪ್ರೀತಿಗೆ ಸಿಕ್ತು ಅಧಿಕೃತ ಮುದ್ರೆ
ಕೇರಳದ ಜೋಡಿ
TV9kannada Web Team

| Edited By: Lakshmi Hegde

Sep 17, 2021 | 5:55 PM

ಕೆಲವು ದಿನಗಳ ಹಿಂದೆ ಕೇರಳದ ಅಲಿಂಚುವಟ್ಟಿ ರೆಹಮಾನ್​ ಮತ್ತು ಆತನ ಪ್ರೇಯಸಿ ಸಜಿತಾ ಎಂಬುವರ ಹೆಸರು ಸಿಕ್ಕಾಪಟೆ ಸುದ್ದಿಯಾಗಿತ್ತು. ಅದಕ್ಕೆ ಕಾರಣ 10 ವರ್ಷದ ನಿಗೂಢ ಪ್ರೇಮ. ಪಲಕ್ಕಾಡ್​ನ ಅಯಲೂರ್​ ಎಂಬ ಗ್ರಾಮದವರಾಗಿದ್ದ ಇವರದ್ದು ಒಂಥರ ವಿಚಿತ್ರ ಬದುಕಾಗಿತ್ತು. ಅಲ್ಲೇ ಆಸುಪಾಸಿನ ಮನೆಯಲ್ಲಿದ್ದ ರೆಹಮಾನ್ ಮತ್ತು ಸಜಿತಾ ಪ್ರೀತಿಸುತ್ತಿದ್ದರು. ಜಾತಿ ಬೇರೆ ಆಗಿದ್ದರಿಂದ ಮನೆಯವರ ಒಪ್ಪಿಗೆ ಇರಲಿಲ್ಲ. ಆದರೆ 10ವರ್ಷದ ಹಿಂದೆ ಮನೆಬಿಟ್ಟಿದ್ದ ಸಜಿತಾ ಮೌನವಾಗಿ ಅಲ್ಲಿಯೇ ಸಮೀಪದಲ್ಲಿದ್ದ ರೆಹಮಾನ್ ಮನೆ ಸೇರಿಕೊಂಡಿದ್ದಳು. ಆತನ ಮನೆಯ ಒಂದು ಕೋಣೆಯಲ್ಲಿ ವಾಸವಾಗಿದ್ದಳು.

ಸಜಿತಾಳನ್ನು ರೆಹಮಾನ್​ ಅದೆಷ್ಟು ಗೌಪ್ಯವಾಗಿ ಇಟ್ಟಿದ್ದ ಎಂದರೆ ಆಕೆ ತಮ್ಮ ಮನೆಯಲ್ಲಿದ್ದಾಳೆ ಎಂಬುದು ರೆಹಮಾನ್​ ತಂದೆ-ತಾಯಿಗೂ ಗೊತ್ತಿರಲಿಲ್ಲ. ಶೌಚಕ್ಕಾಗಿ ಸಂಜೆ ಹೊತ್ತು ಕಿಟಕಿಯ ಸರಳು ತೆಗೆದು ಹೊರಹೋಗುತ್ತಿದ್ದಳು. ಮನರಂಜನೆಗಾಗಿ ಸಣ್ಣ ಟಿವಿಯನ್ನು ರೂಂನಲ್ಲಿ ಇಡಲಾಗಿತ್ತು.ಹೀಗೆ ಕಾಲ ಕಳೆಯುತ್ತಿದ್ದ ಪ್ರೇಮಿಗಳ ವಿಷಯ ಹೊರಬಿದ್ದಿದ್ದು ಜೂನ್​ ನಲ್ಲಿ. ಸಜಿತಾ ಮತ್ತು ರೆಹಮಾನ್​ ಯಾವುದೋ ಕಾರಣಕ್ಕೆ ಜಗಳವಾಡಿಕೊಂಡು ಸಜಿತಾ ಮನೆ ಬಿಟ್ಟು ಹೋಗಿದ್ದಳು. ಅದೇ ದೊಡ್ಡ ವಿಷಯವಾಗಿ ಪೊಲೀಸರು ತನಿಖೆ ಮಾಡಿದಾ ಇಂಥದ್ದೊಂದು ವಿಚಿತ್ರ ವಿಷಯ ಹೊರಬಿದ್ದಿತ್ತು. ಈ ಗುಟ್ಟು ಬಹಿರಂಗವಾಗುತ್ತಿದ್ದಂತೆ ಅಚ್ಚರಿಗೆ ಕಾರಣವಾಗಿತ್ತು.

ಆದರೆ ಇನ್ನು ಅವರು ಗುಟ್ಟಾಗಿ ಇರಬೇಕಿಲ್ಲ. ಬುಧವಾರವೇ ಪಲಕ್ಕಾಡ್​​ನ ನೆಮ್ಮಾರಾ ಉಪನೋಂದಣಿ ಕಚೇರಿಯಲ್ಲಿ, ಸ್ಪೆಶಲ್​ ಮ್ಯಾರೇಜ್​ ಆ್ಯಕ್ಟ್​ಗೆ ಅನುಸಾರವಾಗಿ ಮದುವೆಯಾಗಿದ್ದಾರೆ.  ಮದುವೆಯ ಬಳಿಕ ಇಬ್ಬರೂ ಸೇರಿ ಎಲ್ಲರಿಗೂ ಸಿಹಿ ಹಂಚಿದ್ದಾರೆ.  ಅದಕ್ಕೂ ಮಿಗಿಲಾಗಿ ಸಜಿತಾಳ ತಂದೆ-ತಾಯಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಆದರೆ ರೆಹಮಾನ್​ ಕುಟುಂಬ, ಸಂಬಂಧಿಕರು ಈ ಮದುವೆಯನ್ನು ಒಪ್ಪದೆ ದೂರವೇ ಉಳಿದಿದ್ದಾರೆ.  ಹಾಗೇ, ನೆಮ್ಮಾರಾ ಕ್ಷೇತ್ರದ ಶಾಸಕ ಕೆ.ಬಾಬು ಅವರೂ ಮದುವೆಗೆ ಆಗಮಿಸಿದ್ದರು. ಮನೆ ನಿರ್ಮಿಸಿ ಕೊಡುವ ಭರವಸೆಯನ್ನೂ ನೀಡಿದ್ದಾರೆ.

ಪ್ರೇಯಸಿಯನ್ನು ಹೇಗೆ ರಕ್ಷಿಸಿದ್ದ ರೆಹಮಾನ್​? 10 ವರ್ಷ ಪ್ರೇಯಸಿಯನ್ನು ತನ್ನದೇ ಮನೆಯಲ್ಲಿ ಇಟ್ಟು, ಪಾಲಕರ ಕಣ್ಣಿಗೆ ಬೀಳದಂತೆ ಕಾಪಾಡುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಆತ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್​ ಆಗಿದ್ದರಿಂದ ದಿನವೂ ಹೊರಗೇ ಹೋಗಬೇಕಿತ್ತು. ಈತ ಮನೆಯಲ್ಲಿ ಇಲ್ಲದಾಗ ಕೋಣೆಗೆ ಯಾರಾದರೂ ಹೋಗಿದ್ದರೆ ಸಜಿತಾ ಸಿಕ್ಕಿಬೀಳುತ್ತಿದ್ದಳು. ಆದರೆ ತನ್ನ ವೃತ್ತಿಯನ್ನೇ ಬಂಡವಾಳ ಆಗಿಸಿಕೊಂಡ ರೆಹಮಾನ್​ ಮನೆಯಲ್ಲಿ ಸಜಿತಾ ಇದ್ದ ತನ್ನ ಕೋಣೆಯ ಬಾಗಿಲು ಮುಟ್ಟಿದರೆ ಶಾಕ್​ ಹೊಡೆಯುವಂತೆ ವ್ಯವಸ್ಥೆ ಮಾಡಿದ್ದ.

ಇನ್ನು ರೂಮಿಗೆ ಊಟ ಜಾಸ್ತಿ ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ಪಾಲಕರು ಪ್ರಶ್ನೆ ಮಾಡಿದಾಗ ಜೋರಾಗಿ ಜಗಳವಾಡಿದ್ದ. ಆತನ ತಂದೆ-ತಾಯಿ, ಸೋದರಿ ಎಲ್ಲರೂ ಕೆಲಸಕ್ಕೆ ಹೋಗುವವರೇ ಆಗಿದ್ದರಿಂದ ಬರುಬರುತ್ತ ಎಲ್ಲರೂ ತಲೆ ಕೆಡಿಸಿಕೊಳ್ಳುವುದನ್ನೇ ಬಿಟ್ಟಿದ್ದರು. ಆದರೆ ಇತ್ತೀಚೆಗೆ ಸಜಿತಾ ಮನೆ ಬಿಟ್ಟು ಹೋದ ನಂತರ, ರೆಹಮಾನ್​ ಕೂಡ ಮನೆ ಬಿಟ್ಟು ಹೋದ. ಅನುಮಾನಗೊಂಡು ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ಹೆಚ್ಚಿನ ತನಿಖೆ ನಡೆಸಿದಾಗಲೇ ವಿಷಯ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಬರಾಕ್ ಒಬಾಮಾ 2014ರಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇವಲ ಒಂದು ಲೋಟ ನೀರು ಕುಡಿದಿದ್ದರು!

‘ನನ್ನ ಸಿನಿಮಾನ ಅಮ್ಮ ಫಸ್ಟ್​ ಡೇ ಫಸ್ಟ್​ ಶೋ ನೋಡ್ತಾ ಇದ್ರು’; ರವಿಚಂದ್ರನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada