Neem Benefits: ಕೊರೊನಾ ಸೋಂಕು ತಡೆಗಟ್ಟಲು ಕಹಿಬೇವು ಪರಿಣಾಮಕಾರಿ; ಅಧ್ಯಯನ ವರದಿ

50 ಎಮ್​ಜಿ ನೀಮ್ ಕ್ಯಾಪ್ಸೂಲ್​ನ್ನು 28 ದಿನಗಳ ಕಾಲ ದಿನಕ್ಕೆ ಎರಡು ಬಾರಿ ಸೇವಿಸುವವರಿಗೆ ಕೊವಿಡ್-19 ಸೋಂಕು ತಗುಲುವ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆಯಾಗಿದೆ.

Neem Benefits: ಕೊರೊನಾ ಸೋಂಕು ತಡೆಗಟ್ಟಲು ಕಹಿಬೇವು ಪರಿಣಾಮಕಾರಿ; ಅಧ್ಯಯನ ವರದಿ
Follow us
TV9 Web
| Updated By: ganapathi bhat

Updated on:Aug 23, 2021 | 12:33 PM

ದೆಹಲಿ: ಕೊರೊನಾ ತಡೆಗಟ್ಟಲು ನೀಮ್ ಕ್ಯಾಪ್ಸೂಲ್ (ಕಹಿಬೇವು ಕ್ಯಾಪ್ಸೂಲ್) ಪರಿಣಾಮಕಾರಿ ಎಂದು ಫರಿದಾಬಾದ್​ನ ಇಎಸ್​ಐಸಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಮತ್ತು ನಿಸರ್ಗ ಬಯೋಟೆಕ್ ಲಿಮಿಟೆಡ್ ಕಂಪೆನಿಗಳು ಇಂದು ತಿಳಿಸಿವೆ. ಈ ಬಗ್ಗೆ ಅಧ್ಯಯನ ನಡೆಸಿರುವ ಫಲಿತಾಂಶ, ದಾಖಲೆಗಳನ್ನು ಕೂಡ ಅವು ಬಹಿರಂಗಪಡಿಸಿವೆ. ನೀಮ್ (Azadirachta Indica A. Juss) ಎಲೆಯ ಅಂಶದಿಂದ ಕೊರೊನಾ ತಡೆಗಟ್ಟಬಹುದು ಎಂದು ತಿಳಿದುಬಂದಿದೆ. ಈ ಅಧ್ಯಯನವನ್ನು ಫರಿದಾಬಾದ್​ನ ಇಎಸ್​ಐಸಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಮತ್ತು ನವ ದೆಹಲಿಯ ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA) ಜಂಟಿಯಾಗಿ ನಡೆಸಿದ್ದು, ನಿಸರ್ಗ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಸತಾರ ಪ್ರಾಯೋಜಿಸಿದೆ.

ಈ ಅಧ್ಯಯನವನ್ನು ಫರಿದಾಬಾದ್​ನ ಇಎಸ್​ಐಸಿ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ 18ರಿಂದ 60 ವರ್ಷದೊಳಗಿನ 190 ಮಂದಿಯ ಮೇಲೆ ನಡೆಸಲಾಗಿದೆ. ಆಗಸ್ಟ್​ನಿಂದ ಡಿಸೆಂಬರ್ 2020ರ ಅವಧಿಯಲ್ಲಿ ಪ್ರೊ. ತನುಜಾ ನೇಸರಿ (MD, PhD), ಎಐಐಎ ನಿರ್ದೇಶಕರು ಹಾಗೂ ಡಾ. ಎ.ಕೆ. ಪಾಂಡೆ ಇಎಸ್​ಐಸಿ ಆಸ್ಪತ್ರೆ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಅಧ್ಯಯನವನ್ನು ಸಿಟಿಆರ್​ಐ (Institutional Ethics Committee and registered at Clinical Trial Registry of India) ಸಂಸ್ಥೆ ಅನುಮೋದಿಸಿದೆ. ಅಧ್ಯಯನವನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ ಎಂದೂ ತಿಳಿಸಲಾಗಿದೆ.

50 ಎಮ್​ಜಿ ನೀಮ್ ಕ್ಯಾಪ್ಸೂಲ್​ನ್ನು 28 ದಿನಗಳ ಕಾಲ ದಿನಕ್ಕೆ ಎರಡು ಬಾರಿ ಸೇವಿಸುವವರಿಗೆ ಕೊವಿಡ್-19 ಸೋಂಕು ತಗುಲುವ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ನೀಮ್ ಕ್ಯಾಪ್ಸೂಲ್ ಪರಿಣಾಮದ ಬಗ್ಗೆ ಡಾ. ಅನಿಲ್ ಕುಮಾರ್ ಪಾಂಡೆ ಮಾತನಾಡಿದ್ದಾರೆ. ಆಯುರ್ವೇದ ಔಷಧ ಪದ್ಧತಿಯಲ್ಲಿ ರೋಗನಿರೋಧಕ ಶಕ್ತಿ ತುಂಬುವ ಸಾಮರ್ಥ್ಯವಿದೆ. ಈ ಅಧ್ಯಯನ ವರದಿಯು ರೋಗನಿರೋಧಕ ಶಕ್ತಿ ಸಾಮರ್ಥ್ಯ ಹೆಚ್ಚಳದ ವಿಚಾರದಲ್ಲಿ ದೊಡ್ಡ ಹೆಜ್ಜೆಯಾಗಿದೆ. ಕೊರೊನಾ ಸೋಂಕಿಗೆ ನಿಗದಿತ ಚಿಕಿತ್ಸೆ ಇಲ್ಲದ ಸಮಯದಲ್ಲಂತೂ ಇದು ಬಹುಮುಖ್ಯ ಅಧ್ಯಯನ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಆಯುರ್ವೇದ ಔಷಧಗಳನ್ನು ವಿವಿಧ ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸುವುದನ್ನು ನಾವು ಕೇಳಿರುವುದಿಲ್ಲ. ಆದರೆ, ಈ ಕ್ಯಾಪ್ಸೂಲ್ ಪರಿಣಾಮವನ್ನು ಹಾಗೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಅಧ್ಯಯನ ವರದಿಯು ವಿದೇಶಿ ವೈದ್ಯಕೀಯ ಅಧ್ಯಯನ ಪತ್ರಿಕೆಯಲ್ಲಿ ಕೂಡ ಪ್ರಕಟಗೊಂಡಿದೆ. ಒಂದುವೇಳೆ ಕೊರೊನಾ ತಡೆಗಟ್ಟಲು ಕಹಿಬೇವು ಬಳಕೆಯಿಂದ ಸಾಧ್ಯ ಎಂದಾದರೆ ಅದು ವೈದ್ಯಕೀಯ ಲೋಕಕ್ಕೆ ಅಥವಾ ಆಯುರ್ವೇದ ಪದ್ಧತಿಗೆ ಹೊಸ ಮೈಲುಗಲ್ಲಾಗಲಿದೆ.

ಇದನ್ನೂ ಓದಿ: ಕೊರೊನಾ ರೋಗಿಗಳು ಉಸಿರಾಟದ ವ್ಯಾಯಾಮ ಮಾಡುವುದು ಹೇಗೆ?..ಇಲ್ಲಿದೆ ನೋಡಿ ಕೇಂದ್ರ ಸರ್ಕಾರ ಸೂಚಿಸಿದ ಕ್ರಮಗಳು

Covid Vaccine: ವರ್ಷಾಂತ್ಯದೊಳಗೆ ಭಾರತದಲ್ಲಿ ಸಿಗಲಿರುವ 8 ಕೊರೊನಾ ಲಸಿಕೆಗಳು ಯಾವುವು?

Published On - 3:38 pm, Sat, 15 May 21

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್