ನಾನು 20ರ ಹರೆಯದಲ್ಲಿ ರೇಡಿಯೊ ಜಾಕಿ ಆಗಿ ಮೂನ್ಲೈಟ್ ಮಾಡುತ್ತಿದ್ದೆ: ಸಿಜೆಐ ಡಿವೈ ಚಂದ್ರಚೂಡ್
ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ, ಆದರೆ ನಾನು ನನ್ನ 20 ಹರೆಯದಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ (AIR) ರೇಡಿಯೋ ಜಾಕಿಯಾಗಿ ಮೂನ್‌ಲೈಟಿಂಗ್ ಮಾಡಿದ್ದೇನೆ. 'ಪ್ಲೇ ಇಟ್ ಕೂಲ್', 'ಡೇಟ್ ವಿತ್ ಯು' ಅಥವಾ 'ಸಂಡೇ ರಿಕ್ವೆಸ್ಟ್' ನಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆ ಎಂದು ಸಿಜೆಐ ಹೇಳಿದ್ದಾರೆ.
ನಮ್ಮ ದೇಶದ ಕಾನೂನು ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಅನೇಕ ಐತಿಹಾಸಿಕ ನಿರ್ಧಾರಗಳನ್ನು ನೀಡಿದ ಭಾರತದ 50ನೇ ಮತ್ತು ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಧನಂಜಯ ಯಶವಂತ್ ಚಂದ್ರಚೂಡ್ (Dhananjaya Yashwant Chandrachud). ಡಿವೈ ಚಂದ್ರಚೂಡ್ (CJI DY Chandrachud) ಅವರ ನ್ಯಾಯ-ಆಧಾರಿತ ವಿಧಾನ ಮತ್ತು ಅಂತರ್ಗತ ತೀರ್ಪುಗಳು ಯಾವಾಗಲೂ ಕಾನೂನು ವಲಯದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿನ ಜನರಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದಿವೆ. ಸಿಜೆಐ ಚಂದ್ರಚೂಡ್ ಅವರು ದುರುಪಯೋಗ ಮಾಡುವವರ ವಿರುದ್ಧ ಕಠಿಣ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆ ಸಂವೇದನಾಶೀಲರಾಗಿ ಸಾಕಷ್ಟು ಹೆಸರನ್ನು ಗಳಿಸಿದ್ದಾರೆ. ಅವರ ಉದಾರ ಮತ್ತು ಪ್ರಗತಿಪರ ತೀರ್ಪಿಗಾಗಿ ಚಂದ್ರಚೂಡ್ ಅವರು ಅಯೋಧ್ಯೆ ತೀರ್ಪು, ಖಾಸಗಿತನದ ಹಕ್ಕು, ಶಬರಿಮಲೆ ಪ್ರಕರಣ(Sarbimala case), ಸೌಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣ ಮತ್ತು ಇನ್ನೂ ಅನೇಕ ಮಹತ್ವದ ತೀರ್ಪುಗಳ ಭಾಗವಾಗಿದ್ದಾರೆ. ಸುಲ್ಲಿವಾನ್ ಮತ್ತು ಕ್ರಾಮ್‌ವೆಲ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡುವ ಮೊದಲು ಅವರು ದೆಹಲಿ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಇವರ ವೃತ್ತಿಜೀವನವು ವಕೀಲರು ಮತ್ತು ನ್ಯಾಯಾಧೀಶರಿಗೆ ಸಹಾಯ ಮಾಡುವ ಕಿರಿಯ ವಕೀಲರ ವೃತ್ತಿಯಿಂದ ಆರಂಭವಾಯಿತು. 2000 ರ ಹೊತ್ತಿಗೆ ಅವರು ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾದರು.ನಂತರ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು.
ಇತ್ತೀಚೆಗೆ ಸಮ್ಮೇಳನವೊಂದರಲ್ಲಿ ಮಾತನಾಡಿದ ಸಿಜೆಐ ಡಿವೈ ಚಂದ್ರಚೂಡ್ ಅವರು ತಮ್ಮ 20ರ ಹರೆಯದಲ್ಲಿ ಆಲ್ ಇಂಡಿಯಾ ರೇಡಿಯೋ (AIR) ಗೆ ರೇಡಿಯೊ ಜಾಕಿಯಾಗಿ ಮೂನ್‌ಲೈಟಿಂಗ್ ಮಾಡುತ್ತಿದ್ದೆ ಎಂದಿದ್ದಾರೆ. ನಾನು ‘ಪ್ಲೇ ಇಟ್ ಕೂಲ್’, ‘ಡೇಟ್ ವಿತ್ ಯು’ ಅಥವಾ ‘ಸಂಡೇ ರಿಕ್ವೆಸ್ಟ್’ ನಂತಹ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೆ ಎಂದು ಅವರು ಹೇಳಿದ್ದಾರೆ. ಮೂನ್‌ಲೈಟಿಂಗ್ ಎಂದರೆ ಒಬ್ಬರ ನಿಯಮಿತ ಉದ್ಯೋಗದ ಜೊತೆಗೆ ಸಾಮಾನ್ಯವಾಗಿ ರಹಸ್ಯವಾಗಿ ಮತ್ತು ರಾತ್ರಿಯಲ್ಲಿ ಎರಡನೇ ಕೆಲಸವನ್ನು ಮಾಡುವುದು. ಅಂದರೆ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗಲೇ ರೇಡಿಯೊ ಜಾಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
Did you know CJI DY Chandrachud moonlighted as a RADIO JOCKEY in his early 20’s – Do listen to him#SupremeCourt #SupremeCourtofIndia #cjichandrachud
Video Credit – BCI pic.twitter.com/EdvRqntXST
— Bar & Bench (@barandbench) December 4, 2022
ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ, ಆದರೆ ನಾನು ನನ್ನ 20 ಹರೆಯದಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ (AIR) ರೇಡಿಯೋ ಜಾಕಿಯಾಗಿ ಮೂನ್‌ಲೈಟಿಂಗ್ ಮಾಡಿದ್ದೇನೆ. ‘ಪ್ಲೇ ಇಟ್ ಕೂಲ್’, ‘ಡೇಟ್ ವಿತ್ ಯು’ ಅಥವಾ ‘ಸಂಡೇ ರಿಕ್ವೆಸ್ಟ್’ ನಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆ ಎಂದು ಸಿಜೆಐ ಹೇಳಿರುವ ವಿಡಿಯೊ ತುಣುಕನ್ನು ಬಾರ್ ಆಂಡ್ ಬೆಂಚ್ ಟ್ವೀಟ್ ಮಾಡಿದೆ.
ಸಂಗೀತದ ಮೇಲಿನ ನನ್ನ ಪ್ರೀತಿ ಇಂದಿಗೂ ಉಳಿದುಕೊಂಡಿದೆ. ಹಾಗಾಗಿ ನಾನು ವಕೀಲರ ಸಂಗೀತವನ್ನು ಮುಗಿಸಿದ ನಂತರ, ಅದು ಯಾವಾಗಲೂ ಕಿವಿಗೆ ಇಂಪಾಗಿರಲ್ಲ. ನಾನು ದಿನಾ ಕಿವಿಗೆ ಇಂಪಾಗಿರುವ ಸಂಗೀತವನ್ನು ಕೇಳತೊಡಗುತ್ತೇನೆ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.
ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ನವೆಂಬರ್ 9 ರಂದು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಅಧಿಕಾರ ಸ್ವೀಕರಿಸಿದ್ದರು. ಇತ್ತೀಚೆಗೆ, ಅವರು ಕಾನೂನು ಶಿಕ್ಷಣದಲ್ಲಿ ಹೆಚ್ಚಿನ ವೈವಿಧ್ಯತೆಗೆ ಕರೆ ನೀಡಿದ್ದರು, ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) ಮೂಲಕ ರಾಷ್ಟ್ರೀಯ ಕಾನೂನು ಶಾಲೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಸ್ತುತ ವ್ಯವಸ್ಥೆಯು “ಯಾವಾಗಲೂ ಮೌಲ್ಯಾಧಾರಿತ ಕಾನೂನು ಶಿಕ್ಷಣವನ್ನು ಉತ್ತೇಜಿಸುವುದಿಲ್ಲ” ಎಂದು ಸಿಜೆಐ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ