ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ತನಿಖೆಯನ್ನು ಬಿಜೆಪಿ ಹಳಿ ತಪ್ಪಿಸಿದೆ: ಮಮತಾ ಬ್ಯಾನರ್ಜಿ
ಬಂಗಾಳ ಸರ್ಕಾರವು 7 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ಬಯಸಿದೆ. ಆದರೆ ಸಿಬಿಐ ಇಲ್ಲಿಯವರೆಗೆ ಪ್ರಕರಣವನ್ನು ಭೇದಿಸಿಲ್ಲ. ಅತ್ಯಾಚಾರ-ವಿರೋಧಿ ಕಾನೂನಿನ ಕುರಿತು ಬಂಗಾಳ ಸರ್ಕಾರವು ರಾಜ್ಯ ವಿಧಾನಸಭೆಯಲ್ಲಿ ಹೊಸ ಮಸೂದೆಯನ್ನು ಅಂಗೀಕರಿಸಲಿದೆ ಎಂದು ಹೇಳಿದ ಮಮತಾ, ಹೊಸ ಕ್ರಿಮಿನಲ್ ಕೋಡ್ BNS ಅತ್ಯಾಚಾರದ ವಿರುದ್ಧ ಕಠಿಣ ಕ್ರಮಗಳನ್ನು ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಕೋಲ್ಕತ್ತಾ ಆಗಸ್ಟ್ 28: ಕೋಲ್ಕತ್ತಾ ವೈದ್ಯರ ಅತ್ಯಾಚಾರ ಮತ್ತು ಕೊಲೆಯಂತಹ (Kolkata doctor’s rape and murder) ಅಪರಾಧಗಳಿಗೆ ಒಂದೇ ಒಂದು ಸರಿಯಾದ ಶಿಕ್ಷೆ ಇದೆ. ಅದು ನೇಣುಗಂಬ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬುಧವಾರ ಹೇಳಿದ್ದಾರೆ. ಅದೇ ವೇಳೆ ಪ್ರತಿಪಕ್ಷ ಬಿಜೆಪಿಯು (BJP)ಭೀಕರ ಹತ್ಯೆಯ ತನಿಖೆಯನ್ನು ಹಳಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.
ಬಂಗಾಳ ಸರ್ಕಾರವು 7 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ಬಯಸಿದೆ. ಆದರೆ ಸಿಬಿಐ ಇಲ್ಲಿಯವರೆಗೆ ಪ್ರಕರಣವನ್ನು ಭೇದಿಸಿಲ್ಲ. ಅತ್ಯಾಚಾರ-ವಿರೋಧಿ ಕಾನೂನಿನ ಕುರಿತು ಬಂಗಾಳ ಸರ್ಕಾರವು ರಾಜ್ಯ ವಿಧಾನಸಭೆಯಲ್ಲಿ ಹೊಸ ಮಸೂದೆಯನ್ನು ಅಂಗೀಕರಿಸಲಿದೆ ಎಂದು ಹೇಳಿದ ಮಮತಾ, ಹೊಸ ಕ್ರಿಮಿನಲ್ ಕೋಡ್ BNS ಅತ್ಯಾಚಾರದ ವಿರುದ್ಧ ಕಠಿಣ ಕ್ರಮಗಳನ್ನು ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಅಪರಾಧದ ಬಗ್ಗೆ ತಪ್ಪು ಮಾಹಿತಿ ಹರಡಲು ಬಿಜೆಪಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದೆ ಎಂದು ಅವರು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರು ಟಿಎಂಸಿಯ ವಿದ್ಯಾರ್ಥಿ ಘಟಕವಾದ ಪಶ್ಚಿಮ ಬಂಗಾಳ ತೃಣಮೂಲ ಛತ್ರ ಪರಿಷತ್ತಿನ 27 ನೇ ಸಂಸ್ಥಾಪನಾ ದಿನದಂದು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಆಗಸ್ಟ್ 9 ರಂದು ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯರ ಕುಟುಂಬಕ್ಕೆ ಕೇಂದ್ರವು ನ್ಯಾಯವನ್ನು ಬಯಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ಪ್ರಕರಣದ ತನಿಖೆಯ ವೇಳೆ ಸಿಬಿಐ ಏನು ಕಂಡುಕೊಂಡಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದು, ಪ್ರತಿಭಟನೆ ನಿರತ ವೈದ್ಯರಿಗೆ ಕೆಲಸ ಪುನರಾರಂಭಿಸುವಂತೆ ಒತ್ತಾಯಿಸಿದರು.
“ನಾನು ಯಾವುದೇ ಪ್ರತಿಭಟನಾಕಾರರನ್ನು ಬಂಧಿಸಲು ಬಯಸುವುದಿಲ್ಲ. ನಾವು ಹೆಚ್ಚಿನ ವೈದ್ಯರು ಸೇವೆಗೆ ಬರಲು ಬಯಸುತ್ತೇವೆ”. ಬಿಜೆಪಿಯ ಬಂದ್ ಕರೆಯನ್ನು ಬಂಗಾಳ ಸರ್ಕಾರ ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
“ನಾವು ಈ ಬಂದ್‌ಗೆ ಬೆಂಬಲ ನೀಡುವುದಿಲ್ಲ… ಬಿಜೆಪಿಯು ಯುಪಿ, ಎಂಪಿ ಮತ್ತು ಮಣಿಪುರದ ಸಿಎಂಗಳ ರಾಜೀನಾಮೆಗೆ ಎಂದಿಗೂ ಒತ್ತಾಯಿಸಲಿಲ್ಲ. ನಾವು ನಿನ್ನೆಯ ಚಿತ್ರಗಳನ್ನು (ನಬನ್ನ ಅಭಿಯಾನ್ ರ್ಯಾಲಿ) ನೋಡಿದ್ದೇವೆ. ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ ಪೊಲೀಸರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ” ಎಂದು ಬಿಜೆಪಿ ಆಂದೋಲನದ ಸಂದರ್ಭದಲ್ಲಿ ಪೊಲೀಸರು ಬಲಪ್ರಯೋಗ ಮಾಡಿದ್ದನ್ನು ಉಲ್ಲೇಖಿಸಿದ ಮಮತಾ ಹೇಳಿದ್ದಾರೆ.
ಇದನ್ನೂ ಓದಿ: 12 ಗಂಟೆಗಳ ಬಾಂಗ್ಲಾ ಬಂದ್ ಕರೆ ನಡುವೆ ಪ್ರಿಯಾಂಗು ಪಾಂಡೆ ಮೇಲೆ ಗುಂಡು; ವಿಡಿಯೊ ಪೋಸ್ಟ್ ಮಾಡಿದ ಸುವೇಂದು ಅಧಿಕಾರಿ
“ನಾವು ಈ ದಿನವನ್ನು ಆರ್‌ಜಿ ಕರ್ ವೈದ್ಯರಿಗೆ ಅರ್ಪಿಸಿದ್ದೇವೆ. ನಮಗೆ ನ್ಯಾಯ ಬೇಕು ಆದರೆ ಬಿಜೆಪಿ ಇಂದು ಬಂದ್‌ಗೆ ಕರೆ ನೀಡಿದೆ. ಅವರಿಗೆ ನ್ಯಾಯ ಬೇಡ, ಅವರು ಬಂಗಾಳದ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ”. ತನಿಖೆಯ ಹಳಿತಪ್ಪಿಸಲು ಬಿಜೆಪಿ ಸಂಚು ನಡೆಸುತ್ತಿದೆ ಎಂದಿದ್ದಾರೆ ಮಮತಾ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ