ಇಡಿ ಸಮನ್ಸ್ಗೆ ಹಾಜರಾಗದ ಕೇಜ್ರಿವಾಲ್: ಆಪ್ ವಿರುದ್ಧ ನವಜೋತ್ ಸಿಂಗ್ ಸಿಧು ಗುಡುಗು
ಕಾಲೇಜುಗಳು, ಶಾಲೆಗಳು ಅಥವಾ ಧಾರ್ಮಿಕ ಸ್ಥಳಗಳ ಬಳಿ ಮದ್ಯ ಮಾರಾಟ ಮಾಡುವುದಿಲ್ಲ ಎಂದು ಹೇಳುವ ಮೂಲಕ ಅವರು (ಅಧಿಕಾರಕ್ಕೆ) ಬಂದರು. ದೆಹಲಿಯಲ್ಲಿ ಈ (ಅಬಕಾರಿ) ನೀತಿ ಬಂದಾಗ, ಇದು ಸುಮಾರು 2.5 ರಿಂದ 3 ತಿಂಗಳವರೆಗೆ ಜಾರಿಯಲ್ಲಿತ್ತು. ಅದನ್ನು 2.5-3 ತಿಂಗಳ ನಂತರ ಹಿಂತೆಗೆದುಕೊಳ್ಳಬೇಕಾಯಿತು, ”ಎಂದು ಪಂಜಾಬ್ ಮಾಜಿ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ದೆಹಲಿ ನವೆಂಬರ್ 02: ಅಬಕಾರಿ ನೀತಿ ಅವ್ಯವಹಾರ (Delhi excise policy) ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ನೀಡಿದೆ. ಗುರುವಾರ ವಿಚಾರಣೆಗೆ ಹಾಜರಾಗದೇ ಇರುವ ಕೇಜ್ರಿವಾಲ್ ವಿರುದ್ಧ ಗುಡುಗಿದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಇಂಡಿಯಾ ಬಣದ ಪ್ರಮುಖ ಸದಸ್ಯ ಆಮ್ ಆದ್ಮಿ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಟಿಯಾಲಾ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಧು, ಎಎಪಿ ನೇತೃತ್ವದ ದೆಹಲಿ ಸರ್ಕಾರ ತಂದಿರುವ ಅಬಕಾರಿ ನೀತಿಯನ್ನು ಜಾರಿಗೆ ತಂದ ಮೂರು ತಿಂಗಳೊಳಗೆ ಹಿಂತೆಗೆದುಕೊಂಡಿದರೆ ಎಂದರೆ ಅದರಲ್ಲೇನೋ ತಪ್ಪು ಇತ್ತು ಎಂದಿದ್ದಾರೆ.
ಕಾಲೇಜುಗಳು, ಶಾಲೆಗಳು ಅಥವಾ ಧಾರ್ಮಿಕ ಸ್ಥಳಗಳ ಬಳಿ ಮದ್ಯ ಮಾರಾಟ ಮಾಡುವುದಿಲ್ಲ ಎಂದು ಹೇಳುವ ಮೂಲಕ ಅವರು (ಅಧಿಕಾರಕ್ಕೆ) ಬಂದರು. ದೆಹಲಿಯಲ್ಲಿ ಈ (ಅಬಕಾರಿ) ನೀತಿ ಬಂದಾಗ, ಇದು ಸುಮಾರು 2.5 ರಿಂದ 3 ತಿಂಗಳವರೆಗೆ ಜಾರಿಯಲ್ಲಿತ್ತು. ಅದನ್ನು 2.5-3 ತಿಂಗಳ ನಂತರ ಹಿಂತೆಗೆದುಕೊಳ್ಳಬೇಕಾಯಿತು, ”ಎಂದು ಪಂಜಾಬ್ ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು. ಕಾರನ್ನು ವಾಪಸ್ ಕರೆದುಕೊಂಡಾದ ಅದು ಉತ್ಪಾದನಾ ದೋಷದ ಕಾರಣದಿಂದಾಗಿರುತ್ತದೆ. ಅದು ಸಾರ್ವಜನಿಕ ಹಿತಾಸಕ್ತಿಯಾಗಿದ್ದರೆ ಅದನ್ನು ಏಕೆ ಹಿಂತೆಗೆದುಕೊಳ್ಳಲಾಯಿತು? ಅದೇ ನೀತಿಯನ್ನು ಪಂಜಾಬ್‌ನಲ್ಲಿ ಜಾರಿಗೊಳಿಸಲಾಗಿದೆ ಮತ್ತು ಇನ್ನೂ ಹಿಂಪಡೆದಿಲ್ಲ ಎಂದು ಅವರು ಹೇಳಿದರು.
“चोरी और सीना ज़ोरी” https://t.co/YDHR7N37No
— Navjot Singh Sidhu (@sherryontopp) November 2, 2023
ಆಪಾದಿತ ಮದ್ಯ ನೀತಿ ಹಗರಣಕ್ಕೆ ಎಎಪಿಯ ಪ್ರತಿಕ್ರಿಯೆಯನ್ನು ‘ಚೋರಿ ಔರ್ ಸೀನಾ ಜೋರಿ’ ಎಂದು ಸಿಧು ಲೇವಡಿ ಮಾಡಿದ್ದಾರೆ. ದೆಹಲಿ ಅಬಕಾರಿ ನೀತಿ ಸಂಬಂಧಿತ ಪ್ರಕರಣದಲ್ಲಿ ಕೇಜ್ರಿವಾಲ್ ಗುರುವಾರ ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿಲ್ಲ. ಇದು “ಅಕ್ರಮ ಮತ್ತು ರಾಜಕೀಯ ಪ್ರೇರಿತ” ಎಂದು ಆರೋಪಿಸಿ ಅವರಿಗೆ ಸಮನ್ಸ್ ನೀಡಿದ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ಏಜೆನ್ಸಿಗೆ ಪತ್ರ ಬರೆದಿದ್ದಾರೆ. ತನಿಖಾಧಿಕಾರಿಗೆ ಸಿಎಂ ನೀಡಿದ ಎರಡು ಪುಟಗಳ ಉತ್ತರವನ್ನು ಇಡಿ ಪರಿಶೀಲಿಸುತ್ತಿದೆ ಎಂದು ವಿಷಯ ತಿಳಿದ ಜನರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಏಜೆನ್ಸಿಯು ಹತ್ತಿರದ ದಿನಾಂಕಕ್ಕಾಗಿ ಹೊಸ ಸಮನ್ಸ್‌ಗಳನ್ನು ನೀಡಬಹುದು ಎಂದು ವರದಿ ಸೂಚಿಸುತ್ತದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್, “ಇಂದು, ದೆಹಲಿ ಮುಖ್ಯಮಂತ್ರಿಯನ್ನು ಇಡಿ ಮುಂದೆ ಹಾಜರಾಗುವಂತೆ ಕೇಳಲಾಗಿದೆ. ಅವರು ಇಡಿಗೆ ಪತ್ರ ಬರೆದಿದ್ದಾರೆ, ಅವರು ಯಾಕೆ ವಿಚಾರಣೆ ಕರೆದಿದ್ದಾರೆ ಎಂಬುದನ್ನು ಸಮನ್ಸ್ ಸ್ಪಷ್ಟಪಡಿಸುವುದಿಲ್ಲ.
ಇದನ್ನೂ ಓದಿ: ಬಂಗಲೆ ನವೀಕರಣದ ವಿವಾದ; ಸುಳ್ಳು ತನಿಖೆ ನಡೆಸಿದ್ದಕ್ಕಾಗಿ ಪ್ರಧಾನಿ ರಾಜೀನಾಮೆ ನೀಡುತ್ತಾರಾ?: ಕೇಜ್ರಿವಾಲ್
“ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗುವುದು ಎಂದು ಹೇಗೆ ಹೇಳಿದ್ದಾರೆ? ಇದರರ್ಥ ಇದು ರಾಜಕೀಯ ಪಿತೂರಿಯಾಗಿದೆ. ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿವೆ ಮತ್ತು ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್ ಪ್ರಚಾರಕ್ಕೆ ಹೋಗಬೇಕಾಗಿದ ಎಂದು ದೆಹಲಿ ಸರ್ಕಾರದ ಕ್ಯಾಬಿನೆಟ್ ಸಚಿವ ಭಾರದ್ವಾಜ್ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ