ಇತಿಹಾಸದಲ್ಲೇ ಮೊದಲು: ಸುಪ್ರೀಂಕೋರ್ಟ್ಗೆ ನೇಮಕವಾದ 9 ನ್ಯಾಯಮೂರ್ತಿಗಳಿಂದ ಒಟ್ಟಿಗೇ ಪ್ರಮಾಣವಚನ ಸ್ವೀಕಾರ
ಮೊದಲಿನಿಂದಲೂ ನಡೆದುಕೊಂಡ ಪದ್ಧತಿಯಂತೆ ಹೊಸದಾಗಿ ನೇಮಕಗೊಳ್ಳುವ ನ್ಯಾಯಾಧೀಶರು, ಸಿಜೆಐ ಅವರ ಕೋರ್ಟ್ ರೂಮ್ನಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಆದರೆ ಈ ಬಾರಿ ಹಾಗೆ ಮಾಡಿಲ್ಲ.
ದೆಹಲಿ: ಇಂದು ಒಟ್ಟು 9 ನ್ಯಾಯಾಧೀಶರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ(Supreme Court Judges)ಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೂವರು ಮಹಿಳಾ ಜಡ್ಜ್ಗಳು ಸೇರಿ 9 ನ್ಯಾಯಾಧೀಶರಿಗೆ ಮುಖ್ಯ ನ್ಯಾಯಮೂರ್ತಿ (CJI) ಎನ್.ವಿ.ರಮಣ (NV Ramana) ಪ್ರಮಾಣವಚನ ಬೋಧಿಸಿದರು. ಈ ಮೂಲಕ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ಸಿಜೆಐ ಸೇರಿ ನ್ಯಾಯಮೂರ್ತಿಗಳ ಬಲ 34ಕ್ಕೆ ತಲುಪಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ, ಇತಿಹಾಸದಲ್ಲಿ ಇದೇ ಮೊದಲಬಾರಿಗೆ 9 ನ್ಯಾಯಾಧೀಶರು, ಸುಪ್ರೀಂ ನ್ಯಾಯಮೂರ್ತಿಗಳಾಗಿ ಒಟ್ಟಿಗೇ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಮೊದಲಿನಿಂದಲೂ ನಡೆದುಕೊಂಡ ಪದ್ಧತಿಯಂತೆ ಹೊಸದಾಗಿ ನೇಮಕಗೊಳ್ಳುವ ನ್ಯಾಯಾಧೀಶರು, ಸಿಜೆಐ ಅವರ ಕೋರ್ಟ್ ರೂಮ್ನಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಆದರೆ ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದ ಪ್ರಮಾಣವಚನ ಸಮಾರಂಭ ಸುಪ್ರೀಂಕೋರ್ಟ್ಗೆ ಹೊಂದಿಕೊಂಡಿರುವ ಕಟ್ಟಡ ಸಂಕೀರ್ಣದ ಅಡಿಟೋರಿಯಂನಲ್ಲಿ ನಡೆದಿದೆ. ಈ ಬಾರಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನೇಮಕಾತಿ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ 9 ಜಡ್ಜ್ಗಳ ಹೆಸರನ್ನು ಶಿಫಾರಸ್ಸು ಮಾಡಿತ್ತು. ಅದರಲ್ಲಿ ಕೆಲವು ಹೆಸರುಗಳನ್ನು ಮರುಪರಿಶೀಲನೆ ಮಾಡುವಂತೆ ಸರ್ಕಾರ ಹೇಳಿತ್ತು. ಆದರೆ ಸುಪ್ರೀಂಕೋರ್ಟ್ ಸಿಜೆಐ ಅದನ್ನು ನಿರಾಕರಿಸಿದ್ದರು. ನಂತರ ಸರ್ಕಾರ 9 ಮಂದಿಯ ಹೆಸರಿಗೂ ಅನುಮೋದನೆ ನೀಡಿತ್ತು.
ಸುಪ್ರೀಂಕೋರ್ಟ್ನ ಹೊಸ ನ್ಯಾಯಮೂರ್ತಿಗಳ ಹೆಸರು ಹೀಗಿದೆ.. 1.ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ 2.ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್.ಒಕಾ 3.ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ 4.ಸಿಕ್ಕಿಂ ಮುಖ್ಯನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ 5. ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶೆ ಬಿ.ವಿ.ನಾಗರತ್ನಾ 6. ಮದ್ರಾಸ್ ಹೈಕೋರ್ಟ್ ಜಡ್ಜ್ ಎಂ.ಎಂ.ಸುಂದರೇಶ್ 7. ಕೇರಳ ಹೈಕೋರ್ಟ್ ನ್ಯಾಯಾಧೀಶ ಸಿ.ಟಿ.ರವಿಕುಮಾರ್ 8. ಗುಜರಾತ್ ಹೈಕೋರ್ಟ್ ನ್ಯಾಯಾಧೀಶ ಬೇಲಾ ಎಂ.ತ್ರಿವೇದಿ 9. ಹಿರಿಯ ನ್ಯಾಯವಾಧಿ ಪಿ.ಎಸ್.ನರಸಿಂಹ
ಇದನ್ನೂ ಓದಿ: ಮೇಕೆದಾಟು ಡಿಪಿಆರ್ ಬಗ್ಗೆ ಪ್ರಸ್ತಾಪಿಸಲು ಮುಂದಾದ ಕರ್ನಾಟಕ; ಚರ್ಚೆ ಮಾಡಕೂಡದು ಎಂದು ಆಕ್ಷೇಪ ತೆಗೆದ ತಮಿಳುನಾಡು
ಸುಪ್ರೀಂಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರಾ ಕರ್ನಾಟಕ ಮೂಲದ ನ್ಯಾ. ಬಿ.ವಿ.ನಾಗರತ್ನ?
(CJI Ramana Administers Oath to 9 New SC Judges Including 3 Women)