‘ಬಂಗಾಳವನ್ನು ಸುಟ್ಟರೆ…’; ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ ಮಮತಾ ಬ್ಯಾನರ್ಜಿ ವಿರುದ್ಧ ದೂರು

ಮಮತಾ ಬ್ಯಾನರ್ಜಿಯವರ ಹೇಳಿಕೆಯು ಪ್ರಚೋದನಕಾರಿಯಾಗಿದೆ. ಇದು ಪ್ರಾದೇಶಿಕ ದ್ವೇಷ ಮತ್ತು ವೈರತ್ವವನ್ನು ಪ್ರಚೋದಿಸುತ್ತದೆ. ಇದರಿಂದಾಗಿ ರಾಷ್ಟ್ರೀಯ ಸಾಮರಸ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಮುಖ್ಯಮಂತ್ರಿಯಾಗಿ, ಬ್ಯಾನರ್ಜಿಯವರ ಮಾತುಗಳು ತೂಕದ್ದಾಗಿರುತ್ತದೆ. ಈ  ಆಪಾದಿತ ಹೇಳಿಕೆಗಳು ಅಪಾಯಕಾರಿಯಾಗಿವೆ ಎಂದು ಜಿಂದಾಲ್ ಹೇಳಿದ್ದಾರೆ.

'ಬಂಗಾಳವನ್ನು ಸುಟ್ಟರೆ...'; ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ ಮಮತಾ ಬ್ಯಾನರ್ಜಿ ವಿರುದ್ಧ ದೂರು
ಮಮತಾ ಬ್ಯಾನರ್ಜಿ
Follow us
ರಶ್ಮಿ ಕಲ್ಲಕಟ್ಟ
|

Updated on:Aug 29, 2024 | 5:15 PM

ದೆಹಲಿ ಆಗಸ್ಟ್ 29: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬುಧವಾರ ಮಾಡಿದ ಭಾಷಣದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ತೃಣಮೂಲ ಛಾತ್ರ ಪರಿಷತ್ತಿನ (Trinamool Chhatra Parishad )ಕಾರ್ಯಕ್ರಮವೊಂದರಲ್ಲಿ ಬ್ಯಾನರ್ಜಿ ನೀಡಿದ ಹೇಳಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿರುವ ವಿನೀತ್ ಜಿಂದಾಲ್ ಅವರು ಸಲ್ಲಿಸಿದ ದೂರಿನಲ್ಲಿ, “ನೆನಪಿಡಿ, ಬಂಗಾಳ ಸುಟ್ಟುಹೋದರೆ, ಅಸ್ಸಾಂ, ಬಿಹಾರ, ಜಾರ್ಖಂಡ್, ಒಡಿಶಾ, ಮತ್ತು ದೆಹಲಿ ಕೂಡ ಉರಿಯುತ್ತದೆ ಎಂದು ಮಮತಾ ಹೇಳಿರುವುದಾಗಿ ದೂರಿದ್ದಾರೆ.

ಮಮತಾ ಬ್ಯಾನರ್ಜಿಯವರ ಹೇಳಿಕೆಯು ಪ್ರಚೋದನಕಾರಿಯಾಗಿದೆ. ಇದು ಪ್ರಾದೇಶಿಕ ದ್ವೇಷ ಮತ್ತು ವೈರತ್ವವನ್ನು ಪ್ರಚೋದಿಸುತ್ತದೆ. ಇದರಿಂದಾಗಿ ರಾಷ್ಟ್ರೀಯ ಸಾಮರಸ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಮುಖ್ಯಮಂತ್ರಿಯಾಗಿ, ಬ್ಯಾನರ್ಜಿಯವರ ಮಾತುಗಳು ತೂಕದ್ದಾಗಿರುತ್ತದೆ. ಈ  ಆಪಾದಿತ ಹೇಳಿಕೆಗಳು ಅಪಾಯಕಾರಿಯಾಗಿವೆ ಎಂದು ಜಿಂದಾಲ್ ಹೇಳಿದ್ದಾರೆ.

“ಭಾರತದ ಜನಸಾಮಾನ್ಯರ ನಡುವೆ ಅಸಂಗತತೆಯನ್ನು ಉಂಟುಮಾಡುವ ಮತ್ತು ದ್ವೇಷ ಮತ್ತು ವೈರತ್ವವನ್ನು ಬೆಳೆಸುವ ಉದ್ದೇಶವನ್ನು ಹೊಂದಿರುವ ಅವರ ಹೇಳಿಕೆಯ ಪ್ರಚೋದನಕಾರಿ ಸ್ವರೂಪವನ್ನು ಗಮನಿಸಿದರೆ, ಅವರು ತಮ್ಮ ಹೇಳಿಕೆಯಲ್ಲಿ ದೆಹಲಿಯ ಹೆಸರನ್ನು ರಾಜ್ಯಗಳಲ್ಲಿ ಒಂದಾಗಿ ಉಲ್ಲೇಖಿಸಿದ್ದಾರೆ, ನಾನು ದೆಹಲಿಯ ನಿವಾಸಿಯಾಗಿದ್ದೇನೆ. ಮಮತಾ ಬ್ಯಾನರ್ಜಿ ವಿರುದ್ಧ BNS ನ ಸೆಕ್ಷನ್ 152, 192, 196 ಮತ್ತು 353 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ವಿನಂತಿಸಲಾಗಿದೆ, ಈ ಅಪರಾಧಗಳು ಗುರುತಿಸಬಹುದಾದ ಮತ್ತು ಗಂಭೀರ ಸ್ವರೂಪದ್ದಾಗಿವೆ ಎಂದಿದ್ದಾರೆ ವಕೀಲರು.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ಬುಧವಾರ ಮಮತಾ ಬ್ಯಾನರ್ಜಿ ಬಿಜೆಪಿಯ 12 ಗಂಟೆಗಳ ‘ಬಂಗಾಳ ಬಂದ್’ ಅನ್ನು ಖಂಡಿಸಿದ್ದು  ಇದು ಬಂಗಾಳವನ್ನು “ಕುಖ್ಯಾತಿ” ಮಾಡುವ ಪ್ರಯತ್ನ ಎಂದು ಕರೆದರು. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷವನ್ನು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಇದು (ಆಂದೋಲನ) ಬಾಂಗ್ಲಾದೇಶದ ಪ್ರತಿಭಟನೆಯನ್ನು ಹೋಲುತ್ತದೆ ಎಂದು ಕೆಲವರು ಭಾವಿಸುತ್ತಾರೆ. ನಾನು ಬಾಂಗ್ಲಾದೇಶವನ್ನು ಪ್ರೀತಿಸುತ್ತೇನೆ, ಅವರು ನಮ್ಮಂತೆಯೇ ಮಾತನಾಡುತ್ತಾರೆ (ಬಂಗಾಳಿ). ನಮ್ಮ ಸಂಸ್ಕೃತಿ ಕೂಡ ಅದೇ. ಆದಾಗ್ಯೂ, ಬಾಂಗ್ಲಾದೇಶವು ವಿಭಿನ್ನ ದೇಶವಾಗಿದೆ.

“ಮೋದಿ ಬಾಬು, ನೀವು ನಿಮ್ಮ ಜನರ ಮೂಲಕ ಬಂಗಾಳದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ. ಆದರೆ ನೆನಪಿಡಿ, ನೀವು ಬಂಗಾಳ ಸುಟ್ಟು ಹಾಕಿದರೆ, ಅಸ್ಸಾಂ, ಈಶಾನ್ಯ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ದೆಹಲಿ ಕೂಡಾ ಉರಿಯುತ್ತದೆ ಎಂದು ಮಮತಾ ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಮತಾ ಬ್ಯಾನರ್ಜಿಯವರ ಹೇಳಿಕೆಗಳ ವಿರುದ್ಧ ಗುಡುಗಿದ್ದು, ಬಂಗಾಳ ಸಿಎಂ ಭಾರತದಾದ್ಯಂತ ಅಶಾಂತಿ ಮತ್ತು ವಿಭಜಕ ರಾಜಕೀಯವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ದೀದಿ, ಅಸ್ಸಾಂಗೆ ಬೆದರಿಕೆ ಹಾಕಲು ನಿಮಗೆ ಎಷ್ಟು ಧೈರ್ಯ?”. “ನಮ್ಮ ಮೇಲೆ ಸಿಟ್ಟಿಗೇಳಬೇಡಿ. ನಿಮ್ಮ ವೈಫಲ್ಯದ ರಾಜಕಾರಣದಿಂದ ಭಾರತಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಬೇಡಿ. ವಿಭಜನೆಯ ಭಾಷೆ ಮಾತನಾಡುವುದು ನಿಮಗೆ ಸರಿಹೊಂದುವುದಿಲ್ಲ, ”ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ವೈದ್ಯರಿಗೆ ಯಾವತ್ತೂ ಬೆದರಿಕೆ ಹಾಕಿಲ್ಲ: ಬಿಜೆಪಿ ವಾಗ್ದಾಳಿ ನಡುವೆ ಮಮತಾ ಬ್ಯಾನರ್ಜಿ ಸ್ಪಷ್ಟನೆ

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ರಾಜ್ಯ ಸಚಿವ (MoS) ಸುಕಾಂತ ಮಜುಂದಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಬ್ಯಾನರ್ಜಿಯವರ ಹೇಳಿಕೆಗಳು “ರಾಜ್ಯದ ಅತ್ಯುನ್ನತ ಕಚೇರಿಯಿಂದ ಸೇಡಿನ ರಾಜಕೀಯದ ಸ್ಪಷ್ಟ ಅನುಮೋದನೆ” ಎಂದು ಖಂಡಿಸಿದ್ದಾರೆ. ಬಂಗಾಳ ಸುಟ್ಟುಹೋದರೆ, ಇತರ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಸೂಚಿಸುವ ಮೂಲಕ ಬ್ಯಾನರ್ಜಿ ದೇಶವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮಜುಂದಾರ್ ಆರೋಪಿಸಿದರು.

ಪಕ್ಷಪಾತದ ಧೋರಣೆಗಳನ್ನು ಮೀರಿ ಸಾಂವಿಧಾನಿಕವಾಗಿ ಬದ್ಧರಾಗಿರುವ ಮುಖ್ಯಮಂತ್ರಿಯೊಬ್ಬರು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡುವ ಇಂತಹ ಬೆದರಿಸುವ ಹೇಳಿಕೆಗಳನ್ನು ನೀಡುವುದು ಯೋಚಿಸಲಾಗದ ಸಂಗತಿ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಜುಂದಾರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Thu, 29 August 24

ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ