ಹೇಡಿಗಳು ಹೋರಾಟದ ಭಾಗವಾಗಲು ಸಾಧ್ಯವಿಲ್ಲ, ಆರ್‌ಪಿಎನ್ ಸಿಂಗ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್
“ನಾನು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರ ನಿರ್ಮಾಣದ ಕೆಲಸದಿಂದ ಪ್ರಭಾವಿತನಾಗಿ ಬಿಜೆಪಿ ಸೇರಿದ್ದೇನೆ. ಬಿಜೆಪಿ ಕಾರ್ಯಕರ್ತನಾಗಿ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಆರ್‌ಪಿಎನ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.
ದೆಹಲಿ: ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್ (RPN Singh)ಅವರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ ಕೂಡಲೇ ಪ್ರತಿಕ್ರಿಯಿಸಿದ ಕಾಂಗ್ರೆಸ್ (Congress), ನಮ್ಮ ಪಕ್ಷ ಸೈದ್ಧಾಂತಿಕ ಹೋರಾಟವನ್ನು ನಡೆಸುತ್ತಿದೆ, ಇದರಲ್ಲಿ ಧೈರ್ಯವಿರುವವರು ಮಾತ್ರ ಮುಂದುವರಿಯಬಹುದು ಹೇಡಿಗಳಲ್ಲ ಎಂದು ಹೇಳಿದೆ. ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ಆರ್‌ಪಿಎನ್ ಸಿಂಗ್ ಅವರು ಪಕ್ಷದ ಸಿದ್ಧಾಂತಕ್ಕೆ “ಸಂಪೂರ್ಣವಾಗಿ ಬದ್ಧರಲ್ಲ” ಎಂದು ಹೇಳಿದರು ಮತ್ತು ಆದ್ದರಿಂದ ಅವರು ಬಿಜೆಪಿ ಸೇರಲು ಈ ಹೋರಾಟವನ್ನು ಮಧ್ಯದಲ್ಲಿಯೇ ತೊರೆದರು. ಮತ್ತೊಬ್ಬ ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನಾಟೆ ಮಾತನಾಡಿ, ಪ್ರಸ್ತುತ ಸರ್ಕಾರ ಮತ್ತು ಅದರ ಸಂಸ್ಥೆಗಳ ದುರಹಂಕಾರದ ವಿರುದ್ಧ ಕಾಂಗ್ರೆಸ್ ಹೋರಾಡುತ್ತಿದೆ. “ಸತ್ಯ ಮತ್ತು ಆದರ್ಶಗಳಿಗಾಗಿ ಈ ಯುದ್ಧವನ್ನು ಹೋರಾಡಲು, ಒಬ್ಬರಿಗೆ ಶಕ್ತಿ ಮತ್ತು ಧೈರ್ಯ ಬೇಕು ಮತ್ತು ಹೇಡಿಗಳು ಈ ಯುದ್ಧದಲ್ಲಿ ಹೋರಾಡಲು ಸಾಧ್ಯವಿಲ್ಲ” ಎಂದು ಹೇಳಿದರು. ಇದಕ್ಕೂ ಮೊದಲು ಸಿಂಗ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಈ ಸಮಯದಲ್ಲಿ ನಾವು ನಮ್ಮ ಮಹಾನ್ ಗಣರಾಜ್ಯದ ರಚನೆಯನ್ನು ಆಚರಿಸುತ್ತಿದ್ದೇವೆ, ನನ್ನ ರಾಜಕೀಯ ಪ್ರಯಾಣದಲ್ಲಿ ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇನೆ. ಜೈ ಹಿಂದ್” ಎಂದು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ನೀಡಿದ ರಾಜೀನಾಮೆ ಪತ್ರವನ್ನು ಸಿಂಗ್ ಟ್ವೀಟ್ ಮಾಡಿದ್ದರು.
ಪ್ರಧಾನಿ ಮೋದಿಯವರ ಕೆಲಸ ನನಗೆ ಬಿಜೆಪಿ ಸೇರಲು ಪ್ರೇರಣೆ: ಆರ್‌ಪಿಎನ್ ಸಿಂಗ್
“ನಾನು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರ ನಿರ್ಮಾಣದ ಕೆಲಸದಿಂದ ಪ್ರಭಾವಿತನಾಗಿ ಬಿಜೆಪಿ ಸೇರಿದ್ದೇನೆ. ಬಿಜೆಪಿ ಕಾರ್ಯಕರ್ತನಾಗಿ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಆರ್‌ಪಿಎನ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ. “ರಾಜ್ಯದಲ್ಲಿ ಸರ್ಕಾರ ರಚನೆಗೆ ನನ್ನ ಕೊಡುಗೆಯ ಬಗ್ಗೆ ಇಡೀ ಜಾರ್ಖಂಡ್‌ಗೆ ತಿಳಿದಿದೆ..ನಾನು ವೈಯಕ್ತಿಕ ಕಾಮೆಂಟ್‌ಗಳನ್ನು ಮಾಡುವುದಿಲ್ಲ” ಎಂದು ಅವರು ಜಾರ್ಖಂಡ್‌ನಲ್ಲಿ ಜೆಎಂಎಂ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದರು ಎಂಬ ಕಾಂಗ್ರೆಸ್ ಶಾಸಕರ ಆರೋಪಕ್ಕೆ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
#WATCH | Former Union Minister RPN Singh, who joined BJP from Congress today, responds to ‘UP me ka ba’ (what is there in UP) song; says, “There is an end to hooliganism.” pic.twitter.com/TxzWPsPZUL
— ANI (@ANI) January 25, 2022
ಕಾಂಗ್ರೆಸ್ ಪಕ್ಷದ ಜಾರ್ಖಂಡ್ ಉಸ್ತುವಾರಿಯಾಗಿ ಅವಿನಾಶ್ ಪಾಂಡೆ ನೇಮಕ
ಆರ್‌ಪಿಎನ್ ಸಿಂಗ್ ರಾಜೀನಾಮೆ ನಂತರ ತಕ್ಷಣದಿಂದ ಜಾರಿಗೆ ಬರುವಂತೆ ಅವಿನಾಶ್ ಪಾಂಡೆ ಅವರನ್ನು ಪಕ್ಷದ ಜಾರ್ಖಂಡ್ ಉಸ್ತುವಾರಿಯಾಗಿ ಕಾಂಗ್ರೆಸ್ ಮಂಗಳವಾರ ನೇಮಿಸಿದೆ.
Published On - 7:24 pm, Tue, 25 January 22