ನವದೆಹಲಿ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂದಿನ ತಿಂಗಳು 6 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಿದ್ಧವಾಗಿರುವ ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಂದು ಕೊಲ್ಕತ್ತಾದಲ್ಲಿ ಭಾಷಣ ಮಾಡಿರುವ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
74 ವರ್ಷದ ಮಿಥುನ್ ಚಕ್ರವರ್ತಿ ಅವರು ತೃಣಮೂಲ ನಾಯಕ ಹುಮಾಯೂನ್ ಕಬೀರ್ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ. ಅವರು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಧಾರ್ಮಿಕ ಆಧಾರದ ಮೇಲೆ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದರು. ಇದು ಚುನಾವಣಾ ಆಯೋಗದ ಖಂಡನೆಗೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ಮಿಥುನ್ ಚಕ್ರವರ್ತಿ ಬಿಜೆಪಿ ಬೆಂಬಲಿಗರಿಗೆ “ಅವರನ್ನು ಕತ್ತರಿಸಿ ನೆಲದಲ್ಲಿ ಹೂತುಹಾಕಿ” ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ರಸ್ತೆ ಬದಿ ಮುಖ ಸುಟ್ಟಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ಉದ್ವಿಗ್ನತೆಯು ಉಪಚುನಾವಣೆಗಳಿಗೆ ಮುಂಚಿತವಾಗಿ ನಾಟಕೀಯವಾಗಿ ಉಲ್ಬಣಗೊಂಡಿದೆ. ಪಕ್ಷದ ನಾಯಕರ ಪ್ರಚೋದಕ ಹೇಳಿಕೆಗಳು ಚುನಾವಣಾ ಅಖಾಡದ ಕಾವೇರಿಸಿದೆ. ಶೇ. 70ರಷ್ಟು ಮುಸ್ಲಿಮರು ಮತ್ತು ಶೇ. 30ರಷ್ಟು ಹಿಂದೂಗಳಿದ್ದಾರೆ ಎಂದು ಒಬ್ಬ ನಾಯಕ ಒಮ್ಮೆ ಹೇಳಿದ್ದರು. ಅವರನ್ನು ‘ಕತ್ತರಿಸಿ ಭಾಗೀರಥಿ ನದಿಗೆ ಎಸೆಯುತ್ತೇನೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದಕ್ಕೆ ಪ್ರತಿಕ್ರಿಯಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ, ಅವರು ಉತ್ತರಿಸಲಿಲ್ಲ. ಆದ್ದರಿಂದ ಈಗ ನಾವು ಅವರನ್ನು ಕತ್ತರಿಸಿ ನೆಲದಲ್ಲಿ ಹೂತುಹಾಕಬೇಕಾಗಿದೆ ಎಂದು ಮಿಥುನ್ ಚಕ್ರವರ್ತಿ ಹೇಳಿದ್ದಾರೆ.
Watch Superb Speech of Mithun Chakraborty Dada 👍👌
More Power to you @mithunda_off Da🚩🙏 pic.twitter.com/lLwbV9KUqa— Amit Thakur 🇮🇳 (@Amit_Thakur_BJP) October 28, 2024
2026ರಲ್ಲಿ ಬಿಜೆಪಿ ಪಶ್ಚಿಮ ಬಂಗಾಳವನ್ನು ತನ್ನದಾಗಿಸಿಕೊಳ್ಳುತ್ತದೆ ಎಂದು ಚಕ್ರವರ್ತಿ ಭವಿಷ್ಯ ನುಡಿದಿದ್ದಾರೆ. ಕೊಲ್ಕತ್ತಾದಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಮಾತನಾಡಿದ ಮಿಥುನ್ ಚಕ್ರವರ್ತಿ, 2026ರ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ಸಿಂಹಾಸನವನ್ನು ಗೆಲ್ಲಲು ನಾವು ಏನು ಬೇಕಾದರೂ ಮಾಡುತ್ತೇವೆ. ಈ ರಾಜ್ಯ ಬಿಜೆಪಿಗೆ ಸೇರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಚೇತರಿಕೆ; ಪರೀಕ್ಷೆ ಮಾಡಿ ಶೀಘ್ರವೇ ಡಿಸ್ಚಾರ್ಜ್
ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಗಳು ವ್ಯಾಪಕ ಖಂಡನೆ ಮತ್ತು ಕಳವಳಕ್ಕೆ ಕಾರಣವಾಗಿವೆ. ಹಿಂಸಾತ್ಮಕ ಚಿತ್ರಣದಿಂದ ತುಂಬಿದ ಮಿಥುನ್ ಚಕ್ರವರ್ತಿಯವರ ಹೇಳಿಕೆಗಳು ಪಶ್ಚಿಮ ಬಂಗಾಳದ ರಾಜಕೀಯ ವಾತಾವರಣದಲ್ಲಿ ಕೋಲಾಹಲವನ್ನು ಉಂಟುಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Mon, 28 October 24