ಪಶ್ಚಿಮ ಬಂಗಾಳ: ರಸ್ತೆ ಬದಿ ಮುಖ ಸುಟ್ಟಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

ಪೊಲೀಸ್ ಠಾಣೆ ಬಳಿ ರಸ್ತೆಯ ಪಕ್ಕದಲ್ಲಿ ಮುಖ ಸುಟ್ಟಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿಯ ದೇಹದಲ್ಲಿ ಭಾಗಶಃ ಬಟ್ಟೆ ಇರಲಿಲ್ಲ. ಸುಮಾರು 20-21 ವರ್ಷ ವಯಸ್ಸಿನ ಯುವತಿ ಎಂದು ಹೇಳಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಕೃಷ್ಣನಗರದಲ್ಲಿದೆ.

ಪಶ್ಚಿಮ ಬಂಗಾಳ: ರಸ್ತೆ ಬದಿ ಮುಖ ಸುಟ್ಟಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ
ಪೊಲೀಸ್​Image Credit source: India Today
Follow us
ನಯನಾ ರಾಜೀವ್
|

Updated on:Oct 16, 2024 | 2:39 PM

ರಸ್ತೆಯ ಪಕ್ಕದಲ್ಲಿ ಮುಖ ಸುಟ್ಟಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿಯ ದೇಹದಲ್ಲಿ ಭಾಗಶಃ ಬಟ್ಟೆ ಇರಲಿಲ್ಲ. ಸುಮಾರು 20-21 ವರ್ಷ ವಯಸ್ಸಿನ ಯುವತಿ ಎಂದು ಹೇಳಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಕೃಷ್ಣನಗರದಲ್ಲಿದೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಮಹಿಳೆಯ ಮುಖ ಗುರುತಿಸಲಾಗದಷ್ಟು ಸುಟ್ಟು ಹೋಗಿತ್ತು. ಸ್ಥಳೀಯರು ಬೆಳಗಿನ ವಾಕಿಂಗ್ ಮಾಡುವಾಗ ಶವವನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಪ್ರಾಥಮಿಕ ಅನುಮಾನಗಳ ಪ್ರಕಾರ, ಮಹಿಳೆಯನ್ನು ಬೇರೆಡೆ ಕೊಂದು, ಆಕೆಯ ದೇಹವನ್ನು ಅಪರಿಚಿತ ದುಷ್ಕರ್ಮಿಗಳು ಪ್ರದೇಶದಲ್ಲಿ ಎಸೆಯುವ ಮೊದಲು ಆಕೆಯ ಮುಖಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.

ಸಾಕ್ಷ್ಯ ನಾಶಪಡಿಸಲು ಆಕೆಯ ಮೇಲೆ ಅತ್ಯಾಚಾರ ನಡೆಸಿ ಸುಟ್ಟು ಹಾಕಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಮತ್ತಷ್ಟು ಓದಿ: 9ನೇ ಕ್ಲಾಸ್ ಬಾಲಕಿಯ ಕುತ್ತಿಗೆಗೆ ದುಪಟ್ಟಾ ಬಿಗಿದು ಮೂವರು ಬಾಲಕರಿಂದ ಅತ್ಯಾಚಾರ

ಸೂಟ್‌ಕೇಸ್‌ನಲ್ಲಿ ತುಂಡಾಗಿ ಕತ್ತರಿಸಿದ ಮಹಿಳೆಯ ಶವ ಪತ್ತೆ ಚೆನ್ನೈನಲ್ಲಿ ರಸ್ತೆ ಬದಿಯಲ್ಲಿ ಎಸೆದಿದ್ದ ಸೂಟ್‌ಕೇಸ್‌ನಲ್ಲಿ ಮಹಿಳೆಯ ಛಿದ್ರಗೊಂಡ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಬೇರೆಡೆ ಕೊಲೆ ಮಾಡಿ ಸೂಟ್‌ಕೇಸ್ ಅನ್ನು ತೊರೈಪಾಕ್ಕಂನ ಐಟಿ ಕಾರಿಡಾರ್‌ಗೆ ಹೊಂದಿಕೊಂಡಿರುವ ವಸತಿ ಪ್ರದೇಶದಲ್ಲಿ ಬಿಸಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಚೆನ್ನೈನ ಕುಮಾರನ್ ಕುಡಿಲ್ ನಿವಾಸಿಯೊಬ್ಬರು ಮುಂಜಾನೆ 5.30ರ ಸುಮಾರಿಗೆ ತೊರೈಪಾಕ್ಕಂ ಪ್ರದೇಶದಲ್ಲಿ ಬಿದ್ದಿರುವ ಸೂಟ್‌ಕೇಸ್ ಬಗ್ಗೆ ಪೊಲೀಸರಿಗೆ ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಆಕೆಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನೂ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಮೃತ ಮಹಿಳೆಯನ್ನು ಮನಾಲಿಯ 32 ವರ್ಷದ ದೀಪಾ ಎಂದು ಗುರುತಿಸಲಾಗಿದ್ದು, ಆಕೆ ಅವಿವಾಹಿತೆಯಾಗಿದ್ದಳು. ಚೆನ್ನೈನ ದಕ್ಷಿಣ ಉಪನಗರದ ತೊರೈಪಾಕ್ಕಂ ಬಳಿ ಈ ಭೀಕರ ಹತ್ಯೆ ನಡೆದಿದೆ. ಪೊಲೀಸರು ಶಿವಗಂಗಾ ಜಿಲ್ಲೆಯ ನಿವಾಸಿ ಮಣಿಕಂದನ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:31 pm, Wed, 16 October 24